ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೆಂಡು ಹೊಳೆಯದಿದ್ದರೆ ಟೆಸ್ಟ್‌ ಕ್ರಿಕೆಟ್‌ ಮಂಕು: ಪ್ಯಾಟ್

Last Updated 10 ಮೇ 2020, 19:30 IST
ಅಕ್ಷರ ಗಾತ್ರ

ಸಿಡ್ನಿ: ಚೆಂಡಿನ ಹೊಳಪು ಉಳಿಸಿಕೊಳ್ಳಲು ಎಂಜಲು ಮತ್ತು ಬೆವರಿನ ಬಳಕೆಯನ್ನು ನಿಷೇಧಿಸಿದರೆ ಟೆಸ್ಟ್ ಕ್ರಿಕೆಟ್ ಮಾದರಿಯು ಸೊರಗುವುದು ಖಚಿತ ಎಂದು ಆಸ್ಟ್ರೇಲಿಯದ ವೇಗದ ಬೌಲರ್ ಪ್ಯಾಟ್ ಕಮಿನ್ಸ್‌ ಅಭಿಪ್ರಾಯಪಟ್ಟಿದ್ಧಾರೆ.

ಕೊರೊನಾ ವೈರಸ್‌ ಸೋಂಕು ತಡೆಯುವ ಹಿನ್ನೆಲೆಯಲ್ಲಿ ಕ್ರಿಕೆಟ್‌ನಲ್ಲಿ ಎಂಜಲು ಮತ್ತು ಬೆವರನ್ನು ಚೆಂಡಿಗೆ ಸವರುವುದನ್ನು ನಿಷೇಧಿಸಬೇಕೆಂಬ ಚರ್ಚೆಯ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ. ಚೆಂಡಿನ ಮೇಲ್ಮೈನ ರಚನೆಯನ್ನು ಬದಲಿಸುವುದರ ಕುರಿತು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನಾನೊಬ್ಬ ವೇಗದ ಬೌಲರ್ ಆಗಿ ಚೆಂಡನ್ನು ಸ್ವಿಂಗ್ ಮಾಡಲು ಇಷ್ಟಪಡುತ್ತ. ಅದಕ್ಕಾಗಿ ಚೆಂಡಿನ ಒಂದು ಬದಿಯನ್ನು ಹೊಳೆಯುವಂತೆ ಮಾಡುತ್ತೇನೆ. ಬೌಲರ್ ಮತ್ತು ಬ್ಯಾಟ್ಸ್‌ಮನ್‌ಗಳಿಬ್ಬರಿಗೂ ತಮ್ಮ ಸಾಮರ್ಥ್ಯಗಳನ್ನು ಒರೆಗೆ ಹಚ್ಚಲು ಅವಕಾಶವಿರುವ ಟೆಸ್ಟ್ ಕ್ರಿಕೆಟ್‌ ಅನ್ನು ಜನರು ಹೆಚ್ಚು ಇಷ್ಟಪಡುತ್ತಾರೆ. ಅಲ್ಲಿ ಸ್ವಿಂಗ್, ಸ್ಪಿನ್ ಬೌಲಿಂಗ್‌ನ ವೈವಿಧ್ಯತೆಗಳಿವೆ. ಬ್ಯಾಟ್ಸ್‌ಮನ್‌ಗಳ ಅಬ್ಬರವನ್ನು ತಡೆಯುವ ಛಲದ ಆಟವಿರುತ್ತದೆ. ಅದಕ್ಕಾಗಿಯೇ ಟೆಸ್ಟ್‌ ಇಲ್ಲಿಯವರೆಗೂ ಬೆಳೆದು ಬಂದಿದೆ’ ಎಂದು ಪ್ಯಾಟ್ ಹೇಳಿದ್ದಾರೆ.

ಚೆಂಡಿನ ಹೊಳಪು ಉಳಿಸಿಕೊಳ್ಳಲು ಎಂಜಲು ಬದಲಿಗೆ ಬಳಸಲು ವ್ಯಾಕ್ಸ್‌ ತಯಾರಿಸಿರುವುದಾಗಿ ಕುಕಬುರಾ ಚೆಂಡಿನ ಉತ್ಪಾದಕರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ್ ಪ್ಯಾಟ್, ‘ಅವರು ಇದರೊಂದಿಗೆ ಇನ್ನೂ ಒಂದು ಪರಿಹಾರವನ್ನು ಕಂಡುಕೊಳ್ಳಬೇಕು. ಅದು ಸಲೈವಾ ಅಥವಾ ಮತ್ತಿತರ ಯಾವುದೇ ಪದಾರ್ಥವಾಗಿರಲಿ ಚೆಂಡಿನ ಹೊಳಪು ಉಳಿಸಿಕೊಳ್ಳಲು ಸಾಧ್ಯವಾಗಬೇಕು. ಚೆಂಡು ಸ್ವಿಂಗ್ ಆಗಬೇಕು’ ಎಂದಿದ್ದಾರೆ.

‘ಆರೋಗ್ಯವು ಎಲ್ಲಕ್ಕಿಂತ ಮುಖ್ಯ. ಇವತ್ತಿನ ಪರಿಸ್ಥಿತಿಯಲ್ಲಿ ಕ್ರೀಡೆಗಳನ್ನು ಆರಂಭಿಸುವುದು ಅಷ್ಟು ಸುಲಭವಲ್ಲ. ಕೊರೊನಾ ವಿರುದ್ಧದ ಹೋರಾಟ ಇನ್ನೂ ಮುಗಿದಿಲ್ಲ. ಅದಷ್ಟು ಬೇಗ ವೈರಸ್‌ ಮೇಲೆ ಹತೋಟಿ ಸಾಧಿಸುವಂತಾಗಬೇಕು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT