ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಮೂಡಿಗೆರೆಯ ನೊಸ್ತುಷ್ ಕೆಂಜಿಗೆ ಕನ್ನಡಿಗರ ಹೆಮ್ಮೆ: ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ

ಭಾರತ ಮೂಲದ ಯುಎಸ್‌ಎ ಕ್ರಿಕೆಟಿಗ ನೊಸ್ತುಷ್ ಕೆಂಜಿಗೆ ಕರ್ನಾಟಕದ ಹೆಮ್ಮೆ ಎಂದು ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ ವಾಹಿನಿ ಮೆಚ್ಚುಗೆ ವ್ಯಕ್ತಪಡಿಸಿದೆ.
Published 7 ಜೂನ್ 2024, 15:11 IST
Last Updated 7 ಜೂನ್ 2024, 15:11 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಮೂಲದ ಯುಎಸ್‌ಎ ಕ್ರಿಕೆಟಿಗ ನೊಸ್ತುಷ್ ಕೆಂಜಿಗೆ ಕರ್ನಾಟಕದ ಹೆಮ್ಮೆ ಎಂದು ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ ವಾಹಿನಿ ಮೆಚ್ಚುಗೆ ವ್ಯಕ್ತಪಡಿಸಿದೆ.

ಈ ಕುರಿತು ಎಕ್ಸ್‌ನಲ್ಲಿ ನೊಸ್ತುಷ್ ಕೆಂಜಿಗೆ ಅವರ ಬಗ್ಗೆ ವಿಡಿಯೊ ಹಂಚಿಕೊಂಡಿದೆ. ವಿಡಿಯೊದಲ್ಲಿ ಕನ್ನಡದಲ್ಲಿ ಮಾತನಾಡಿರುವ ನೊಸ್ತುಷ್ ನಾನು ಚಿಕ್ಕಮಗಳೂರಿನವನು, ಯುಎಸ್‌ಎ ತಂಡದ ಪರವಾಗಿ ಆಡುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹ ಇರಲಿ ಎಂದು ಹೇಳಿಕೊಂಡಿದ್ದಾರೆ.

‘ನಮ್ಮ ಪೂರ್ಣಚಂದ್ರ ತೇಜಸ್ವಿ ಅವರ ಮಿತ್ರ ಪ್ರದೀಪ್ ಕೆಂಜಿಗೆ ಅವರ ಮಗ ನೊಸ್ತುಷ್ ಕೆಂಜಿಗೆ ಅವರು ನಿನ್ನೆ ಅಮೆರಿಕ ತಂಡದ ಪರವಾಗಿ ಪಾಕಿಸ್ತಾನದ ಮೂರು ವಿಕೆಟ್ ಕಿತ್ತು ಗೆಲುವಿಗೆ ಕಾರಣರಾಗಿದ್ದು ನಮ್ಮೆಲ್ಲರ ಹೆಮ್ಮೆ. ಜೈ ಮೂಡಿಗೆರೆ ಜೈ ಕರ್ನಾಟಕ’ ಎಂದು ಸ್ಟಾರ್‌ ಸ್ಪೋರ್ಟ್ಸ್‌ ಕನ್ನಡ ವಾಹಿನಿ ಮೆಚ್ಚುಗೆ ಸೂಚಿಸಿದೆ.

ನೊಸ್ತುಷ್ ಕೆಂಜಿಗೆ ಅವರು ಮೂಡಿಗೆರೆ ಮೂಲದ ಲೇಖಕ ಪ್ರದೀಪ್ ಕೆಂಜಿಗೆ ಅವರ ಪುತ್ರ. ನೊಸ್ತುಷ್ ಕೆಂಜಿಗೆ ಅವರು ಅಮೆರಿಕ ಕ್ರಿಕೆಟ್ ತಂಡದ ಪ್ರಮುಖ ಆಟಗಾರನಾಗಿ ಗುರುತಿಸಿಕೊಳ್ಳುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT