ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿ: ಸೂರ್ಯವಂಶಿ ಮಿಂಚಿನ ಬ್ಯಾಟಿಂಗ್

Published : 30 ಸೆಪ್ಟೆಂಬರ್ 2024, 14:13 IST
Last Updated : 30 ಸೆಪ್ಟೆಂಬರ್ 2024, 14:13 IST
ಫಾಲೋ ಮಾಡಿ
Comments

ಚೆನ್ನೈ: ಕೇವಲ 13 ವರ್ಷ ವಯಸ್ಸಿನ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ಅಜೇಯ 81 ರನ್ ಗಳಿಸಿದ್ದು, 19 ವರ್ಷದೊಳಗಿನವರ ‘ಅನಧಿಕೃತ’ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಮೊದಲ ದಿನವಾದ ಸೋಮವಾರ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಆರಂಭ ಮಾಡಿದೆ.

ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 293 ರನ್ ಗಳಿಸಿ ಆಲೌಟ್‌ ಆಯಿತು. ವೇಗದ ಬೌಲರ್‌ಗಳಾದ ಮೊಹಮ್ಮದ್ ಇನಾನ್ ಮತ್ತು ಕರ್ನಾಟಕದ ಸಮರ್ಥ್ ನಾಗರಾಜ್ ಅವರು ತಲಾ ಮೂರು ವಿಕೆಟ್‌ ಪಡೆದು ಮಿಂಚಿದರು.

ಆಮೇಲೆ ವೈಭವ್ ಅವರ ಆಟದ ವೈಭವ ಗಮನಸೆಳೆಯಿತು. ಬಿಹಾರದ ಬಾಲಕ 47 ಎಸೆತಗಳಲ್ಲಿ 13 ಬೌಂಡರಿ, ಎರಡು ಸಿಕ್ಸರ್‌ಗಳನ್ನು ಬಾರಿಸಿ ತನ್ನ ಸ್ಟ್ರೋಕ್‌ ಮೇಕಿಂಗ್‌ ಸಾಮರ್ಥ್ಯ ಪ್ರದರ್ಶಿಸಿದ. ಮುರಿಯದ ಮೊದಲ ವಿಕೆಟ್‌ಗೆ ವೈಭವ್‌ ಮತ್ತು ವಿಹಾನ್ ಮಲ್ಹೋತ್ರಾ (ಔಟಾಗದೇ 29)  14 ಓವರುಗಳಲ್ಲಿ 103 ರನ್ ಸೇರಿಸಿ, ಆತಿಥೇಯ ತಂಡಕ್ಕೆ ಭದ್ರ ಬುನಾದಿ ಒದಗಿಸಿದ್ದಾರೆ.

ಇದಕ್ಕೆ ಮೊದಲು, ಏಡನ್ ಒ‘ಕಾನರ್ 70 ಎಸೆತಗಳಲ್ಲಿ 61 ರನ್ ಬಾರಿಸಿ ಆಸ್ಟ್ರೇಲಿಯಾ ಪರ ಅತ್ಯಧಿಕ ಮೊತ್ತ ಗಳಿಸಿದರು. ಆರಂಭ ಆಟಗಾರ ರಿಲಿ ಕಿಂಗ್ಸೆಲ್ (53, 77ಎ) ಮತ್ತು ಕ್ರಿಸ್ಟಿಯನ್ ಹೋವ್‌ (48) ಸಹ ಉಪಯುಕ್ತ ಕೊಡುಗೆ ನೀಡಿದರು. ಕಾನರ್ ಮತ್ತು ಹೋವ್ ನಡುವಣ ಏಳನೇ ವಿಕೆಟ್‌ಗೆ 98 ರನ್‌ಗಳು ಹರಿದುಬಂದವು.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ 19 ವರ್ಷದೊಳಗಿನವರ ತಂಡ: 71.4 ಓವರುಗಳಲ್ಲಿ 293 (ಏಡನ್ ಒ‘ಕಾನರ್ 61, ಕ್ರಿಸ್ಟಿಯನ್ ಹೋವ್‌ 48, ರಿಲಿ ಕಿಂಗ್ಸೆಲ್ 53; ಮೊಹಮದ್ ಇನಾನ್ 48ಕ್ಕೆ3, ಸಮರ್ಥ್ ನಾಗರಾಜ್ 49ಕ್ಕೆ3); ಭಾರತ 19 ವರ್ಷದೊಳಗಿವರ ತಡ: 14 ಓವರುಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 103 (ವಿಹಾನ್ ಮಲ್ಹೋತ್ರಾ ಔಟಾಗದೇ 21)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT