ಶುಕ್ರವಾರ, ಫೆಬ್ರವರಿ 28, 2020
19 °C
ಫೆ. 16ರಂದು ಮುಗಿಯಲಿರುವ ಪ್ರಕ್ರಿಯೆ

ಲಾರೆಯಸ್‌ ಕ್ರೀಡಾ ಪುರಸ್ಕಾರ: ಅಂತಿಮ ಐವರಲ್ಲಿ ಸಚಿನ್‌ ಹೆಸರು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಲಾರೆಯಸ್‌ ಸ್ಪೋರ್ಟಿಂಗ್‌ ಮೋಮೆಂಟ್‌ 2000–2020’ (ಕ್ರೀಡಾ ಗಳಿಗೆ) ಪುರಸ್ಕಾರಕ್ಕಾಗಿ ಅಂತಿಮಗೊಳಿಸಲಾಗಿರುವ ಐವರು ಕ್ರೀಡಾ ತಾರೆಯರಲ್ಲಿ ಭಾರತದ ಕ್ರಿಕೆಟ್‌ ತಾರೆ ಸಚಿನ್‌ ತೆಂಡೂಲ್ಕರ್‌ ಸಹ ಒಳಗೊಂಡಿದ್ದಾರೆ.

‌ಮೂರನೇ ಹಾಗೂ ಅಂತಿಮ ಹಂತದ ಮತದಾನದ ನಂತರ ವಿಜೇತ ಕ್ರೀಡಾಪಟುವನ್ನು ಆಯ್ಕೆ ಮಾಡಲಾಗುವುದು. ಈ ಪ್ರಕ್ರಿಯೆ ಫೆ. 16ರಂದು ಮುಕ್ತಾಯಗೊಳ್ಳಲಿದೆ. ‘ಕ್ಯಾರೀಡ್‌ ಆನ್‌ ದಿ ಶೌಲ್ಡರ್ಸ್‌ ಆಫ್‌ ಎ ನೇಷನ್‌’ ಶೀರ್ಷಿಕೆಯ ಈ ಘಳಿಗೆಯು ಭಾರತ ತಂಡ 2011ರ ಐಸಿಸಿ ವಿಶ್ವಕಪ್‌ ಗೆದ್ದುಕೊಂಡ ಸಂದರ್ಭದ್ದು.

ಆ ವೇಳೆ ತಮ್ಮ ಆರನೇ ವಿಶ್ವಕಪ್‌ನಲ್ಲಿ ಆಡಿದ ತೆಂಡೂಲ್ಕರ್‌ ಮೊದಲ ಬಾರಿ ಯಶಸ್ಸು ಸವಿದಿದ್ದರು. ತವರು ಮುಂಬೈನಲ್ಲಿ ಭಾರತ ತಂಡ ಫೈನಲ್‌ನಲ್ಲಿ ಆರು ವಿಕೆಟ್‌ಗಳಿಂದ ಶ್ರೀಲಂಕಾ ತಂಡವನ್ನು ಸೋಲಿಸಿದ ನಂತರ ಆಟಗಾರರು ಅವರನ್ನು ಹೆಗಲ ಮೇಲೆ ಕೂರಿಸಿ ಕ್ರೀಡಾಂಗಣದ ಸುತ್ತುಹಾಕಿದ್ದರು.

ವಿಜೇತ ಕ್ರೀಡಾಪಟುವಿನ ಹೆಸರನ್ನು ಫೆಬ್ರುವರಿ 17ರಂದು ಲಾರೆಯಸ್‌ ವಿಶ್ವ ಕ್ರೀಡಾ ಪ್ರಶಸ್ತಿ ಮೇಳದಂದು ಬರ್ಲಿನ್‌ನಲ್ಲಿ ನೀಡಲಾಗುವುದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು