ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 ವಿಶ್ವಕಪ್ ಮೆಲುಕು: ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ಗೆ ಮರುಜೀವ

Published 26 ಮೇ 2024, 23:43 IST
Last Updated 26 ಮೇ 2024, 23:43 IST
ಅಕ್ಷರ ಗಾತ್ರ
  • 1975, 1979ರ ಏಕದಿನ ವಿಶ್ವಕಪ್‌ ಟೂರ್ನಿಗಳಲ್ಲಿ ಚಾಂಪಿಯನ್‌ ಆಗಿ ಮೆರೆದು, ನಂತರದ ವರ್ಷಗಳಲ್ಲಿ ಪ್ರಶಸ್ತಿಯ ಬರ ಎದುರಿಸುತ್ತಿದ್ದ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ಗೆ ಮರುಜೀವ ದೊರೆತ ಟೂರ್ನಿ ಇದು. ಡರೆನ್ ಸ್ಯಾಮಿ ನಾಯಕತ್ವದ ವಿಂಡೀಸ್‌ ತಂಡವು 33 ವರ್ಷಗಳ ಬಳಿಕ ಚುಟುಕು ಮಾದರಿ ಕ್ರಿಕೆಟ್‌ನಲ್ಲಿ ಐಸಿಸಿ ಪ್ರಶಸ್ತಿಯನ್ನು ಗೆದ್ದು ಬೀಗಿತು.

  • ಏಷ್ಯಾ ಖಂಡದ ರಾಷ್ಟ್ರವೊಂದರಲ್ಲಿ ನಡೆದ ಮೊದಲ ಟಿ20 ವಿಶ್ವಕಪ್‌ ಟೂರ್ನಿ ಇದು. ಶ್ರೀಲಂಕಾದಲ್ಲಿ 2012 ಸೆಪ್ಟೆಂಬರ್‌ 18ರಿಂದ ಅಕ್ಟೋಬರ್‌ 7ರವರೆಗೆ ನಡೆಯಿತು. ಏಷ್ಯಾದ ಭಾರತ, ಪಾಕಿಸ್ತಾನ ಅಥವಾ ಆತಿಥೇಯ ಶ್ರೀಲಂಕಾ ಕಪ್‌ ಗೆಲ್ಲುವ ನಿರೀಕ್ಷೆ ಇತ್ತಾದರೂ ಅದು ತಲೆಕೆಳಗಾಯಿತು.

  • ನ್ಯೂಜಿಲೆಂಡ್ ಆಟಗಾರ ಬ್ರೆಂಡನ್ ಮೆಕಲಮ್ ಅವರು ಬಾಂಗ್ಲಾದೇಶ ವಿರುದ್ಧ 58 ಎಸೆತಗಳಲ್ಲಿ 123 ರನ್ ಗಳಿಸಿದ್ದು, ಈ ಟೂರ್ನಿಯಲ್ಲಿ ಅತ್ಯಧಿಕ ಸ್ಕೋರ್ ಆಗಿದೆ.

ಪ್ರಮುಖ ಅಂಶಗಳು

  • ಮಹೇಂದ್ರ ಸಿಂಗ್‌ ಧೋನಿ ನಾಯಕತ್ವದ ಭಾರತ ತಂಡವು ‘ಎ’ ಗುಂಪಿನಲ್ಲಿದ್ದ ಇಂಗ್ಲೆಂಡ್ ಮತ್ತು ಅಫ್ಗಾನಿಸ್ಥಾನವನ್ನು ಮಣಿಸಿ, ಅಗ್ರಸ್ಥಾನದೊಂದಿಗೆ ಸೂಪರ್ 8 ಹಂತ ಪ್ರವೇಶಿಸಿತ್ತು. ಅಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸೋತರೆ, ಪಾಕಿಸ್ತಾನ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು 4 ಅಂಕ ಸಂಪಾದಿಸಿತ್ತು. ಆದರೆ, ಅಷ್ಟೇ ಅಂಕ ಸಂಪಾದಿಸಿದ್ದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಸೆಮಿಫೈನಲ್‌ ಪ್ರವೇಶಿಸಿದವು. ನೆಟ್‌ ರನ್‌ರೇಟ್‌ ಕಡಿಮೆ ಇದ್ದ ಕಾರಣ ಭಾರತ ನಿರಾಸೆ ಅನುಭವಿಸಿತ್ತು.

  • ಸೂಪರ್‌ 8 ಹಂತದ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡವನ್ನು 8 ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ 19.4 ಓವರ್‌ಗಳಲ್ಲಿ 128 ರನ್‌ ಗಳಿಸಿತ್ತು. ವಿರಾಟ್‌ ಕೊಹ್ಲಿ (78 ರನ್‌) ಬ್ಯಾಟಿಂಗ್‌ ಬಲದಿಂದ 17 ಓವರ್‌ಗಳಲ್ಲಿ ಭಾರತ ಗುರಿ ಮುಟ್ಟಿತ್ತು.

  • ಶ್ರೀಲಂಕಾ ತಂಡವು ಸೂಪರ್‌ 8 ಹಂತದ ಮುಖಾಮುಖಿಯಲ್ಲಿ ವೆಸ್ಟ್‌ ಇಂಡೀಸ್‌ ಅನ್ನು ಒಂಬತ್ತು ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿತ್ತು. ಆದರೆ, ಫೈನಲ್‌ನಲ್ಲಿ ಅದೇ ತಂಡದ ವಿರುದ್ಧ ಆತಿಥೇಯರು ಮುಖಭಂಗ ಅನುಭವಿಸಿದರು.

  • ಫೈನಲ್‌ನಲ್ಲಿ ಟಾಸ್‌ ಗೆದ್ದ ವೆಸ್ಟ್‌ಇಂಡೀಸ್‌ 20 ಓವರ್‌ಗಳಿಗೆ 6 ವಿಕೆಟ್‌ಗೆ 137 ರನ್‌ ಗಳಿಸಿತ್ತು. ಮರ್ಲಾನ್ ಸ್ಯಾಮ್ಯುಯೆಲ್ಸ್ (78 ರನ್‌; 56 ಎಸೆತ) ಏಕಾಂಗಿ ಹೋರಾಟ ನಡೆಸಿದ್ದರು. ಶ್ರೀಲಂಕಾದ ಅಜಂತಾ ಮೆಂಡೀಸ್‌ 12ಕ್ಕೆ 4 ವಿಕೆಟ್‌ ಪಡೆದು ಮಿಂಚಿದ್ದರು. ಆದರೆ, ಈ ಗುರಿಯನ್ನು ಬೆನ್ನಟ್ಟುವಲ್ಲಿ ಲಂಕಾ ಪಡೆ ಎಡವಿತು. 18.4 ಓವರ್‌ಗಳಲ್ಲಿ 101 ರನ್‌ಗೆ ಕುಸಿಯಿತು. ಸುನಿಲ್ ನಾರಾಯಣ್‌ 9ಕ್ಕೆ 3 ವಿಕೆಟ್‌ ಪಡೆದು ಗಮನ ಸೆಳೆದರು. ಸ್ಯಾಮ್ಯುಯೆಲ್ಸ್ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರವಾಗಿದ್ದರು.

  • ವೆಸ್ಟ್‌ಇಂಡೀಸ್‌ ತಂಡವು ಟ್ರೋಫಿ ಗೆಲ್ಲುತ್ತಿದ್ದಂತೆ ಸ್ಫೋಟಕ ಬ್ಯಾಟರ್‌ ಕ್ರಿಸ್‌ ಗೇಲ್‌ ಸೇರಿದಂತೆ ಆಟಗಾರರು ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ‘ಗಂಗ್ನಮ್‌ ಸ್ಟೈಲ್‌’ ನೃತ್ಯ ಮಾಡಿ ಸಂಭ್ರಮಿಸಿದ್ದರು.

ನಾಲ್ಕನೇ ವಿಶ್ವಕಪ್‌: 2012

ಆತಿಥ್ಯ: ಶ್ರೀಲಂಕಾ

ವಿಜೇತ ತಂಡ: ವೆಸ್ಟ್‌ಇಂಡೀಸ್‌

ರನ್ನರ್ಸ್ ಅಪ್‌: ಶ್ರೀಲಂಕಾ

ತಂಡಗಳು: 12

ಪಂದ್ಯಗಳು: 27

ಸರಣಿ ಶ್ರೇಷ್ಠ: ಶೇನ್ ವ್ಯಾಟ್ಸನ್‌ (ಆಸ್ಟ್ರೇಲಿಯಾ)

ಶ್ರೇಷ್ಠ ಬ್ಯಾಟರ್‌: ಶೇನ್‌ ವ್ಯಾಟ್ಸನ್‌ (ಆಸ್ಟ್ರೇಲಿಯಾ, 249 ರನ್)

ಶ್ರೇಷ್ಠ ಬೌಲರ್‌: ಅಜಂತಾ ಮೆಂಡೀಸ್‌ (ಶ್ರೀಲಂಕಾ, 15 ವಿಕೆಟ್‌)

~ ಆಧಾರ: ಕ್ರೀಡಾ ವೆಬ್‌ಸೈಟ್‌ಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT