ದಿನ ಭವಿಷ್ಯ: ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸೂಚನೆಗಳು ಕಾಣಿಸಲಿವೆ..
Published 4 ಡಿಸೆಂಬರ್ 2025, 23:30 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಸ್ನೇಹಿತನಿಂದಾಗಿ ನಡೆದ ಘಟನೆಯು ಮನಸ್ಸಿನಲ್ಲಿ ಮಹತ್ತರ ಬದಲಾವಣೆ ಉಂಟುಮಾಡುತ್ತದೆ. ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗುತ್ತದೆ.
ವೃಷಭ
ಹೊಸ ಯೋಜನೆಗಳನ್ನು ಆರಂಭಿಸುವ ಮುನ್ನ ದೀರ್ಘಾಲೋಚನೆ ಮಾಡುವುದು ಉತ್ತಮ. ಉದ್ಯೋಗದಲ್ಲಿ ಬದಲಾವಣೆ ಬಯಸಿದರೆ ಸ್ವಲ್ಪ ದಿನಗಳ ಕಾಲ ಕಾಯುವುದು ಅವಶ್ಯ.
ಮಿಥುನ
ದೊಡ್ಡ ಧಾರ್ಮಿಕ ಕಾರ್ಯಕ್ರಮದಲ್ಲಿ ನಿಭಾಯಿಸಿದ ಪಾತ್ರ ಸಂತೃಪ್ತರನ್ನಾಗಿಸುತ್ತದೆ. ಮಗಳ ಮದುವೆಯ ಮಾತುಕತೆಯಲ್ಲಿ ಮಾತನಾಡುವಾಗ ಬುದ್ಧಿವಂತಿಕೆಯಿಂದ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಿರಿ.
ಕರ್ಕಾಟಕ
ಸಹೋದರನ ವ್ಯಾಪಾರ ವಹಿವಾಟುಗಳ ವಿಚಾರಗಳಿಗೆ ಸಹಕಾರವಾಗುವ ಸಲಹೆಗಳನ್ನು ತಿಳಿಹೇಳಬಹುದು. ತೊಂದರೆಗಳೇ ಬರುವ ಕಾರಣ ಕಚೇರಿಯಲ್ಲಿ ಆಯಾಸಗೊಳ್ಳುವಿರಿ.
ಸಿಂಹ
ತಾರುಣ್ಯದಲ್ಲಿದ್ದಾಗ ಮಾಡಿದ ಬುದ್ಧಿವಂತಿಕೆ ಕೆಲಸವು ವೃದ್ಧಾಪ್ಯದಲ್ಲಿ ಅನುಕೂಲವಾಗಲಿದೆ. ಬಟ್ಟೆಯ ವ್ಯಾಪಾರ ನಡೆಸುವವರು ಉದ್ಯೋಗದಲ್ಲಿ ಬಂಡವಾಳ ಹೂಡುವಂತಹ ಕೆಲಸವನ್ನು ಮಾಡುವುದು ಸಮಂಜಸವಲ್ಲ.
ಕನ್ಯಾ
ಅಧಿಕ ತಿರುಗಾಟಗಳಿಂದ ದೇಹಾಯಾಸ ಇದ್ದರೂ ಆದಾಯಕ್ಕೆ ಕೊರತೆ ಇರುವುದಿಲ್ಲ. ವ್ಯವಹಾರಿಕವಾಗಿ ಇರುವ ಹಳೆಯ ಬಾಕಿ ಮೊತ್ತ ಕೈ ಸೇರಲಿದೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸೂಚನೆಗಳು ಕಾಣಿಸಲಿವೆ.
ತುಲಾ
ವ್ಯವಹಾರದಲ್ಲಿ ಹೊರರಾಜ್ಯದ ಮುಖ್ಯ ವ್ಯಕ್ತಿಯೊಬ್ಬರ ಪರಿಚಯ ವ್ಯಾಪಾರ ಅಭಿವೃದ್ಧಿಯ ದಾರಿ ಹಿಡಿಯಲು ಕಾರಣವಾಗುವುದು. ರಾಜಕೀಯ ರಂಗದವರಿಗೆ ವರಿಷ್ಠರೊಂದಿಗಿನ ಮಾತುಕತೆ ಅನುಕೂಲ ಉಂಟುಮಾಡಲಿದೆ.
ವೃಶ್ಚಿಕ
ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಉದಾಸೀನತೆ ತೋರಿಬಂದರೂ ಬುದ್ಧಿಬಲದಿಂದ ಮತ್ತು ಶ್ರದ್ಧೆಯಿಂದ ಆಲಿಸುವುದರಿಂದ ಫಲಿತಾಂಶಕ್ಕೆ ಚ್ಯುತಿ ಬರುವುದಿಲ್ಲ. ಕೌಟುಂಬಿಕ ವೈಮನಸ್ಸನ್ನು ಜಾಣ್ಮೆಯಿಂದ ಬಗೆಹರಿಸಿಕೊಳ್ಳಿ.
ಧನು
ಮೇಲಿರುವ ಜವಾಬ್ದಾರಿಗಳನ್ನು ಇತರರ ಮೇಲೆ ದಾಟಿಸುವಂಥ ಪ್ರಯತ್ನಗಳನ್ನು ಮಾಡಲು ಹೋಗದಿರಿ. ಸಿಹಿ ಖಾದ್ಯಗಳನ್ನು ಸೇವಿಸುವ ಯೋಗ ಇದೆ. ದಾಂಪತ್ಯ ಜೀವನ ಸುಖಮಯವಾಗಿರುವುದು.
ಮಕರ
ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ಬಂಡವಾಳ ತೊಡಗಿಸುವುದು ಸರಿಯಲ್ಲ. ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವುದನ್ನು ಅಭ್ಯಾಸ ಮಾಡಿಕೊಳ್ಳಿರಿ. ಪದವೀಧರರಿಗೆ ಸನ್ಮಾನದಂತಹ ಗೌರವ ದೊರಕಲಿದೆ.
ಕುಂಭ
ಹಿಂದೊದು ದಿನ ಬದುಕಿನಲ್ಲಿ ನಡೆದ ಅತ್ಯಂತ ಮುಖ್ಯಘಟ್ಟವನ್ನು ಕಾರಣಾಂತರದಿಂದ ಸ್ಮರಣೆ ಮಾಡುವಿರಿ. ಮಾನಸಿಕ ನೋವನ್ನು ಮರೆಯಲು ಪ್ರೀತಿಪಾತ್ರರೊಂದಿಗೆ ಮಾತನಾಡಿ. ವ್ಯವಹಾರವು ಲಾಭದ ಪಥದಲ್ಲಿರುವುದು.
ಮೀನ
ಆರೋಪದ ಮಾತುಗಳು ಒಬ್ಬರ ಮೇಲೆ ಯಾವ ರೀತಿಯ ಪರಿಣಾಮಗಳನ್ನು ಬೀರಬಹುದು ಎಂಬುದಕ್ಕೆ ಸಂಬಂಧಿಗಳ ಜೀವನ ಸಾಕ್ಷಿಯಾಗಲಿದೆ. ಕಷ್ಟವಾದ ಕೆಲಸಗಳನ್ನು ಸರಳೀಕರಿಸಿಕೊಳ್ಳುವ ಸರ್ವಪ್ರಯತ್ನ ನಡೆಸುವಿರಿ.