ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

U-19 ಏಷ್ಯಾ ಕಪ್ ಕ್ರಿಕೆಟ್‌: ಭಾರತ ತಂಡ ಪ್ರಕಟ; ರಾಜ್ಯದ ಧನುಷ್‌ ಗೌಡಗೆ ಸ್ಥಾನ

Published 25 ನವೆಂಬರ್ 2023, 13:10 IST
Last Updated 25 ನವೆಂಬರ್ 2023, 13:10 IST
ಅಕ್ಷರ ಗಾತ್ರ

ಮುಂಬೈ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ಎಸಿಸಿ 19 ವರ್ಷದೊಳಗಿನ ಪುರುಷರ ಏಷ್ಯಾ ಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಭಾರತ ತಂಡವನ್ನು ಪ್ರಕಟಿಸಲಾಗಿದೆ. 

ಈ ತಂಡದಲ್ಲಿ ರಾಜ್ಯದ ಮಧ್ಯಮ ವೇಗದ ಬೌಲರ್ ಧನುಷ್‌ ಗೌಡ ಸ್ಥಾನ ಪಡೆದಿದ್ದಾರೆ. ಡಿಸೆಂಬರ್ 8ರಂದು ಈ ಟೂರ್ನಿ ಆರಂಭವಾಗಲಿದ್ದು ಫೈನಲ್ 17ಕ್ಕೆ ನಿಗದಿಯಾಗಿದೆ.

 ಉದಯೋನ್ಮುಖ ಬ್ಯಾಟರ್ ಉದಯ್ ಸಹಾರನ್ ಅವರು ಭಾರತ ತಂಡದ ನಾಯಕರಾಗಿದ್ದಾರೆ. ಜೂನಿಯರ್ ಏಷ್ಯಾ ಕಪ್‌ನಲ್ಲಿ ಭಾರತ ಎಂಟು ಬಾರಿ ಪ್ರಶಸ್ತಿ ಗೆದ್ದುಕೊಂಡು ಪ್ರಾಬಲ್ಯ ಮೆರೆದಿದೆ. 

ತಂಡ ಹೀಗಿದೆ..

ಉದಯ್ ಸಹಾರನ್ (ನಾಯಕ), ಸೌಮಿ ಕುಮಾರ್ ಪಾಂಡೆ (ಉಪನಾಯಕ), ಅರ್ಷಿನ್ ಕುಲಕರ್ಣಿ, ಆದರ್ಶ್ ಸಿಂಗ್‌, ರುದ್ರ ಮಯೂರ್ ಪಟೇಲ್, ಸಚಿನ್ ಧಾಸ್, ಪ್ರಿಯಾಂಶು ಮೊಲಿಯಾ, ಮುಶೀರ್ ಖಾನ್, ಧನುಷ್‌ ಗೌಡ, ಅವಿನಾಶ್ ರಾವ್ (ವಿಕೆಟ್‌ ಕೀಪರ್), ಎಂ.ಅಭಿಷೇಕ್, ಇನ್ನೇಶ್ ಮಹಾಜನ್ (ವಿಕೆಟ್ ಕೀಪರ್‌), ಆರ್ಧ್ಯ ಶುಕ್ಲಾ, ರಾಜ್‌ ಲಿಂಬಾನಿ, ನಮನ್ ತಿವಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT