ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾದಬ್‌, ಶಾರ್ಟ್‌ ಒಪ್ಪಂದ ರದ್ದು ಮಾಡಿದ ಸರ‍್ರೆ

Last Updated 1 ಮೇ 2020, 19:45 IST
ಅಕ್ಷರ ಗಾತ್ರ

ಲಂಡನ್‌:ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿ ಆಡುವ ಸರ‍್ರೆ ತಂಡವು ಪಾಕಿಸ್ತಾನದ ಸ್ಪಿನ್ನರ್‌ ಶಾದಬ್‌ ಖಾನ್‌ ಹಾಗೂ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್‌ಮನ್‌ ಡಿ ಆರ್ಸಿ ಶಾರ್ಟ್‌ ಅವರೊಂದಿಗಿನ ಒಪ್ಪಂದವನ್ನು ರದ್ದು ಮಾಡಿದೆ.

ಕೋವಿಡ್‌–19 ಪಿಡುಗಿನಿಂದಾಗಿ ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಮಂಡಳಿಯು (ಇಸಿಬಿ)‌‌ ಇದೇ ತಿಂಗಳ 28ರಿಂದ ನಡೆಯಬೇಕಿದ್ದ ಟಿ–20 ಬ್ಲಾಸ್ಟ್‌ ಕ್ರಿಕೆಟ್‌ ಟೂರ್ನಿಯನ್ನು ಮುಂದಕ್ಕೆ ಹಾಕಿದೆ. ಹೀಗಾಗಿ ಸರ‍್ರೆ ತಂಡ ಶುಕ್ರವಾರ ಈ ತೀರ್ಮಾನ ಕೈಗೊಂಡಿದೆ.

‘ಕೋವಿಡ್‌–19 ಬಿಕ್ಕಟ್ಟಿನಿಂದಾಗಿ ಕ್ರಿಕೆಟ್‌ ಚಟುವಟಿಕೆಗಳು ಸ್ತಬ್ಧಗೊಂಡಿವೆ. ಟಿ–20 ಬ್ಲಾಸ್ಟ್‌ ಟೂರ್ನಿಯನ್ನೂ ಮುಂದೂಡಲಾಗಿದೆ. ಹೀಗಾಗಿ ಆಟಗಾರರ ಜೊತೆ ಚರ್ಚಿಸಿ ಒಪ್ಪಂದವನ್ನು ರದ್ದು ಮಾಡುವ ನಿರ್ಧಾರ ಕೈಗೊಂಡಿದ್ದೇವೆ’ ಎಂದು ಸರ‍್ರೆ ಕ್ಲಬ್‌, ಪ್ರಕಟಣೆಯಲ್ಲಿ ತಿಳಿಸಿದೆ.

‘ಶಾದಬ್‌ ಮತ್ತು ಶಾರ್ಟ್‌ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾರೆ. ಅವರ ವ್ಯವಹಾರಗಳನ್ನು ನೋಡಿಕೊಳ್ಳುವ ಕಂಪನಿಗಳೂ ನಮ್ಮ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿವೆ. ಆಟಗಾರರು ಹಾಗೂ ಕ್ಲಬ್‌ನ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳುವುದು ಅನಿವಾರ್ಯವಾಗಿತ್ತು’ ಎಂದು ಸರ‍್ರೆ ಕ್ಲಬ್‌ನ ಕ್ರಿಕೆಟ್‌ ನಿರ್ದೇಶಕ ಅಲೆಕ್‌ ಸ್ಟೀವರ್ಟ್‌ ನುಡಿದಿದ್ದಾರೆ.

ಈ ಹಿಂದೆ, ಯಾರ್ಕ್‌ಶೈರ್‌, ಕೆಂಟ್‌, ಲ್ಯಾಂಕ್‌ಶೈರ್‌, ಗ್ಲೌಷಸ್ಟರ್‌ಶೈರ್‌ ಹಾಗೂ ಹ್ಯಾಂಪ್‌ಶೈರ್‌ ಕ್ಲಬ್‌ಗಳು ಭಾರತದ ಚೇತೇಶ್ವರ್‌ ಪೂಜಾರ, ಆರ್‌.ಅಶ್ವಿನ್‌ ಸೇರಿದಂತೆ ಅನೇಕ ಆಟಗಾರರ ಜೊತೆಗಿನ ಒಪ್ಪಂದವನ್ನು ರದ್ದು ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT