ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ವಿರುದ್ಧ ಫಿಕ್ಸಿಂಗ್ ಆರೋಪ; ಪಾಕ್‌ಗೆ ತಿರುಗೇಟು ನೀಡಿದ ಹರಭಜನ್

Last Updated 6 ನವೆಂಬರ್ 2021, 14:11 IST
ಅಕ್ಷರ ಗಾತ್ರ

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿರುವ ಪಾಕಿಸ್ತಾನಕ್ಕೆ ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್ ತಿರುಗೇಟು ನೀಡಿದ್ದಾರೆ.

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಹರಭಜನ್, 'ಈ ಅಸಂಬದ್ಧ ಆರೋಪಗಳನ್ನು ತಕ್ಷಣ ನಿಲ್ಲಿಸಿ. ನಿಮ್ಮ ಹಣೆಬರಹ ಏನೆಂಬುದು ನಮಗೆ ಗೊತ್ತಿದೆ' ಎಂದು ಹೇಳಿದ್ದಾರೆ.

ಅಫ್ಗಾನಿಸ್ತಾನ ಹಾಗೂ ಸ್ಕಾಟ್ಲೆಂಡ್ ವಿರುದ್ಧ ಭಾರತ ಭರ್ಜರಿ ಗೆಲುವು ದಾಖಲಿಸಿದ ಬೆನ್ನಲ್ಲೇ ಟ್ವಿಟರ್‌ನಲ್ಲಿ 'ಫಿಕ್ಸಿಂಗ್' ಹ್ಯಾಶ್‌ಟ್ಯಾಗ್ ಟ್ರೆಂಡ್ ಆಗಿತ್ತು. ಪಾಕಿಸ್ತಾನದಿಂದ ಇದರ ಉಗಮವಾಗಿದೆ ಎಂಬುದು ತಿಳಿದು ಬಂದಿದೆ.

'ಪಾಕಿಸ್ತಾನವು ಉತ್ತಮ ಕ್ರಿಕೆಟ್ ಆಡಿದೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಭಾರತ ವಿರುದ್ಧ ಉತ್ತಮ ಕ್ರಿಕೆಟ್ ಆಡಿ ಸೋಲಿಸಿರುವುದಕ್ಕೆ ಎಲ್ಲರೂ ನಿಮ್ಮನ್ನು ಪ್ರಶಂಸಿಸುತ್ತಾರೆ. ಅಭಿನಂದನೆಗಳು. ಆದರೆ ನೀವೂ ಗೆದ್ದಾಗ ಸರಿಯಾದ ಕ್ರಿಕೆಟ್ ಆಡಿದ್ದೀರಿ, ನಾವು ಗೆದ್ದಾಗ ಅನುಚಿತವಾಗಿ ವರ್ತಿಸಿ ಅವಮಾನಿಸಲು ಪ್ರಾರಂಭಿಸಿದರೆ ಅದು ತಪ್ಪು. ನಿಮ್ಮ ಕ್ರಿಕೆಟಿಗರ ಖ್ಯಾತಿ ಏನೆಂಬುದು ನಮಗೆಲ್ಲರಿಗೂ ತಿಳಿದಿದೆ' ಎಂದು ಹೇಳಿದ್ದಾರೆ.

'ವಿಶ್ವಕಪ್‌ನಲ್ಲಿ ವರ್ಷಗಳ ಬಳಿಕ ಭಾರತದ ವಿರುದ್ಧ ದಾಖಲಿಸಿದ ಗೆಲುವನ್ನು ಪಾಕಿಸ್ತಾನದ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭಾರತದ ಆಟದ ಬಗ್ಗೆ ನೀವೂ ಪ್ರತಿಕ್ರಿಯಿಸಬಹದು. ಆದರೆ ಭಾರತ ಹಾಗೂ ರಶೀದ್ ಖಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರೆ ಅದು ಅತ್ಯಂತ ಕೀಳುಮಟ್ಟದ ಮತ್ತು ಅವಮಾನಕರ ಸಂಗತಿಯಾಗಿದೆ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT