ಬುಧವಾರ, ಮೇ 25, 2022
29 °C

IPL 2021| ಚೆನ್ನೈಗೆ ಪೂಜಾರ: 2014ರ ಬಳಿಕ ಇದೇ ಮೊದಲ ಬಾರಿಗೆ ಐಪಿಎಲ್‌ ಪ್ರವೇಶ

ಪಿಟಿಐ Updated:

ಅಕ್ಷರ ಗಾತ್ರ : | |

ಚೆನ್ನೈ: ಟೆಸ್ಟ್ ಕ್ರಿಕೆಟ್ ಪರಿಣತ ಬ್ಯಾಟ್ಸ್‌ಮನ್ ಚೇತೆಶ್ವರ್ ಪೂಜಾರ ಆರು ವರ್ಷಗಳ ನಂತರ ಐಪಿಎಲ್ ಟೂರ್ನಿಗೆ ಮರಳಿದರು.

ಇದನ್ನು ಓದಿ: ಆಟಗಾರರ ಹರಾಜು ಪ್ರಕ್ರಿಯೆಯ ಕ್ಷಣ ಕ್ಷಣದ ಮಾಹಿತಿ 

ಗುರುವಾರ ನಡೆದ 14ನೇ ಆವೃತ್ತಿಯ  ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಪೂಜಾರ ಅವರನ್ನು ಮೂಲಬೆಲೆ (₹ 50 ಲಕ್ಷ) ಗೆ ಚೆನ್ನೈ ಸೂಪರ್‌ ಕಿಂಗ್ಸ್‌ ಖರೀದಿಸಿತು.

2014ರಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡದಲ್ಲಿ ಪೂಜಾರ ಆಡಿದ್ದರು. ಅದರ ನಂತರ ಅವರು ಐಪಿಎಲ್‌ನಲ್ಲಿ ಅವಕಾಶ ಗಿಟ್ಟಿಸಿರಲಿಲ್ಲ.  ಇದೀಗ ಮಹೇಂದ್ರಸಿಂಗ್ ನಾಯಕತ್ವದ ಚೆನ್ನೈ ಬಳಗದಲ್ಲಿ ಅವಕಾಶ ಪಡೆದಿದ್ದಾರೆ.

’ನನ್ನ ಮೇಲೆ ವಿಶ್ವಾಸವಿರಿಸಿದ್ದಕ್ಕೆ ಧನ್ಯವಾದಗಳು‘ ಎಂದು 33 ವರ್ಷದ ಪೂಜಾರ ಟ್ವೀಟ್ ಮಾಡಿದ್ದಾರೆ.

’ಬ್ಯಾಟಿಂಗ್ ಚಾಂಪಿಯನ್ ಚೆ ಬುಜಿ (ಚೇತೆಶ್ವರ್ ಪೂಜಾರ) ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತೇವೆ‘ ಎಂದು ಚೆನ್ನೈ ತಂಡವೂ ಟ್ವೀಟ್ ಮಾಡಿದೆ.

ಸೌರಾಷ್ಟ್ರದ ಪೂಜಾರ 83 ಟೆಸ್ಟ್‌ಗಳಲ್ಲಿ 13834 ರನ್‌ಗಳನ್ನು ಗಳಿಸಿದ್ದಾರೆ.  ಐದು ಏಕದಿನ ಪಂದ್ಯಗಳಲ್ಲಿ 130 ರನ್ ಗಳಿಸಿದ್ದಾರೆ. ಆದರೆ ಇದುವರೆಗೂ ಅಂತರರಾಷ್ಟ್ರೀಯ ಟಿ20 ಪಂದ್ಯಗಳಿಗೆ ಪದಾರ್ಪಣೆ ಮಾಡಿಲ್ಲ. 

ಈ ಹಿಂದೆ ಐಪಿಎಲ್‌ನಲ್ಲಿ 30 ಪಂದ್ಯಗಳಲ್ಲಿ ಆಡಿರುವ ಪೂಜಾರ 390 ರನ್ ಗಳಿಸಿದ್ಧಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತ ನೈಟ್ ರೈಡರ್ಸ್‌ತಂಡಗಳನ್ನೂ ಕೆಲ ವರ್ಷ ಪ್ರತಿನಿಧಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು