ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಪೈರ್‌ ಅವರನ್ನು ನಿಂದಿಸಿದ ವನಿಂದು ಹಸರಂಗಗೆ ಎರಡು ಪಂದ್ಯಗಳ ನಿಷೇಧ

Published 24 ಫೆಬ್ರುವರಿ 2024, 16:31 IST
Last Updated 24 ಫೆಬ್ರುವರಿ 2024, 16:31 IST
ಅಕ್ಷರ ಗಾತ್ರ

ಕೊಲಂಬೊ: ಅಫ್ಗಾನಿಸ್ತಾನ ವಿರುದ್ಧ ಗುರುವಾರ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದ ವೇಳೆ ಅಂಪೈರ್‌ ಅವರನ್ನು ನಿಂದಿಸಿದ ಕಾರಣಕ್ಕೆ ವನಿಂದು ಹಸರಂಗ ಅವರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಶನಿವಾರ ಎರಡು ಪಂದ್ಯಗಳ ನಿಷೇಧ ವಿಧಿಸಿದೆ. ಈ ಪಂದ್ಯದಲ್ಲಿ ಲಂಕಾ ಮೂರು ರನ್‌ಗಳಿಂದ ಲಂಕಾ ಸೋತಿತ್ತು.

ಸರಣಿ 2–1ರಿಂದ ಲಂಕಾ ಪಾಲಾಗಿತ್ತು. ಹಸರಂಗ ಅವರು ಟಿ20 ತಂಡಕ್ಕೆ ನಾಯಕ ಸಹ.

ಆನ್‌ಫೀಲ್ಡ್‌ ಅಂಪೈರ್‌ ಲಿಂಡನ್ ಹನಿಬಾಲ್ ಅವರು ಕಮಿಂದು ಮೆಂಡಿಸ್‌ ಅವರು ಆಡುವಾಗ ಎಸೆತವೊಂದಕ್ಕೆ ನೋಬಾಲ್ ನೀಡದ ಕಾರಣಕ್ಕೆ ಬಹಿರಂಗವಾಗಿ ಅಸಮಾಧಾನ ಪ್ರದರ್ಶಿಸಿದ್ದರು. ಆಗ ಲಂಕಾಕ್ಕೆ ಮೂರು ಎಸೆತಗಳಲ್ಲಿ 11 ರನ್ ಬೇಕಿದ್ದವು. ಮರುಪ್ರಸಾರದಲ್ಲಿ ವಫಾದಾರ್ ಮೊಮಂದ್ ಅವರ ಎಸೆತ ಸೊಂಟದ ಮಟ್ಟಕ್ಕಿಂತ ಮೇಲಿಂದ ಹಾದು ಹೋಗಿತ್ತು. ಪಂದ್ಯದ ನಂತರವೂ ಹಸರಂಗ ಕೋಪ ತಣಿದಿರಲಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT