ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಡ್ರೆಡ್‌ ಡ್ರಾಫ್ಟ್‌: ಸ್ಮೃತಿ, ರಿಚಾಗೆ ಸ್ಥಾನ

Published 21 ಮಾರ್ಚ್ 2024, 15:43 IST
Last Updated 21 ಮಾರ್ಚ್ 2024, 15:43 IST
ಅಕ್ಷರ ಗಾತ್ರ

ಲಂಡನ್‌: ಮಹಿಳಾ ಪ್ರೀಮಿಯರ್‌ ಲೀಗ್‌ನ ಎರಡನೇ ಆವೃತ್ತಿಯ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕಿ ಸ್ಮೃತಿ ಮಂದಾನ ಮತ್ತು ವಿಕೆಟ್‌ ಕೀಪರ್‌ ರಿಚಾ ಘೋಷ್‌ ಅವರು ಹಂಡ್ರೆಡ್ ಡ್ರಾಫ್ಟ್‌ನಲ್ಲಿ ಸ್ಥಾನ ಪಡೆದ ಇಬ್ಬರೇ ಭಾರತೀಯ ಆಟಗಾರ್ತಿಯರಾಗಿದ್ದಾರೆ.

ಮಂದಾನ ಅವರು ಸದರ್ನ್ ಬ್ರೇವ್ ಹಾಗೂ ಅವರ ಸಹ ಆಟಗಾರ್ತಿ ರಿಚಾ ಅವರು ಬರ್ಮಿಂಗ್‌ಹ್ಯಾಮ್ ಫೀನಿಕ್ಸ್ ತಂಡಗಳ ಪಾಲಾಗಿದ್ದಾರೆ.

ಎಡಗೈ ಆಟಗಾರ್ತಿ ಮಂದಾನ ಡಬ್ಲ್ಯುಪಿಎಲ್‌ನಲ್ಲಿ 10 ಪಂದ್ಯಗಳಿಂದ ಎರಡು ಅರ್ಧಶತಕಗಳೊಂದಿಗೆ 300 ರನ್ ಗಳಿಸಿದ್ದರು. ಫಿನಿಶರ್ ಪಾತ್ರವನ್ನು ಹೆಚ್ಚಾಗಿ ನಿರ್ವಹಿಸಿದ್ದ ರಿಚಾ ಅವರು 10 ಪಂದ್ಯಗಳಿಂದ ಎರಡು ಅರ್ಧ ಶತಕದೊಂದಿಗೆ  257 ರನ್ ಗಳಿಸಿದ್ದರು.

ಮಂದಾನ ಅವರು 2021ರಿಂದಲೇ ಸದರ್ನ್‌ ತಂಡದ ಭಾಗವಾಗಿದ್ದಾರೆ. ಈ ಮೊದಲು ಲಂಡನ್ ಸ್ಪಿರಿಟ್ ತಂಡದ ಜರ್ಸಿ ಧರಿಸಿದ್ದ ರಿಚಾ, ಈ ಬಾರಿ ಫೀನಿಕ್ಸ್‌ ತಂಡವನ್ನು ಸೇರಿಕೊಂಡಿದ್ದಾರೆ.

ಹಂಡ್ರೆಡ್ ಡ್ರಾಫ್ಟ್‌ನಲ್ಲಿ ಭಾರತದ 17 ಆಟಗಾರ್ತಿಯರು ನೋಂದಾಯಿಸಿದ್ದರು. ಅವರಲ್ಲಿ ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್, ದೀಪ್ತಿ ಶರ್ಮಾ, ಜೆಮಿಮಾ ರಾಡ್ರಿಗಸ್ ಮತ್ತು ಶ್ರೇಯಾಂಕಾ ಪಾಟೀಲ್ ಅವರಿಗೆ ಯಾವ ತಂಡದಲ್ಲೂ ಸ್ಥಾನ ಸಿಗಲಿಲ್ಲ.

ಆರ್‌ಸಿಬಿ ಪರ ಆಡಿದ ಕನ್ನಡತಿ ಶ್ರೇಯಾಂಕಾ, ಈ ಆವೃತ್ತಿಯ ಡಬ್ಲ್ಯುಪಿಎಲ್‌ನಲ್ಲಿ ಎಂಟು ಪಂದ್ಯಗಳಿಂದ 13 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು.

ವೈಲ್ಡ್ ಕಾರ್ಡ್‌ಗಳ ಮೂಲಕ ತಂಡವೊಂದಕ್ಕೆ ತಲಾ ಒಬ್ಬ ವಿದೇಶಿ ಆಟಗಾರನನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದ್ದು, ಹಂಡ್ರೆಡ್‌ ಡ್ರಾಪ್ಟ್‌ಗೆ ಸೇರಲು ಇನ್ನೂ ಹಲವರಿಗೆ ಅವಕಾಶವಿದೆ.

ಸ್ಮೃತಿ ಮಂದಾನ
ಸ್ಮೃತಿ ಮಂದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT