ಗುರುವಾರ , ಮಾರ್ಚ್ 30, 2023
32 °C
ಸೆಮಿಫೈನಲ್‌ ಅವಕಾಶ ವೃದ್ಧಿಸಿಕೊಳ್ಳುವತ್ತ ನ್ಯೂಜಿಲೆಂಡ್‌ ಚಿತ್ತ

ಟಿ20 ವಿಶ್ವಕಪ್: ಕೇನ್ ಬಳಗಕ್ಕೆ ಸ್ಕಾಟ್ಲೆಂಡ್ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಸೆಮಿಫೈನಲ್ ಪ್ರವೇಶದ ಅವಕಾಶವನ್ನು ಬಲಪಡಿಸಿಕೊಳ್ಳುವ ಹಂಬಲದಲ್ಲಿರುವ ನ್ಯೂಜಿಲೆಂಡ್ ತಂಡವು ಟಿ20 ವಿಶ್ವಕಪ್ ಟೂರ್ನಿಯ ಎರಡನೇ ಗುಂಪಿನ ಪಂದ್ಯದಲ್ಲಿ ಬುಧವಾರ ಸ್ಕಾಟ್ಲೆಂಟ್ ಸವಾಲು ಎದುರಿಸಲಿದೆ.

ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ನಿರಾಸೆ ಅನುಭವಿಸಿದ್ದ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್‌, ಬಳಿಕ ಭಾರತದ ಎದುರು ಭರ್ಜರಿ ಜಯಗಳಿಸುವ ಮೂಲಕ ಪುಟಿದೆದ್ದಿತ್ತು.

ಕಿವೀಸ್‌ ಬಳಗದ ನಾಲ್ಕರ ಘಟ್ಟದ ಆಸೆ ಈಡೇರಬೇಕಾದರೆ ಸೂಪರ್ 12 ಹಂತದಲ್ಲಿ ಉಳಿದಿರುವ ಮೂರು ಪಂದ್ಯಗಳನ್ನು ಗೆಲ್ಲಬೇಕು. ರನ್‌ರೇಟ್‌ ಲೆಕ್ಕಾಚಾರದ ಮೊರೆ ಹೋಗದಂತಾಗಲು ಈ ಪಂದ್ಯಗಳಲ್ಲಿ ಭರ್ಜರಿ ಗೆಲುವು ದಾಖಲಿಸಬೇಕಾಗಿದೆ.

ಸ್ಪಿನ್ನರ್‌ಗಳಾದ ಈಶ್ ಸೋಧಿ, ಮಿಚೆಲ್ ಸ್ಯಾಂಟನರ್‌, ವೇಗಿ ಟ್ರೆಂಟ್‌ ಬೌಲ್ಟ್, ಟಿಮ್ ಸೌಥಿ ಅವರನ್ನೊಳಗೊಂಡ ಬೌಲಿಂಗ್ ಪಡೆಯ ಬಲ ನ್ಯೂಜಿಲೆಂಡ್ ತಂಡಕ್ಕಿದೆ. ಬ್ಯಾಟಿಂಗ್‌ನಲ್ಲಿ ಆರಂಭಿಕ ಆಟಗಾರ ಡೆರಿಲ್ ಮಿಶೆಲ್ ಉತ್ತಮ ಲಯದಲ್ಲಿದ್ದಾರೆ. ಆದರೆ ನಾಯಕ ವಿಲಿಯಮ್ಸನ್ ಅವರ ಫಿಟ್‌ನೆಸ್‌ ಕಳವಳಕ್ಕೆ ಕಾರಣವಾಗಿದೆ. ಮೊಣಕೈ ಗಾಯದಿಂದ ಅವರು ಸಂಪೂರ್ಣ ಗುಣಮುಖರಾಗಿಲ್ಲ. ಅವರಿಗೆ ವಿಶ್ರಾಂತಿ ನೀಡಿ ಮುಂದುವರಿಯುವ ಅಪಾಯವನ್ನು ಮೈಮೇಲೆದುಕೊಳ್ಳಲು ತಂಡ ಬಯಸುವ ಸಾಧ್ಯತೆಯಿಲ್ಲ.

ಅರ್ಹತಾ ಸುತ್ತಿನಲ್ಲಿ ಎಲ್ಲ ಪಂದ್ಯಗಳನ್ನು ಗೆದ್ದು ಭಾರೀ ಆತ್ಮವಿಶ್ವಾಸದೊಂದಿಗೆ ಸೂಪರ್ 12 ಹಂತ ಪ್ರವೇಶಿಸಿದ್ದ ಸ್ಕಾಟ್ಲೆಂಡ್‌ ತಂಡವು ಸತತ ಎರಡು ಪಂದ್ಯಗಳಲ್ಲಿ ಕ್ರಮವಾಗಿ ನಮೀಬಿಯಾ ಹಾಗೂ ಅಫ್ಗಾನಿಸ್ತಾನಕ್ಕೆ ಮಣಿದಿತ್ತು. ಕಿವೀಸ್‌ ಎದುರು ಗೆಲ್ಲಬೇಕಾದರೆ ಆ ತಂಡವು ಶಕ್ತಿಮೀರಿ ಪ್ರಯತ್ನ ನಡೆಸಬೇಕು.

ಟಿ20 ರ‍್ಯಾಂಕಿಂಗ್‌

ನ್ಯೂಜಿಲೆಂಡ್‌ 4

ಸ್ಕಾಟ್ಲೆಂಡ್ 14

ಪಂದ್ಯ ಆರಂಭ: ಮಧ್ಯಾಹ್ನ 3.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು