ಬುಧವಾರ, ಜುಲೈ 28, 2021
28 °C

ವೆಸ್ಟ್ ಇಂಡೀಸ್ ಲೆಜೆಂಡ್ಸ್ ಎದುರು ಸೆಹ್ವಾಗ್ ಅಜೇಯ ಅರ್ಧಶತಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ವೀರೇಂದ್ರ ಸೆಹ್ವಾಗ್ (74; 57 ಎಸೆತ, 11 ಬೌಂಡರಿ) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಸಚಿನ್ ತೆಂಡೂಲ್ಕರ್ ನಾಯಕತ್ವದ ಭಾರತ ಲೆಜೆಂಡ್ಸ್ ತಂಡ ವೆಸ್ಟ್ ಇಂಡೀಸ್ ಲೆಜೆಂಡ್ಸ್ ಎದುರು ಗೆಲುವು ಸಾಧಿಸಿತು.

ರಸ್ತೆ ಸುರಕ್ಷತೆ ವಿಶ್ವ ಸಿರೀಸ್ ಅಂಗವಾಗಿ ನಡೆದ ಟ್ವೆಂಟಿ–20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್ಸ್ ಮುಂದಿಟ್ಟ 151 ರನ್‌ಗಳ ಗುರಿ ಬೆನ್ನತ್ತಿದ ಭಾರತ ಲೆಜೆಂಡ್ಸ್‌ ಪರ ಸೆಹ್ವಾಗ್ ಮತ್ತು ಸಚಿನ್ ಮೊದಲ ವಿಕೆಟ್‌ಗೆ 83 ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್ ಇಂಡೀಸ್ ಲೆಜೆಂಡ್ಸ್‌: 20 ಓವರ್‌ಗಳಲ್ಲಿ 8ಕ್ಕೆ 150 (ಶಿವನಾರಾಯಣ್ ಚಂದ್ರಪಾಲ್ 61, ಬ್ರಯಾನ್ ಲಾರಾ 17; ಜಹೀರ್ ಖಾನ್ 30ಕ್ಕೆ2, ಮುನಾಫ್ ಪಟೇಲ್ 24ಕ್ಕೆ2, ಪ್ರಗ್ಯಾನ್ ಓಜಾ 27ಕ್ಕೆ2); ಭಾರತ ಲೆಜೆಂಡ್ಸ್‌: 18.2 ಓವರ್‌ಗಳಲ್ಲಿ 3ಕ್ಕೆ 151 (ವೀರೇಂದ್ರ ಸೆಹ್ವಾಗ್ ಔಟಾಗದೆ 74, ಸಚಿನ್ ತೆಂಡೂಲ್ಕರ್ 36, ಯುವರಾಜ್ ಸಿಂಗ್ ಔಟಾಗದೆ 10; ಕಾರ್ಲ್ ಹೂಪರ್ 19ಕ್ಕೆ2). ಫಲಿತಾಂಶ: ಭಾರತಕ್ಕೆ 7 ವಿಕೆಟ್‌ಗಳ ಜಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು