ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರದೀಪ್‌ಗೆ ಆರು ವಿಕೆಟ್: ರಾಬಿನ್ ಉತ್ತಪ್ಪ ಶತಕ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿ
Last Updated 21 ಫೆಬ್ರುವರಿ 2021, 7:48 IST
ಅಕ್ಷರ ಗಾತ್ರ

ಬೆಂಗಳೂರು: ಕನ್ನಡಿಗ ಟಿ. ಪ್ರದೀಪ್ (43ಕ್ಕೆ6) ಅಮೋಘ ಬೌಲಿಂಗ್ ಮತ್ತು ಮೃಣಾಲ್ ದೇವಧರ್ (ಅಜೇಯ 105) ಶತಕದ ಬಲದಿಂದ ರೈಲ್ವೆಸ್ ತಂಡವು ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಸಿ ಗುಂಪಿನಲ್ಲಿ ಜಯದ ಆರಂಭ ಮಾಡಿತು. ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರೈಲ್ವೆಸ್ ತಂಡವು 10 ವಿಕೆಟ್‌ಗಳಿಂದ ಬಿಹಾರ ವಿರುದ್ಧ ಜಯಿಸಿತು.

ರಾಬಿನ್ ಶತಕ: ಕೊಡಗಿನ ರಾಬಿನ್ ಉತ್ತಪ್ಪ (107; 85ಎ, 10ಬೌಂ, 4ಸಿ) ಭರ್ಜರಿ ಶತಕದ ಬಲದಿಂದ ಕೇರಳ ತಂಡವು 34 ರನ್‌ಗಳಿಂದ ಒಡಿಶಾ ಎದುರು ಜಯಿಸಿತು. ಆಲೂರು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೇರಳದ ಮಧ್ಯಮವೇಗಿ ಎಸ್. ಶ್ರೀಶಾಂತ್ ಎರಡು ವಿಕೆಟ್ ಗಳಿಸಿದರು.

ಇಶಾನ್ ಕಿಶನ್ ಅಬ್ಬರ: ಭಾರತ ಟಿ20 ತಂಡದಲ್ಲಿ ಪದಾರ್ಪಣೆಗೆ ಸಿದ್ಧವಾಗಿರುವ ಜಾರ್ಖಂಡ್ ತಂಡದ ಇಶಾನ್ ಕಿಶನ್ (178; 94ಎ, 19ಬೌಂ, 11ಸಿ) ಇಂದೋರ್‌ನಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯ ಮಧ್ಯಪ್ರದೇಶ ವಿರುದ್ಧ ಭರ್ಜರಿ ಶತಕ ಗಳಿಸಿದರು. ಇದರಿಂದಾಗಿ ಜಾರ್ಖಂಡ್ ತಂಡವು 324 ರನ್‌ಗಳ ಬೃಹತ್ ಜಯ ದಾಖಲಿಸಿತು.

ಬಿ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 422 ರನ್ ಗಳಿಸಿತು. ಅದಕ್ಕುತ್ತರವಾಗಿ ಮಧ್ಯಪ್ರದೇಶ ತಂಡವು 18.4 ಓವರ್‌ಗಳಲ್ಲಿ 98 ರನ್ ಗಳಿಸಿ ಪತನವಾಯಿತು. ಜಾರ್ಖಂಡ್‌ನ ವರುಣ್ ಆ್ಯರನ್ ಆರು ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಸಿ ಗುಂಪು (ಆಲೂರು): ಬಿಹಾರ: 45.5 ಓವರ್‌ಗಳಲ್ಲಿ 189 (ಶಬ್ಬೀರ್ ಖಾನ್ 46, ಅನುಜ್ ರಾಜ್ 72, ಅಮಿತ್ ಮಿಶ್ರಾ 30ಕ್ಕೆ3, ಟಿ. ಪ್ರದೀಪ್ 43ಕ್ಕೆ6), ರೈಲ್ವೆಸ್: 29 ಓವರ್‌ಗಳಲ್ಲಿ 190 (ಮೃಣಾಲ್ ದೇವಧರ್ ಔಟಾಗದೆ 105, ಪ್ರಥಮ್ ಸಿಂಗ್ ಔಟಾಗದೆ 72) ಫಲಿತಾಂಶ: ರೈಲ್ವೆಸ್ ತಂಡಕ್ಕೆ 10 ವಿಕೆಟ್‌ಗಳ ಜಯ.

ಒಡಿಶಾ: 45 ಓವರ್‌ಗಳಲ್ಲಿ 8ಕ್ಕೆ258 (ಗೌರವ್ ಚೌಧರಿ 57, ಸಂದೀಪ್ ಪಟ್ನಾಯಕ್ 66, ಕಾರ್ತಿಕ್ ಬಿಸ್ವಾಲ್ 45, ದೇವವ್ರತ್ ಪ್ರಧಾನ್ 27, ಎಸ್. ಶ್ರೀಶಾಂತ್ 41ಕ್ಕೆ2, ನಿಧೀಶ್ 43ಕ್ಕೆ2, ಜಲಜ್ ಸಕ್ಸೆನಾ 43ಕ್ಕೆ2) ಕೇರಳ: 38.2 ಓವರ್‌ಗಳಲ್ಲಿ 4ಕ್ಕೆ233 (ರಾಬಿನ್ ಉತ್ತಪ್ಪ 107, ವಿಷ್ಣು ವಿನೋದ್ 28, ಸಚಿನ್ ಬೇಬಿ 40, ವತ್ಸಲ್ ಗೋವಿಂದ ಔಟಾಗದೆ 29, ಮೊಹಮ್ಮದ್ ಅಜರುದ್ದೀನ್ ಔಟಾಗದೆ 23) ಫಲಿತಾಂಶ: ಕೇರಳ ತಂಡಕ್ಕೆ 34 ರನ್‌ಗಳ ಜಯ (ವಿಜೆಡಿ ನಿಯಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT