ಕಟಕ್: ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್ಗೆ ಎರಡು ತಿಂಗಳಷ್ಟೇ ಉಳಿದಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಮಂಗಳವಾರ ಇಲ್ಲಿ ಆರಂಭವಾಗುವ ಐದು ಪಂದ್ಯಗಳ ಟಿ20 ಸರಣಿ ಭಾರತ ತಂಡಕ್ಕೆ ಅಧಿಕೃತ ತಾಲೀಮು ಆಗಿದೆ.

ಐಸಿಸಿ ಟೂರ್ನಿಗೆ ಮೊದಲು ಭಾರತ ತಂಡವು ಸಿದ್ಧತೆಯ ರೂಪದಲ್ಲಿ 10 ಚುಟುಕು ಮಾದರಿಯ ಪಂದ್ಯಗಳನ್ನು ಆಡಲಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯ ನಂತರ, ನ್ಯೂಜಿಲೆಂಡ್ ವಿರುದ್ಧವೂ ತವರಿನಲ್ಲಿ ಐದು ಪಂದ್ಯಗಳನ್ನು ಆಡಲಿದೆ. ನಂತರ ಫೆಬ್ರುವರಿ 7ರಂದು ಮುಂಬೈನಲ್ಲಿ ಅಮೆರಿಕ ತಂಡವನ್ನು ಎದುರಿಸುವ ಮೂಲಕ ಹಾಲಿ ಚಾಂಪಿಯನ್ ಭಾರತ ತಂಡವು ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

ಆಟಗಾರರ ಪಾತ್ರದ ಸ್ಪಷ್ಟತೆ, ತಂಡ ಸಂಯೋಜನೆ, ದೌರ್ಬಲ್ಯಗಳನ್ನು ತಿದ್ದಿಕೊಳ್ಳಲು ಈ ಪಂದ್ಯಗಳು ನೆರವಾಗಲಿವೆ. ಈ ಹಿಂದಿನ ವಿಶ್ವಕಪ್ನಲ್ಲಿ ಭಾರತ ಸತತ ಎಂಟು ಪಂದ್ಯಗಳನ್ನು ಗೆದ್ದು ವೀರೋಚಿತ ರೀತಿಯಲ್ಲಿ ಟ್ರೋಫಿ ಎತ್ತಿಹಿಡಿದಿತ್ತು. ನಂತರದವೂ ಭಾರತದ ಪ್ರಾಬಲ್ಯ ಮುಂದುವರಿಯಿತು. 26 ಪಂದ್ಯಗಳನ್ನು ಗೆದ್ದಿರುವ ಭಾರತ ನಾಲ್ಕರಲ್ಲಿ ಮಾತ್ರ ಸೋತಿದೆ.

ಉಪನಾಯಕ ಶುಭಮನ್ ಗಿಲ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಈ ಸರಣಿಗೆ ಮರಳುತ್ತಿರುವುದು ತಂಡಕ್ಕೆ ಅಗತ್ಯವಾಗಿರುವ ಸಮತೋಲನ ಒದಗಿಸಲಿದೆ. ಕುತ್ತಿಗೆ ನೋವಿನಿಂದ ಒಂದು ತಿಂಗಳು ಕ್ರಿಕೆಟ್ನಿಂದ ದೂರವಿದ್ದ ಗಿಲ್ ಪುನರಾಗಮಕ್ಕೆ ಸಜ್ಜಾಗಿದ್ದಾರೆ. 2025ರ ಐಪಿಎಲ್ನಿಂದ ಅವರು ಸತತವಾಗಿ ಆಡಿದ್ದರು.

33 ಟಿ20 ಪಂದ್ಯಗಳಿಂದ 837 ರನ್ (ಸರಾಸರಿ: 29.89) ಗಳಿಸಿರುವ ಗಿಲ್ ಅವರಿಗೆ ವಿಶ್ವಕಪ್ಗೆ ತಯಾರಿ ದೃಷ್ಟಿಯಿಂದ ಈ ಸರಣಿ ಮಹತ್ವದ್ದು. ಅಭಿಷೇಕ್ ಶರ್ಮಾ ಜೊತೆ ಅವರ ಇನಿಂಗ್ಸ್ ಆರಂಭವು ಅಕ್ರಮಣ ಮತ್ತು ಸಾಂಪ್ರದಾಯಿಕ ಸ್ಟ್ರೋಕ್ ಪ್ಲೇ ಮಿಶ್ರಣಕ್ಕೆ ದಾರಿಯಾಗಲಿದೆ. ಆಸ್ಟ್ರೇಲಿಯಾ ಎದುರಿನ ಸರಣಿಯಲ್ಲಿ ಶರ್ಮಾ 164 ರನ್ ಗಳಿಸಿದ್ದರು. ಸೈಯದ್ ಮುಷ್ತಾಕ್ ಅಹ್ಮದ್ ಟ್ರೋಫಿ ಪಂದ್ಯಗಳಲ್ಲೂ ಮಿಂಚಿದ್ದು 50.66ರ ಸರಾಸರಿಯಲ್ಲಿ 304 ರನ್ ಗಳಿಸಿದ್ದು ಉತ್ತಮ ಲಯದಲ್ಲಿದ್ದಾರೆ.

ಪಾಂಡ್ಯ ಪುನರಾಗಮನ:

ಹಾರ್ದಿಕ್ ಪಾಂಡ್ಯ ಪುನರಾಗಮನವೂ ಅಷ್ಟೇ ಮಹತ್ವದ್ದು. ಏಷ್ಯಾ ಕಪ್ ವೇಳೆ ತೊಡೆಯ ನೋವಿಗೆ ಒಳಗಾದ ಬಳಿಕ ಅವರೂ ಕ್ರಿಕೆಟ್ನಿಂದ ದೂರವಿದ್ದರು. ಸೈಯ್ಯದ್ ಮುಷ್ತಾಕ್ ಅಹ್ಮದ್ ಟಿ20 ಟೂರ್ನಿಯಲ್ಲಿ ಬರೋಡ ಪರ 42 ಎಸೆತಗಳಲ್ಲಿ 77 ರನ್ ಬಾರಿಸುವ ಮೂಲಕ ಗಮನಸೆಳೆಯುವಂತೆ ಪುನರಾಗಮನ ಮಾಡಿದ್ದಾರೆ. ನಾಲ್ಕು ಓವರುಗಳನ್ನೂ ಮಾಡಿದ್ದಾರೆ.

ತಂಡ ಆಗಮಿಸುವ ಒಂದು ದಿನ ಮೊದಲೇ ಬಾರಬತಿ ಕ್ರೀಡಾಂಗಣಲ್ಲಿ ಬಂದು ಒಂಟಿಯಾಗಿ ಅಭ್ಯಾಸ ನಡೆಸಿದ್ದಾರೆ. ವ್ಯಾಯಾಮದ ಜೊತೆ 20 ನಿಮಿಷ ಬೌಲಿಂಗ್ ಮಾಡಿದ್ದಾರೆ. ಪಾಂಡ್ಯ ಅವರಿಂದ ಬ್ಯಾಟಿಂಗ್ ಬಲಗೊಳ್ಳಲಿದೆ.

ಬೆಳಗುವರೇ ‘ಸೂರ್ಯ’:

ಸರಣಿ ಆರಂಭಕ್ಕೆ ಮೊದಲು ಚರ್ಚೆಯ ಪ್ರಮುಖ ವಿಷಯವೆಂದರೆ ಸೂರ್ಯಕುಮಾರ್ ಅವರ ಫಾರ್ಮ್. 2024ರ ಜುಲೈನಲ್ಲಿ ನಾಯಕನಾದ ಬಳಿಕ 15 ಇನಿಂಗ್ಸ್ಗಳಲ್ಲಿ ಅವರು 15.33 ಸರಾಸರಿಯಲ್ಲಿ 184 ರನ್ ಮಾತ್ರ ಗಳಿಸಿದ್ದಾರೆ. ಕೊನೆಯ 20 ಪಂದ್ಯಗಳಲ್ಲಿ ಒಮ್ಮೆಯೂ ಅರ್ಧ ಶತಕ ಗಳಿಸಿಲ್ಲ. ಸ್ಟ್ರೈಕ್ ರೇಟ್ ಸಹ ಕುಗ್ಗಿದೆ. ತಮ್ಮ ನಾಯಕತ್ವ ಮತ್ತು ಫಾರ್ಮಿಗೆ ಸಂಬಂಧಿಸಿ ಟೀಕೆಗಳು ಎದುರಾಗದಂತೆ ನೋಡಿಕೊಳ್ಳಲು ಮುಂದಿನ ಪಂದ್ಯಗಳು ಅವರ ಪಾಲಿಗೆ ಮಹತ್ವದ್ದಾಗಲಿವೆ.

ಸಂಜು– ಜಿತೇಶ್ ಪೈಪೋಟಿ

ವಿಕೆಟ್ ಕೀಪರ್ ಸ್ಥಾನಕ್ಕೆ ಅನುಭವಿ ಸಂಜು ಸ್ಯಾಮ್ಸನ್ ಮತ್ತು ಯುವ ತಾರೆ ಜಿತೇಶ್ ಶರ್ಮಾ ಅವರ ಮಧ್ಯೆ ಪೈಪೋಟಿಯಿದೆ. ಹಾಲಿ ದೇಶಿ ಟಿ20 ಟೂರ್ನಿಯಲ್ಲಿ ಸಂಜು ಸ್ಯಾಮ್ಸನ್ ಮಿಂಚಿದ್ದಾರೆ. ಆದರೆ ಆರು ಪಂದ್ಯಗಳಲ್ಲಿ ಜಿತೇಶ್ ಅಷ್ಟೇನೂ ಗಮನಸೆಳೆದಿಲ್ಲ.

ಆಫ್ರಿಕಾ ಉತ್ಸಾಹ:

ದಕ್ಷಿಣ ಆಫ್ರಿಕಾ ಸಹ ಕಳೆದ ಟಿ20 ವಿಶ್ವಕಪ್ ಫೈನಲ್ ನಂತರ, ವೇಗದ ಬೌಲರ್ ಆ್ಯನ್ರಿಚ್ ನಾಕಿಯಾ ಅವರನ್ನು ಆಡಿಸಲು ಸಜ್ಜಾಗಿದೆ. ಮಾರ್ಕೊ ಯಾನ್ಸೆನ್ ಪ್ರಬಲ ಆಲ್ರೌಂಡರ್ ಆಗಿ ರೂಪುಗೊಂಡಿರುವುದು ತಂಡದ ಬಲ ವೃದ್ಧಿಸಿದೆ.

ಆದರೆ ತಂಡವು ಬ್ಯಾಟರ್ ಟೋನಿ ಡಿ ಝೋರ್ಜಿ ಮತ್ತು ವೇಗದ ಬೌಲರ್ ಕ್ವೆನಾ ಮಫಾಕಾ ಅವರನ್ನು ಕಳೆದುಕೊಂಡಿದೆ. ಇಬ್ಬರೂ ಗಾಯಾಳಾಗಿದ್ದಾರೆ.

ಪಂದ್ಯ ಆರಂಭ: ರಾತ್ರಿ 7.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.