ಚಿನ್ನಸ್ವಾಮಿ ಕ್ರೀಡಾಂಗಣದ ಸಭಾಭವನದಲ್ಲಿ ಟೈಗರ್ ಕಪ್ ಕ್ರಿಕೆಟ್ ಟೂರ್ನಿಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಮತ್ತು ಅರಣ್ಯ ಸಿಬ್ಬಂದಿಯನ್ನು ಅವರು ಸನ್ಮಾನಿಸಿದರು. ಕಾರ್ಯಕ್ರಮದ ನಂತರ ಟೈಗರ್ ಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದ ಆಟಗಾರರೆಲ್ಲರೂ ಸರದಿ ಸಾಲಿನಲ್ಲಿ ಬಂದು ವಿಶ್ವನಾಥ್ ಅವರೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡರು. ವೇದಿಕೆಯ ಒಂದು ಬದಿಯಲ್ಲಿ ಇದ್ದ ಕುರ್ಚಿಯಲ್ಲಿ ಕುಳಿತ ಅವರು ಎಲ್ಲ ಮಕ್ಕಳಿಗೂ ಹಸ್ತಾಕ್ಷರ ನೀಡಿದರು. ಮಕ್ಕಳು ತಂದ ಬ್ಯಾಟ್, ಚೆಂಡು, ಟೀಶರ್ಟ್, ಹಾಳೆ, ಪ್ರಮಾಣಪತ್ರ ಮತ್ತು ಪದಕಗಳ ಮೇಲೆ ಮಾರ್ಕರ್ ಮೂಲಕ ಹಸ್ತಾಕ್ಷರ ಹಾಕಿಕೊಟ್ಟರು.