ಬೆಂಗಳೂರು: ಸ್ಮೃತಿ ಮಂದಾನ ಅವರು ಮಹಿಳಾ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ ಬೆಂಗಳೂರು (ಆರ್‌ಸಿಬಿ) ತಂಡವನ್ನು ಮುನ್ನಡೆಸಲಿದ್ದಾರೆ.
ಇತ್ತೀಚೆಗೆ ನಡೆದ ಆಟಗಾರ್ತಿಯರ ಹರಾಜಿನಲ್ಲಿ ಆರ್‌ಸಿಬಿ ತಂಡ ₹ 3.40 ಕೋಟಿ ಮೊತ್ತಕ್ಕೆ ಸ್ಮೃತಿ ಅವರನ್ನು ತನ್ನದಾಗಿಸಿಕೊಂಡಿತ್ತು. ಎಡಗೈ ಬ್ಯಾಟರ್ ಆಗಿರುವ ಅವರು ಭಾರತ ತಂಡದ ಉಪನಾಯಕಿಯೂ ಹೌದು.
ಆರ್‌ಸಿಬಿಯ ಐಪಿಎಲ್ ತಂಡದ ಆಟಗಾರ ವಿರಾಟ್ ಕೊಹ್ಲಿ ಮತ್ತು ನಾಯಕ ಫಫ್ ಡುಪ್ಲೆಸಿ ಅವರು ವಿಡಿಯೊ ಸಂದೇಶದ ಮೂಲಕ ಸ್ಮೃತಿ ಅವರ ಹೆಸರನ್ನು ಘೋಷಿಸಿ, ಮಹಿಳಾ ತಂಡಕ್ಕೆ ಶುಭಹಾರೈಸಿದ್ದಾರೆ.
‘ನಾವು ನಾಯಕತ್ವದ ಜವಾಬ್ದಾರಿಯನ್ನು ಸ್ಮೃತಿ ಅವರಿಗೆ ನೀಡಿದ್ದೇವೆ. ಅವರು ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವ ವಿಶ್ವಾಸವಿದೆ’ ಎಂದು ಆರ್‌ಸಿಬಿ ಫ್ರಾಂಚೈಸ್ ಚೇರ್‌ಮನ್ ಪ್ರಥಮೇಶ್ ಮಿಶ್ರಾ ಹೇಳಿದ್ದಾರೆ.
113 ಅಂತರರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ ಸ್ಮೃತಿ, 27.15ರ ಸರಾಸರಿಯಲ್ಲಿ 2,661 ರನ್ ಕಲೆಹಾಕಿದ್ದು, 123.19 ಸ್ಟ್ರೈಕ್‌ರೇಟ್ ಹೊಂದಿದ್ದಾರೆ. ಅವರು 11 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ.
ಇವನ್ನೂ ಒದಿ..
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.