ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

BAN vs SL: ಗೆಲುವಿನತ್ತ ಲಂಕಾ ಓಟ

ಬಾಂಗ್ಲಾ ವಿರುದ್ಧ ಅಂತಿಮ ಟೆಸ್ಟ್‌
Published 2 ಏಪ್ರಿಲ್ 2024, 13:00 IST
Last Updated 2 ಏಪ್ರಿಲ್ 2024, 13:00 IST
ಅಕ್ಷರ ಗಾತ್ರ

ಚಿತ್ತಗಾಂಗ್‌ (ಬಾಂಗ್ಲಾದೇಶ), : ಬೌಲರ್‌ಗಳ ಸಂಘಟಿತ ಪ್ರದರ್ಶನದಿಂದ ಶ್ರೀಲಂಕಾ ತಂಡ, ಎರಡನೇ ಹಾಗೂ ಅಂತಿಮ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲೂ ಬಾಂಗ್ಲಾದೇಶ ವಿರುದ್ಧ ಜಯದ ಹಾದಿಯಲ್ಲಿ ದಿಟ್ಟ ಹೆಜ್ಜೆಯಿಟ್ಟಿದೆ.

ಗೆಲುವಿಗೆ 511 ರನ್‌ಗಳ ಗುರಿ ಎದುರಿಸಿರುವ ಆತಿಥೇಯರು ನಾಲ್ಕನೇ ದಿನವಾದ ಮಂಗಳವಾರ ಆಟ ಮುಗಿದಾಗ 7 ವಿಕೆಟ್‌ಗೆ 268 ರನ್ ಗಳಿಸಿದ್ದರು. ಗಗನಕುಸುಮವಾಗಿರುವ ಗೆಲುವಿಗೆ ಇನ್ನೂ 243 ರನ್ ದೂರ ಸಾಗಬೇಕಾಗಿದೆ.

ಪ್ರಭಾತ್ ಜಯಸೂರ್ಯ, ಲಾಹಿರು ಕುಮಾರ ಮತ್ತು ಕಮಿಂದು ಮೆಂಡಿಸ್ ತಲಾ ಎರಡು ವಿಕೆಟ್‌ ಪಡೆದರು. ಬಾಂಗ್ಲಾ ಪರ ಮೊಮಿನುಲ್ ಹಖ್ ಅರ್ಧ ಶತಕ (50, 56 ಎಸೆತ) ಗಳಿಸಿದರೆ, ಮೆಹಿದಿ ಹಸನ್ ಮಿರಾಜ್ 44 ರನ್ (49 ಎಸೆತ) ಗಳಿಸಿ ಅಜೇಯರಾಗುಳಿದರು.

ಸಿಲ್ಹೆಟ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಬಾಂಗ್ಲಾದೇಶ 328 ರನ್‌ಗಳಿಂದ ಸೋಲನುಭವಿಸಿತ್ತು.

ಸ್ಕೋರುಗಳು: ಶ್ರೀಲಂಕಾ: 531 ಮತ್ತು 7 ವಿಕೆಟ್‌ಗೆ 157 ಡಿಕ್ಲೇರ್ಡ್‌ (ಆ್ಯಂಜೆಲೊ ಮ್ಯಾಥ್ಯೂಸ್‌ 57, ಪ್ರಭಾತ್ ಜಯಸೂರ್ಯ ಔಟಾಗದೇ 28; ಹಸನ್ ಮಹಮೂದ್ 65ಕ್ಕೆ4); ಬಾಂಗ್ಲಾದೇಶ: 178 ಮತ್ತು 67 ಓವರುಗಳಲ್ಲಿ 7 ವಿಕೆಟ್‌ಗೆ 268 (ಮೊಮಿನುಲ್ ಹಖ್ 50, ಶಕೀಬ್ ಅಲ್ ಹಸನ್ 36, ಲಿಟ್ಟನ್ ದಾಸ್ 38; ಲಾಹಿರು ಕುಮಾರ 41ಕ್ಕೆ2, ಕಮಿಂದು ಮೆಂಡಿಸ್‌ 22ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT