ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಾನಗತಿಯ ಆಟ: ಡಾಮ್‌ ಬೆನ್ನಿಗೆ ವಾನ್‌

Last Updated 18 ಜುಲೈ 2020, 17:17 IST
ಅಕ್ಷರ ಗಾತ್ರ

ಮ್ಯಾಂಚೆಸ್ಟರ್‌: ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದಲ್ಲಿ ತೀರಾ ನಿಧಾನಗತಿಯ ಬ್ಯಾಟಿಂಗ್‌ ಕಾರಣ ಟೀಕೆಗೊಳಗಾಗಿದ್ದ ಇಂಗ್ಲೆಂಡ್‌ ಬ್ಯಾಟ್ಸ್‌ಮನ್‌ ಡಾಮ್‌ ಸಿಬ್ಲಿ ಬೆನ್ನಿಗೆ ಖ್ಯಾತ ಕ್ರಿಕೆಟಿಗ ಮೈಕೆಲ್‌ ವಾನ್‌ ನಿಂತಿದ್ದಾರೆ. ಇಂಗ್ಲೆಂಡ್‌ ತಂಡಕ್ಕೆ ಇಂತಹ ಆಟಗಾರನ ಅವಶ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿಶುಕ್ರವಾರ 24 ವರ್ಷದ ಸಿಬ್ಲಿ ಅವರು ಶತಕ ಗಳಿಸಲು 312 ಎಸೆತಗಳನ್ನು ಎದುರಿಸಿದ್ದರು. 2014ರ ನವೆಂಬರ್‌ ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲಾದ ಅತ್ಯಂತ ನಿಧಾನಗತಿಯ ಶತಕ ಇದು. 2014ರಲ್ಲಿ ಬಾಂಗ್ಲಾದೇಶ ತಂಡದ ತಮೀಮ್‌ ಇಕ್ಬಾಲ್‌ ಕೂಡ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ100 ರನ್‌ ಗಳಿಸಲು ಇಷ್ಟೇ ಎಸೆತಗಳನ್ನು ತೆಗೆದುಕೊಂಡಿದ್ದರು.

ಕೆರಿಬಿಯನ್‌ ಪಡೆಯ ವಿರುದ್ಧ ಸಿಬ್ಲಿ 120 ರನ್‌ (372 ಎಸೆತ) ಗಳಿಸಿದ್ದರು.

’ಅಬ್ಬರದ ಆಟವಾಡಿದಾಗಲೂ ಇಂಗ್ಲೆಂಡ್‌ ತಂಡವನ್ನು ನಾವು ಟೀಕಿಸುತ್ತಿದ್ದೆವು. ಆದರೆ ಈಗ ಸಿಬ್ಲಿ ಆಡಿದ ರೀತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸಲಾಗುತ್ತಿದೆ. ತಂಡಕ್ಕೆ ಸಿಬ್ಲಿ ಸೂಕ್ತ ಆಟಗಾರ. ಅವರು ದೀರ್ಘಕಾಲ ತಂಡದ ಪರ ಆಡಬೇಕು. ವಿಕೆಟ್‌ ಕಾಯ್ದುಕೊಂಡು ಸಾಕಷ್ಟು ಸಮಯ ಕ್ರೀಸ್‌ನಲ್ಲಿರಬೇಕು‘ ಎಂದು ವಿಸ್ಡನ್‌ ನಿಯತಕಾಲಿಕೆಗೆ ವಾನ್‌ ಹೇಳಿದ್ದಾರೆ.

’ಸಿಬ್ಲಿ ತಮ್ಮ ಬ್ಯಾಟಿಂಗ್‌ ವೈಖರಿಯನ್ನು ಬದಲಾಯಿಸಿಕೊಳ್ಳಬಾರದು. ಪಂದ್ಯದ ಆರಂಭದಲ್ಲಿ ಅವರು ಭದ್ರ ಬುನಾದಿ ಹಾಕಿಕೊಟ್ಟರೆ ಬಿರುಸಿನ ಆಟವಾಡುವ ಆಟಗಾರರಿಗೆ ರನ್‌ ಗಳಿಸಲು ಅನುಕೂಲವಾಗುತ್ತದೆ‘ ಎಂದು ವಾನ್‌ ನುಡಿದರು.

ವಾನ್‌ ಅವರು ಇಂಗ್ಲೆಂಡ್‌ ಪರ 82 ಟೆಸ್ಟ್‌ ಹಾಗೂ 86 ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ.

ವೆಸ್ಟ್‌ ಇಂಡೀಸ್‌ ವಿರುದ್ಧ ಸೌತಾಂಪ್ಟನ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡ ನಾಲ್ಕು ವಿಕೆಟ್‌ಗಳಿಂದ ಸೋತಿತ್ತು. ಆದರೆ ಸಿಬ್ಲಿ (120) ಹಾಗೂ ಬೆನ್‌ ಸ್ಟೋಕ್ಸ್‌ (176) ಅವರ ಬ್ಯಾಟಿಂಗ್‌ ನೆರವಿನಿಂದಎರಡನೇ ಟೆಸ್ಟ್‌ನಲ್ಲಿ ಹಿಡಿತ ಸಾಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT