ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುಟುಕು ಕ್ರಿಕೆಟ್‌ನಲ್ಲಿ ಲಸಿತ್ ಮಹಾಸಾಧನೆ

Last Updated 7 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಕ್ಯಾಂಡಿ (ಎಎಫ್‌ಪಿ): ಸತತ ನಾಲ್ಕು ವಿಕೆಟ್‌ ಗಳಿಕೆ, ಅಂತರರಾಷ್ಟ್ರೀಯ ಟ್ವೆಂಟಿ–20ಯಲ್ಲಿ ನೂರು ವಿಕೆಟ್..

ಈ ಎರಡೂ ಅಪರೂಪದ ಸಾಧನೆ ಮಾಡಿದ್ದು ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ. ಶುಕ್ರವಾರ 37 ವರ್ಷದ ಲಸಿತ್ (4–1–6–5) ಬಿರುಗಾಳಿ ಬೌಲಿಂಗ್ ಮುಂದೆ ನ್ಯೂಜಿಲೆಂಡ್ ತಂಡವು ಕುಸಿಯಿತು. 37 ರನ್‌ಗಳಿಂದ ಸೋತಿತು. ಆದರೆ ನ್ಯೂಜಿಲೆಂಡ್ ತಂಡವು 2–1ರಿಂದ ಸರಣಿಯನ್ನು ಗೆದ್ದಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಶ್ರೀಲಂಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗಳಗೆ 125 ರನ್‌ ಗಳಿಸಿತು. ತಲಾ ಮೂರು ವಿಕೆಟ್ ಪಡೆದ ಮಿಷೆಲ್ ಸ್ಯಾಂಟನರ್ ಮತ್ತು ಟಾಡ್ ಆ್ಯಸ್ಲೆ ಮಿಂಚಿದರು. ಆದರೆ ಈ ಸಾಧಾರಣ ಗುರಿಯನ್ನು ಮಟ್ಟುವಲ್ಲಿ ಕಿವೀಸ್‌ನ ಬಲಿಷ್ಠ ಬ್ಯಾಟಿಂಗ್ ಪಡೆ ಸಫಲವಾಗಲಿಲ್ಲ.

ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ಲಸಿತ್ ಕಾಲಿನ್ ಮನ್ರೊ (2.3), ಹಮೀಷ್ ರುದರ್‌ಫೋರ್ಡ್ (2.4), ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (2.5) ಮತ್ತು ರಾಸ್ ಟೇಲರ್ (2.6) ಅವರ ವಿಕೆಟ್‌ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಇದರಿಂದಾಗಿ ಕಿವೀಸ್ ತಂಡವು 15 ರನ್‌ಗಳಿಗೆ ನಾಲ್ಕು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು. ತಮ್ಮ ನಂತರದ ಓವರ್‌ನಲ್ಲಿಯೂ ಲಸಿತ್ ಟಿಮ್ ಸೀಫರ್ಟ್‌ ವಿಕೆಟ್ ಕಿತ್ತರು. ಇನ್ನೊಂದೆಡೆ ಅಖಿಲ ಧನಂಜಯ ಕೂಡ ಎರಡು ವಿಕೆಟ್ ಪಡೆದರು. ಇದರಿಂದಾಗಿ ಕಿವೀಸ್ ತಂಡದ ಸೋಲು ಖಚಿತವಾಯಿತು.

ಸಂಕ್ಷಿಪ್ತ ಸ್ಕೋರು: ಶ್ರೀಲಂಕಾ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 125 (ಧನುಷ್ಕಾ ಗುಣತಿಲಕ 30, ನಿರೋಷನ್ ಡಿಕ್ವೆಲಾ 24, ಲಾಹಿರು ಮಧುಶಂಕಾ 20, ವಾಣಿಂದು ಡಿಸಿಲ್ವಾ 14, ಮಿಷೆಲ್ ಸ್ಯಾಂಟನರ್ 12ಕ್ಕೆ3, ಟಾಡ್ ಆ್ಯಸ್ಲೆ 28ಕ್ಕೆ3), ನ್ಯೂಜಿಲೆಂಡ್: 16 ಓವರ್‌ಗಳಲ್ಲಿ 88 (ಕಾಲಿನ್ ಮನ್ರೊ 12, ಮಿಷೆಲ್ ಸ್ಯಾಂಟನರ್ 16, ಟಿಮ್ ಸೌಥಿ 28, ಲಸಿತ್ ಮಾಲಿಂಗ 6ಕ್ಕೆ5, ಅಖಿಲ ಧನಂಜಯ 28ಕ್ಕೆ2, ಸಂದಕನ್ 33ಕ್ಕೆ1) ಫಲಿತಾಂಶ: ಶ್ರೀಲಂಕಾ ತಂಡಕ್ಕೆ 37 ರನ್ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT