ಬೆಂಗಳೂರು: ಸಂಗೀತ ನಿರ್ದೇಶಕ ಪಲಾಶ್ ಮುಚ್ಛಲ್ ಅವರ ಜೊತೆಗಿನ ವಿವಾಹ ಮುಂದೂಡಿಕೆಯಾದ ಬಳಿಕ ಭಾರತ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಸ್ಮೃತಿ ಮಂದಾನ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಮೊದಲ ಬಾರಿ ಪೋಸ್ಟ್ ಹಾಕಿದ್ದಾರೆ.

ಇಂದು (ಶುಕ್ರವಾರ) ಮಂದಾನ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಪ್ರಮುಖ ಟೂತ್ಪೇಸ್ಟ್ ಬ್ರ್ಯಾಂಡ್ವೊಂದರ ಜಾಹೀರಾತಿಗೆ ಸಂಬಂಧಪಟ್ಟ ವಿಷಯ ಇದಾಗಿದೆ.
.ಯಾರ ದೃಷ್ಟಿಯೂ ಬೀಳದಿರಲಿ! ಒಂದೇ ರೀತಿಯ ಎಮೋಜಿ ಹಂಚಿಕೊಂಡ ಮಂದಾನ–ಪಲಾಶ್.ಸ್ಮೃತಿ ಮಂದಾನ ತಂದೆ ಆಸ್ಪತ್ರೆಯಿಂದ ಡಿಸ್ಚಾರ್ಜ್: ಮರು ನಿಗದಿಯಾಗುತ್ತಾ ವಿವಾಹ?.
ಆದರೆ ಈ ಜಾಹೀರಾತನ್ನು ನಿಶ್ಚಿತಾರ್ಥದ ಮೊದಲು ಅಥವಾ ನಂತರ ಚಿತ್ರೀಕರಿಸಲಾಗಿದೆಯೇ ಎಂಬುದು ತಿಳಿದು ಬಂದಿಲ್ಲ.

ಈ ನಡುವೆ ಮಂದಾನ ಅವರ ಬೆರಳಿನಲ್ಲಿ ನಿಶ್ಚಿತಾರ್ಥದ ಉಂಗುರ ಕಾಣಿಸದಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚಗೆ ಗ್ರಾಸವಾಗಿದೆ.

ಇತ್ತೀಚೆಗೆ ಪಲಾಶ್ ಮುಚ್ಛಲ್ ಅವರೊಂದಿಗಿನ ವಿವಾಹಕ್ಕೆ ಸಂಬಂಧಿಸಿದ ಎಲ್ಲ ಪೋಸ್ಟ್ಗಳನ್ನು ಮಂದಾನ ಅಳಿಸಿ ಹಾಕಿದ್ದರು. ಇದು ಅವರಿಬ್ಬರ ನಡುವಣ ಸಂಬಂಧ ಹಳಸಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಈ ಸಂಬಂಧ ಯಾವುದೇ ಅಧಿಕೃತ ಸ್ಪಷ್ಟನೆ ಬಂದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.