ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ವರ್ಷದೊಳಗಿನವರ ಕ್ರಿಕೆಟ್ ವಿಶ್ವಕಪ್: ಪದ್ಮನಾಭನ್, ಕುಟ್ಟಿ ನೇಮಕ

Published 10 ಜನವರಿ 2024, 15:25 IST
Last Updated 10 ಜನವರಿ 2024, 15:25 IST
ಅಕ್ಷರ ಗಾತ್ರ

ದುಬೈ: ಭಾರತದ ಅಂಪೈರ್ ಕೆ.ಎನ್‌.ಎ. ಪದ್ಮನಾಭನ್ ಮತ್ತು ರೆಫರಿ ನಾರಾಯಣ ಕುಟ್ಟಿ ಅವರು ಇದೇ ತಿಂಗಳು ಆರಂಭವಾಗಲಿರುವ ಪುರುಷರ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಕಾರ್ಯನಿರ್ವಹಿಸಲಿದ್ಧಾರೆ.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ಪ್ರಕಟಿಸಿರುವ ಅಂಪೈರ್ ಮತ್ತು ರೆಫರಿಗಳ ಪಟ್ಟಿಯಲ್ಲಿ ಭಾರತದ ಈ ಇಬ್ಬರು ಮಾತ್ರ ಸ್ಥಾನ ಪಡೆದಿದ್ದಾರೆ.

ಇದೇ 19 ರಿಂದ ಫೆಬ್ರುವರಿ 11ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿಯು ನಡೆಯಲಿದೆ. 41 ಪಂದ್ಯಗಳು ನಡೆಯಲಿವೆ.

16 ಅಂಪೈರ್‌ಗಳು ಕಾರ್ಯನಿರ್ವಹಿಸುವರು. ನಾಲ್ವರು ಪಂದ್ಯ ರೆಫರಿಗಳಿದ್ಧಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT