ಶನಿವಾರ, ಜೂನ್ 6, 2020
27 °C

ಐಪಿಎಲ್‌ ಗಿಂತ ದೇಶಿ ಟೂರ್ನಿಯಲ್ಲಿ ಆಡಿ: ಚಾಪೆಲ್ ಸಲಹೆ

ಪಿಟಿಐ Updated:

ಅಕ್ಷರ ಗಾತ್ರ : | |

ಮೆಲ್ಬರ್ನ್: ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆಡುವುದಕ್ಕಿಂತ ನಮ್ಮ ದೇಶಿ ಟೂರ್ನಿಗಳಲ್ಲಿ ಆಡಲು ಆದ್ಯತೆ ನೀಡಬೇಕು ಎಂದು ಆಷ್ಟ್ರೇಲಿಯಾದ ಕ್ರಿಕೆಟಿಗರಿಗೆ ಹಿರಿಯ ಆಟಗಾರ ಇಯಾನ್ ಚಾಪೆಲ್ ಸಲಹೆ ನೀಡಿದ್ದಾರೆ.

ಐಪಿಎಲ್‌ ಬೇರೆ ಬೇರೆ ತಂಡಗಳಲ್ಲಿ ಆಸ್ಟ್ರೇಲಿಯಾದ 13 ಆಟಗಾರರು ಇದ್ದಾರೆ. ವೇಗಿ ಪ್ಯಾಟ್ ಕಮಿನ್ಸ್ (₹ 15.5 ಕೋಟಿ) ಅತಿ ಹೆಚ್ಚು ಮೌಲ್ಯಕ್ಕೆ ಹೋದ ಬಾರಿಯ ಹರಾಜಿನಲ್ಲಿ ಬಿಕರಿಯಾಗಿದ್ದರು. ಆದರೆ ಕೊರೊನಾ ವೈರಸ್‌ ಕಾರಣ ಭಾರತ ಸೇರಿದಂತೆ  ಹಲವು ದೇಶಗಳಲ್ಲಿ ಲಾಕ್‌ಡೌನ್ ಇರುವುದರಿಂದ ಐಪಿಎಲ್ ಮುಂದೂಡಲಾಗಿದೆ.

‘ಶೆಫಿಲ್ಡ್ ಶೀಲ್ಡ್‌ ಟೂರ್ನಿ ಸೇರಿದಂತೆ ಹಲವು ದೇಶಿ ಟೂರ್ನಿಗಳಿವೆ. ಅದರಲ್ಲಿ ಆಡಿದರೆ ಕ್ರಿಕೆಟ್ ಆಸ್ಟ್ರೇಲಿಯಾವು ಆಟಗಾರರಿಗೆ ಉತ್ತಮ ವೇತನ ನೀಡುತ್ತದೆ. ಆದ್ದರಿಂದ ಐಪಿಎಲ್ ಆದಾಯದ ಮೇಲಿನ ಆಸೆ ಬಿಟ್ಟು ದೇಶದ ಟೂರ್ನಿಗಳಿಗೆ ಪ್ರಾಮುಖ್ಯತೆ ನೀಡಬೇಕು’ ಎಂದು ಚಾಪೆಲ್ ಹೇಳಿದ್ದಾರೆ.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು