ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಬ್ಯಾಟರ್ ಸ್ಮೃತಿ ಮಂದಾನ ಅವರ ತಂದೆ ಶ್ರೀನಿವಾಸ್ ಅವರು, ಸ್ಮೃತಿ ಅವರ ವಿವಾಹ ಕಾರ್ಯಕ್ರಮದಲ್ಲಿ ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸದ್ಯ, ಅವರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಬಂದಿದ್ದಾರೆ ಎಂದು ವರದಿಯಾಗಿದೆ.

ಸ್ಮೃತಿ ಮಂದಾನಾ ಮತ್ತು ಸಂಗೀತಗಾರ ಪಲಾಶ್ ಮುಚ್ಚಲ್ ಅವರ ವಿವಾಹವು ಭಾನುವಾರ (ನ. 23) ನಡೆಯಬೇಕಿತ್ತು. ವಿವಾಹದ ಸಂದರ್ಭದಲ್ಲಿ ಸ್ಮೃತಿ ಅವರ ತಂದೆ ಶ್ರೀನಿವಾಸ್ ಅವರಿಗೆ ಹಠಾತ್ ಎದೆನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೀಗಾಗಿ ವಿವಾಹವನ್ನು ಮುಂದೂಡಲಾಗಿತ್ತು. ಇದೀಗ ಶ್ರೀನಿವಾಸ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಆರಂಭದಲ್ಲಿ ಸ್ಮೃತಿ ಅವರ ತಂದೆ ಆಸ್ಪತ್ರೆಗೆ ದಾಖಲಾಗಿದ್ದರಿಂದ ವಿವಾಹ ಮುಂದೂಡಲಾಗಿದೆ ಎಂದು ಹೇಳಲಾಗಿತ್ತು. ನಂತರ ಪಲಾಶ್ ಕೂಡ ಆಸ್ಪತ್ರೆಗೆ ದಾಖಲಾಗಿರುವುದಾಗಿ ವರದಿಯಾಯಿತು.
.ಹೊಸ ಪೋಟೊ ಶೂಟ್ನಲ್ಲಿ ಮಿಂಚಿದ ನಟಿ ಅನುಪಮಾ ಪರಮೇಶ್ವರನ್.
ಸಾಮಾಜಿಕ ಮಾಧ್ಯಮದಲ್ಲಿ ಪಲಾಶ್ ಮುಚ್ಛಲ್ ಅವರು ಬೇರೊಂದು ಯುವತಿಯ ಜತೆ ಸಂಭಾಷಣೆ ನಡೆಸಿದ್ದಾರೆ ಎನ್ನಲಾದ ಸ್ಕ್ರೀನ್ಶಾಟ್ಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ.

ಪಲಾಶ್ ಮುಚ್ಛಲ್ ಜತೆ ವಿವಾಹ ಮೂಂದೂಡಿದ ಬೆನ್ನಲ್ಲೇ ಮುಚ್ಛಲ್ ಅವರ ಜತೆಗಿನ ವಿವಾಹ ಪೂರ್ವ ಕಾರ್ಯಕ್ರಮಗಳ ಎಲ್ಲಾ ಪೋಸ್ಟ್ಗಳನ್ನು, ವಿಡಿಯೊಗಳನ್ನು ಸಾಮಾಜಿಕ ಮಾಧ್ಯಮದಿಂದ ಅಳಿಸಿ ಹಾಕಿದ್ದಾರೆ.

ಸ್ಮೃತಿ ಅವರು ಮದುವೆಯ ಪೋಸ್ಟ್ಗಳನ್ನೂ ಅಳಿಸಿದ್ದರಿಂದ ಹಲವು ಊಹಾಪೋಹಾಗಳಿಗೆ ಕಾರಣವಾಗಿತ್ತು.

ಪಲಾಶ್ ಹಾಗೂ ಸ್ಮೃತಿ ಮಂದಾನ ಅವರ ವಿವಾಹ ಮುಂದೂಡಲಾಗಿದೆ ಎಂದು ಪಲಾಶ್ ಸಹೋದರಿ ಮಾಹಿತಿ ನೀಡಿದ್ದರು. ಇದೀಗ ಮಂದಾನ ಅವರ ತಂದೆ ಆಸ್ಪತ್ರೆಯಿಂದ ಬಿಡುಡೆಗೊಂಡು ಮನೆಗೆ ಮರಳಿದ್ದು, ಮದುವೆ ದಿನಾಂಕದ ಮರು ನಿಗದಿಯ ಕುರಿತು ಕುಟುಂಬಸ್ಥರು ಅಧಿಕೃತ ಮಾಹಿತಿ ನೀಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.