ನವದೆಹಲಿ: ಸಂಗೀತ ಸಂಯೋಜಕ ಪಲಾಶ್ ಮುಚ್ಚಲ್ ಜೊತೆಗಿನ ವಿವಾಹ ಹಠಾತ್ ನಿಂತುಹೋದ ಕುರಿತಂತೆ ಭಾರತದ ಮಹಿಳೆಯರ ಕ್ರಿಕೆಟ್ ತಂಡದ ಉಪ ನಾಯಕಿ ಸ್ಮೃತಿ ಮಂದಾನ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ಎರಡೂ ಕುಟುಂಬಗಳ ಖಾಸಗಿತನವನ್ನು ಗೌರವಿಸುವಂತೆ ಮಾಧ್ಯಮಗಳು ಮತ್ತು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಂದಾನ, ಭಾರತದ ಖ್ಯಾತ ಕ್ರಿಕೆಟ್ ಆಟಗಾರ್ತಿಯಾಗಿದ್ದು, ಅವರ ವೈಯಕ್ತಿಕ ಜೀವನದ ಕುರಿತಂತೆ ವದಂತಿಗಳು ಹೆಚ್ಚಾಗುತ್ತಿದ್ದಂತೆ ಸಾಮಾಜಿಕ ಮಧ್ಯಮದಲ್ಲಿ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

‘ನನ್ನ ಮದುವೆ ರದ್ದಾಗಿದೆ ಎಂದು ಸ್ಪಷ್ಟಪಡಿಸುತ್ತಿದ್ದೇನೆ. ಈ ವಿಷಯವನ್ನು ಇಲ್ಲಿಯೇ ಮುಕ್ತಾಯ ಮಾಡಲು ಇಚ್ಛಿಸುತ್ತೇನೆ. ನೀವೂ ಈ ವಿಷಯವನ್ನು ಇಲ್ಲಿಗೇ ಬಿಟ್ಟುಬಿಡಿ ಎಂಬುದಾಗಿ ಮನವಿ ಮಾಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ನವೆಂಬರ್ 23ರಂದು ಮುಚ್ಚಲ್ ಜೊತೆಗೆ ಸ್ಮೃತಿ ಮದುವೆ ನಿಶ್ಚಯವಾಗಿತ್ತು. ಮದುವೆ ಪೂರ್ವ ಕಾರ್ಯಕ್ರಮಗಳೂ ಅದ್ಧೂರಿಯಾಗಿ ನಡೆದಿದ್ದವು. ಆದರೆ, ಇದ್ದಕ್ಕಿದ್ದಂತೆ ಮದುವೆಯನ್ನು ರದ್ದು ಮಾಡಲಾಗಿತ್ತು. ಸ್ಮೃತಿ ತಂದೆಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಬಂದಿತ್ತು. ಬಳಿಕ, ಮುಚ್ಚಲ್ ಸಹ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು.

‘ಕಳೆದ ಕೆಲವು ವಾರಗಳಿಂದ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿವೆ. ಹಾಗಾಗಿ, ಈ ಸಮಯದಲ್ಲಿ ಮಾತನಾಡುವುದು ಮುಖ್ಯ ಎಂದು ನಾನು ಭಾವಿಸುತ್ತೇನೆ’ಎಂದು ಅವರು ಇನ್ಸ್ಟಾಗ್ರಾಂ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

‘ಅಭಿಮಾನಿಗಳು ಮತ್ತು ಸಾರ್ವಜನಿಕರು ಎರಡೂ ಕುಟುಂಬಗಳ ಗೋಪ್ಯತೆಯನ್ನು ಗೌರವಿಸಬೇಕು ಹಾಗೂ ಇಲ್ಲಿಂದ ಮುಂದುವರಿಯಲು ಅವಕಾಶ ನೀಡಬೇಕು’ಎಂದು ಮನವಿ ಮಾಡಿದ್ದಾರೆ.

ಮುಂಬರುವ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಗೆ ತಯಾರಿ ನಡೆಸುತ್ತಿರುವ ಮಂದಾನ, ತಮ್ಮ ಗಮನವು ಕ್ರಿಕೆಟ್ನ ಮೇಲೆ ದೃಢವಾಗಿ ನೆಟ್ಟಿದೆ ಎಂದು ಹೇಳಿದ್ದಾರೆ.

ನಮ್ಮೆಲ್ಲರಿಗೂ ಉನ್ನತ ಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುವ ಒಂದು ಉನ್ನತ ಉದ್ದೇಶವಿದೆ ಎಂದು ನಾನು ನಂಬುತ್ತೇನೆ. ಸಾಧ್ಯವಾದಷ್ಟು ಕಾಲ ಭಾರತಕ್ಕಾಗಿ ಆಟವಾಡುವುದು ಮತ್ತು ಟ್ರೋಫಿ ಗೆಲ್ಲುವುದನ್ನು ಮುಂದುವರಿಸುತ್ತೇನೆ ಎಂದು ಅವರು ಹೇಳಿದ್ದಾರೆ.

'ಎರಡೂ ಕುಟುಂಬಗಳು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿವೆ ಎಂದು ನಾನು ಭಾವಿಸುತ್ತೇನೆ. ಈಗತಾನೇ ನಾನು ಹೇಳಿದ ಹಾಗೆ, ಈ ಸಮಯದಲ್ಲಿ ನಾವು ಧನಾತ್ಮಕತೆಯನ್ನು ನಂಬೋಣ. ನಾವು ಧನಾತ್ಮಕತೆಯನ್ನು ಹಂಚಲು ಬಯಸುತ್ತಿದ್ದೇವೆ. ನಾವೂ ಸಹ ಗಟ್ಟಿ ಮನಸ್ಸು ಮಾಡಿಕೊಂಡಿರಲು ಪ್ರಯತ್ನಿಸುತ್ತಿದ್ದೇವೆ. ಇವನ್ನೆಲ್ಲ ಮರೆತು, ಮುಂದುವರಿಯುವ ಸಮಯವಿದು’ ಎಂದು ಹೇಳಿದ್ದಾರೆ.

28 ವರ್ಷದ ಸ್ಮೃತಿ ಮಂದಾನ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಮುಖ ಆಟಗಾರ್ತಿಯಾಗಿದ್ದಾರೆ. ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಕ್ರಿಕೆಟ್ನ ಎಲ್ಲ ಮಾದರಿಗಳಲ್ಲೂ ಉತ್ತಮ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಐಪಿಎಲ್ ಪಂದ್ಯಾವಳಿಯಲ್ಲಿ ಆರ್ಸಿಬಿ ತಂಡದ ನಾಯಕಿಯಾಗಿರುವ ಅವರು, ತಂಡಕ್ಕೆ ಚೊಚ್ಚಲ ಟ್ರೋಫಿ ತಂದುಕೊಟ್ಟಿದ್ದರು.
.ಸ್ಮೃತಿ ಮಂದಾನ–ಪಾಲಾಶ್ ಮುಚ್ಛಲ್ ಮದುವೆ ದಿನಾಂಕ ಮುಂದೂಡಿಕೆ.ಸ್ಮೃತಿ ಮಂದಾನ ಹೊಸ ಇನ್ಸ್ಟಾಗ್ರಾಮ್ ಪೋಸ್ಟ್; ನಿಶ್ಚಿತಾರ್ಥದ ಉಂಗುರ ಮಾಯ?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.