ಭಾನುವಾರ, ಜನವರಿ 19, 2020
29 °C

19 ವರ್ಷದೊಳಗಿನವರ ವಿಶ್ವಕಪ್‌ಗೆ ಅಂಪೈರ್ ಅನಿಲ್ ಚೌಧರಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಇದೇ 17ರಿಂದ ಆರಂಭವಾಗಲಿರುವ 19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಕಾರ್ಯನಿರ್ವಹಿಸಲು ಭಾರತದ ಅಂಪೈರ್ ಅನಿಲ್ ಚೌಧರಿ ನೇಮಕವಾಗಿದ್ದಾರೆ.  ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಅವರು ಭಾರತದಿಂದ ಆಯ್ಕೆಯಾದ ಏಕೈಕ ಅಂಪೈರ್ ಆಗಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಒಟ್ಟು 16 ಅಂಪೈರ್‌ಗಳನ್ನು ಟೂರ್ನಿಗೆ ನಿಯೋಜಿಸಿದೆ. 12 ದೇಶಗಳಿಂದ ಇವರನ್ನು ಆಯ್ಕೆ ಮಾಡಲಾಗಿದೆ. 54 ವರ್ಷದ ಅನಿಲ್ ಅವರು ಇದುವರೆಗೆ 20 ಅಂತರರಾಷ್ಟ್ರೀಯ ಏಕದಿನ ಮತ್ತು 27 ಟ್ವೆಂಟಿ–20 ಪಂದ್ಯಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಟೂರ್ನಿಯಲ್ಲಿಯೂ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಅನಿಲ್ ದೆಹಲಿಯವರಾಗಿದ್ದಾರೆ.

ಟೂರ್ನಿಯಲ್ಲಿ ಶ್ರೀಲಂಕಾದ ಗ್ರೇಮ್ ಲೆಬರೂರಿ, ದಕ್ಷಿಣ ಆಫ್ರಿಕಾದ ಶೈದ್ ವಾಡವಲ್ಲಾ ಮತ್ತು ಇಂಗ್ಲೆಂಡ್‌ನ ಫಿಲ್ ವಿಟ್ಟಿಕೇಸ್ ಅವರು ರೆಫರಿಗಳಾಗಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು