ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC: ನಿಕೋಲಸ್, ಶ್ರೇಯಸ್‌ ಉತ್ತಮ ಬ್ಯಾಟಿಂಗ್; ಐರ್ಲೆಂಡ್‌ಗೆ ಸೋಲುಣಿಸಿದ ಕೆನಡಾ

Published 7 ಜೂನ್ 2024, 14:03 IST
Last Updated 7 ಜೂನ್ 2024, 16:16 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಕೆನಡಾ ತಂಡವು ವಿಶ್ವಕಪ್ ‘ಎ’ ಗುಂಪಿನ ಅಚ್ಚರಿ ಫಲಿತಾಂಶವೊಂದರಲ್ಲಿ ಐರ್ಲೆಂಡ್ ತಂಡವನ್ನು 12 ರನ್‌ಗಳಿಂದ ಸೋಲಿಸಿತು. ಇದರೊಂದಿಗೆ ಸತತ ಎರಡನೇ ದಿನ ಐಸಿಸಿ ಪೂರ್ಣ ಪ್ರಮಾಣದ ತಂಡವೊಂದು ಸೋತಂತಾಗಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ನಿಕೋಲಸ್ ಕಿರ್ಟನ್ (49;35ಎ) ಮತ್ತು ಕನ್ನಡಿಗ ಶ್ರೇಯಸ್ ಮೊವ್ವಾ (37;36ಎ) ನೆರವಿನಿಂದ ಕೆನಡಾ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 137 ರನ್‌ಗಳ ಸವಾಲಿನ ಮೊತ್ತ ಗಳಿಸಿತು. 

ನ್ಯೂರ್ಯಾರ್ಕ್‌ನಲ್ಲಿ  ಐದು ಇನ್ನಿಂಗ್ಸ್‌ನಲ್ಲಿ ಇದೇ ಮೊದಲ ಬಾರಿ ತಂಡವೊಂದು ನೂರು ರನ್‌ಗಳ ಗಡಿ ದಾಟಿತು. ಕೆನಡಾ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡಿ ತಮಗಿಂತ ಪ್ರಬಲ ಐರ್ಲೆಂಡ್‌ ತಂಡವನ್ನು ನಿಯಂತ್ರಿಸಿದರು. 

ಒಂದು ಹಂತದಲ್ಲಿ 13 ಓವರ್‌ಗಳಲ್ಲಿ ಆರು ವಿಕೆಟ್‌ಗೆ 59 ರನ್ ಗಳಿಸಿ ಪರದಾಡುತ್ತಿದ್ದ ಐರ್ಲೆಂಡ್‌, ಮಾರ್ಕ್ ಅಡೇರ್‌, ಜಾರ್ಜ್ ಡಾಕ್ರೆ‌ಲ್ ಅವರ 62 ರನ್‌ಗಳ 7ನೇ ವಿಕೆಟ್‌ ಜೊತೆಯಾಟದ ಮೂಲಕ ಹೋರಾಟ ತೋರಿತು. ಆದರೆ, ಜೆರೆಮಿ ಗೊರ್ಡನ್, ಡಿಲನ್‌ ಎಲಿಂಜರ್ ಅವರು ಬಿಗು ದಾಳಿ ನಡೆಸಿ ಕೆನಡಾ ವಿಜಯಕ್ಕೆ ನೆರವಾದರು. 

ಕ್ರೇಗ್ ಯಂಗ್ ಮತ್ತು ಬ್ಯಾರಿ ಮೆಕಾರ್ಥಿ ತಲಾ ಎರಡು ವಿಕೆಟ್‌ ಪಡೆದರು. ಮಾರ್ಕ್ ಅಡೇರ್ ಮತ್ತು ಗರೆಥ್ ಡೆಲಾನಿ ತಲಾ ಒಂದು ವಿಕೆಟ್‌ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಕೆನಡಾ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 137 (ಪ್ರಗತ್‌ ಸಿಂಗ್‌ 18, ನಿಕೋಲಸ್‌ ಕಿರ್ಟನ್‌ 49, ಶ್ರೇಯಸ್‌ ಮೊವ್ವಾ 37; ಕ್ರೇಗ್ ಯಂಗ್ 32ಕ್ಕೆ 2, ಬ್ಯಾರಿ ಮೆಕಾರ್ಥಿ 24ಕ್ಕೆ 2, ಮಾರ್ಕ್ ಅಡೇರ್ 23ಕ್ಕೆ 1, ಗರೆಥ್ ಡೆಲಾನಿ 10ಕ್ಕೆ 1)

ಐರ್ಲೆಂಡ್: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 125 (ಜಾರ್ಜ್‌ ಡಾಕ್ರೆಲ್ ಅಜೇಯ 30, ಮಾರ್ಕ್ ಅಡೇರ್ 34, ಜೆರೆಮಿ ಗೊರ್ಡ‌ನ್ 16ಕ್ಕೆ2, ಡಿಲನ್ 18ಕ್ಕೆ2) ಪಂದ್ಯ ಶ್ರೇಷ್ಠ: ನಿಕೋಲಸ್‌ ಕಿರ್ಟನ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT