IND vs AUS ಟೆಸ್ಟ್: ತಿಂಗಳ ಹಿಂದೆ 36ಕ್ಕೆ ಆಲೌಟ್, ಇಂದು ಸರಣಿ ಗೆಲುವು!

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ 4 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿದ್ದ ಟೀಮ್ ಇಂಡಿಯಾ ಇಂದು ಸರಣಿ ವಶಪಡಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ 36ಕ್ಕೆ ಆಲೌಟ್ ಆದ ಕಹಿಯುಂಡ ಒಂದು ತಿಂಗಳ ಬಳಿಕ ಅದೇ ದಿನ ಸರಣಿ ಗೆಲುವಿನ ಸಿಹಿಯುಂಡಿದೆ!
ಹೌದು, ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ, ಅಂದರೆ ಡಿಸೆಂಬರ್ 19ರಂದು ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತವು ಕೇವಲ 36 ರನ್‌ಗಳಿಗೆ ಆಲೌಟ್ ಆಗಿತ್ತು. ಆ ಮೂಲಕ ಇದುವರೆಗೆ ಭಾರತವು ಒಂದು ಇನ್ನಿಂಗ್ಸ್‌ನಲ್ಲಿ ಗಳಿಸಿದ ಕನಿಷ್ಠ ಮೊತ್ತ ಎಂಬ ಕುಖ್ಯಾತಿಗೆ ಪಾತ್ರವಾಗಿತ್ತು. ಯಾವೊಬ್ಬ ಬ್ಯಾಟ್ಸ್‌ಮನ್ ಸಹ ಎರಡಂಕಿ ತಲುಪಿರಲಿಲ್ಲ.
ಓದಿ: IND vs AUS ಟೆಸ್ಟ್: ಭಾರತಕ್ಕೆ ಐತಿಹಾಸಿಕ ಗೆಲುವು, ಇಲ್ಲಿವೆ ಸ್ವಾರಸ್ಯಕರ ಸಂಗತಿ
ಭಾರತದ ಈ ಕಳಪೆ ಸಾಧನೆಗೆ ಮಾಜಿ ಕ್ರಿಕೆಟಿಗರೂ ಸೇರಿದಂತೆ ಅಭಿಮಾನಿಗಳ ವಲಯದಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ‘ಇದು ಮರೆಯಬೇಕಾದ ಒಟಿಪಿ 49204084041’ ಎಂದು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಜರೆದಿದ್ದರು.
ಅದಾದ ಬಳಿಕ ಮೈ ಕೊಡವಿ ಎದ್ದ ಭಾರತ ತಂಡವು ನಂತರದ ಪಂದ್ಯದಲ್ಲಿ ಜಯ ಗಳಿಸಿ ಸರಣಿಯಲ್ಲಿ ಸಮ–ಬಲ ಸಾಧಿಸಿತ್ತು. ಮೂರನೇ ಪಂದ್ಯ ಡ್ರಾ ಮಾಡಿಕೊಂಡಿತ್ತು.
ಓದಿ: ಇದು ಮರೆಯಬೇಕಾದ ಒಟಿಪಿ 49204084041’: ಸೆಹ್ವಾಗ್
ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದಾಗಿ ತಂಡದಿಂದ ಹೊರಗುಳಿಯಬೇಕಾಗಿ ಬಂದದ್ದು, ಆಸ್ಟ್ರೇಲಿಯಾ ಆಟಗಾರರ ಸ್ಲೆಡ್ಜಿಂಗ್, ಪ್ರೇಕ್ಷಕರ ಜನಾಂಗೀಯ ನಿಂದನೆ ಇತ್ಯಾದಿ ಎಲ್ಲ ಸಮಸ್ಯೆ–ಸವಾಲುಗಳನ್ನು ಮೆಟ್ಟಿ ನಿಂತ ಯುವ ಆಟಗಾರರು ಇದೀಗ ‘ಗಾಬಾ’ದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಸಿರಾಜ್ ಅವರ ಬೌಲಿಂಗ್, ಪಂತ್ ಹಾಗೂ ಗಿಲ್ ದಿಟ್ಟ ಬ್ಯಾಟಿಂಗ್‌ಗೆ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.
19 Dec 2020: India all out for 36
19 Jan 2021: India breach The Gabba fortress#AUSvIND pic.twitter.com/P0sh5zsmtJ— ICC (@ICC) January 19, 2021
ಓದಿ: ಭಾರತದ ಇನಿಂಗ್ಸ್ಗೆ ಬಲ ತುಂಬಿದ ಶುಭಮನ್ ಆಟಕ್ಕೆ ಹಿರಿಯ ಕ್ರಿಕೆಟಿಗರ ಮೆಚ್ಚುಗೆ
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.