ಕರಾಚಿ: ಅಚ್ಚರಿಯ ಹೇಳಿಕೆಯೊಂದರಲ್ಲಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಮಾಜಿ ಮುಖ್ಯಸ್ಥ ನಜಮ್ ಸೇಥಿ ಅವರು, ಟೆಸ್ಟ್ ಆಟಗಾರ ಉಮರ್ ಅಕ್ಮಲ್ ಅವರಿಗೆ ಮೂರ್ಛೆ ರೋಗವಿರುವುದನ್ನು ಬಹಿರಂಗಪಡಿಸಿದ್ದಾರೆ. ಆದರೆ ಆತ ಚಿಕಿತ್ಸೆ ಪಡೆಯಲು ನಿರಾಕರಿಸಿದ್ದ ಎಂದೂ ಅವರು ಹೇಳಿದ್ದಾರೆ.

ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಬುಕಿಯೊಬ್ಬರು ಸಂಪರ್ಕಿಸಿದ್ದನ್ನು ಮುಚ್ಚಿಟ್ಟಿದ್ದ ಕಾರಣ ಉಮರ್ ಇತ್ತೀಚೆಗೆ ಮೂರು ವರ್ಷದ ನಿಷೇಧ ಶಿಕ್ಷೆಗೆ ಒಳಗಾಗಿದ್ದಾರೆ.

2013–18ರ ಅವಧಿಯಲ್ಲಿ ಸೇಥಿ ಅವರು ಪಿಸಿಬಿ ಹಾಗೂ ಅದರ ಕಾರ್ಯಕಾರಿ ಸಮಿತಿಯ ಮುಖ್ಯಸ್ಥರಾಗಿದ್ದರು. ‘ನಾನು ಆಡಳಿತ ಮಂಡಳಿಯ ಹೊಣೆ ಹೊತ್ತುಕೊಂಡ ವೇಳೆ ಎದುರಿಸಿದ ಮೊದಲ ಸಮಸ್ಯೆ ಉಮರ್ ಅವರದಾಗಿತ್ತು’ ಎಂದು ಸೇಥಿ ಹೇಳಿದ್ದಾರೆ.

‘ಉಮರ್ ಮೂರ್ಛೆರೋಗದಿಂದ ಬಳಲುತ್ತಿರುವುದನ್ನು ವೈದ್ಯಕೀಯ ವರದಿಗಳು ಖಚಿತಪಡಿಸಿದ್ದವು. ವೆಸ್ಟ್ ಇಂಡೀಸ್ ಪ್ರವಾಸದಿಂದ ಆತನನ್ನು ವಾಪಸ್ ಕರೆಸಲಾಗಿತ್ತು. ಇದೊಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದ್ದು, ವಿಶ್ರಾಂತಿ ಹಾಗೂ ಚಿಕಿತ್ಸೆ ಪಡೆದುಕೊ ಎಂದು ಆತನಿಗೆ ಸೂಚಿಸಿದ್ದೆ. ಆದರೆ ಇದನ್ನು ಆತ ಸ್ವೀಕರಿಸಲಿಲ್ಲ. ಆತನ ಮನಸ್ಸು ಎಲ್ಲೋ ಇತ್ತು’ ಎಂದು ಸೇಥಿ, ಟಿವಿ ಚಾನೆಲ್‌ವೊಂದಕ್ಕೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.