ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್ ಹಜಾರೆ ಟ್ರೋಫಿ: ಹಾಲಿ ಚಾಂಪಿಯನ್ ಕರ್ನಾಟಕಕ್ಕೆ ಆಘಾತ

ಏಕದಿನ ಕ್ರಿಕೆಟ್: ಫೈನಲ್‌ಗೆ ಮುಂಬೈ–ಉತ್ತರಪ್ರದೇಶ
Last Updated 11 ಮಾರ್ಚ್ 2021, 18:16 IST
ಅಕ್ಷರ ಗಾತ್ರ

ನವದೆಹಲಿ: ಸತತ ಎರಡನೇ ವರ್ಷವೂವಿಜಯ್ ಹಜಾರೆ ಟ್ರೋಫಿ ಜಯಿಸುವ ಕರ್ನಾಟಕ ತಂಡದ ಕನಸು ಗುರುವಾರ ಭಗ್ನವಾಯಿತು.

ಆರಂಭಿಕ ಬ್ಯಾಟ್ಸ್‌ಮನ್‌ಗಳ ಹಣಾಹಣಿಯೆಂದೇ ಬಿಂಬಿತವಾಗಿದ್ದ ಸೆಮಿಫೈನಲ್ ಪಂದ್ಯದಲ್ಲಿ ಓಪನರ್ ಮತ್ತು ನಾಯಕ ಪೃಥ್ವಿ ಶಾ ಶತಕದ ಬಲದಿಂದ ಮುಂಬೈ ತಂಡವು 72 ರನ್‌ಗಳಿಂದ ಗೆದ್ದಿತು. ಫೈನಲ್ ಪ್ರವೇಶಿಸಿತು.

ಇದೇ 14ರಂದು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯಲಿರುವ ಫೈನಲ್‌ನಲ್ಲಿ ಮುಂಬೈ ಮತ್ತು ಉತ್ತರಪ್ರದೇಶ ತಂಡಗಳು ಮುಖಾಮುಖಿಯಾಗಲಿವೆ.

ಟೂರ್ನಿಯುದ್ದಕ್ಕೂ ರನ್‌ಗಳ ಹೊಳೆ ಹರಿಸಿದ್ದ ಕರ್ನಾಟಕದ ಆರಂಭಿಕ ಬ್ಯಾಟ್ಸ್‌ಮನ್ ಆರ್. ಸಮರ್ಥ್ (8 ರನ್) ಇಲ್ಲಿ ವೈಫಲ್ಯ ಅನುಭವಿಸಿದರು. ಆದರೆ ದೇವದತ್ತ ಪಡಿಕ್ಕಲ್ (64; 64ಎಸೆತ, 9ಬೌಂ, 1ಸಿ) ಅರ್ಧಶತಕ ಹೊಡೆದರು.. ಮಧ್ಯಮ ಕ್ರಮಾಂಕದಲ್ಲಿ ಮನೀಷ್ ಪಾಂಡೆ, ಕೆ.ವಿ. ಸಿದ್ಧಾರ್ಥ್ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಕರುಣ್ ನಾಯರ್ ಮತ್ತು ಶ್ರೇಯಸ್ ಗೋಪಾಲ್ ಅವರು ತುಸು ಪ್ರಯತ್ನವನ್ನೇನೋ ಮಾಡಿದರು. ಆದರೆ, ದೊಡ್ಡ ಇನಿಂಗ್ಸ್‌ ಕಟ್ಟಲು ಅವರಿಗೆ ಸಾಧ್ಯವಾಗಲಿಲ್ಲ.

ಇವೆರೆಲ್ಲರಿಗಿಂತಲೂ ದಿಟ್ಟತನದಿಂದ ಬ್ಯಾಟ್ ಬೀಸಿದ ಬಿ.ಆರ್. ಶರತ್ (61; 39ಎಸೆತ, 8ಬೌಂಡರಿ, 2ಸಿಕ್ಸರ್) ಮತ್ತು ಕೃಷ್ಣಪ್ಪ ಗೌತಮ್ (28; 14ಎಸೆತ, 1ಬೌಂಡರಿ, 3ಸಿಕ್ಸರ್) ಅವರ ಆಟಕ್ಕೆ ಜಯದ ಪ್ರತಿಫಲ ಸಿಗಲಿಲ್ಲ.

ಪಾಲಂ ಎ ಮೈದಾನದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಕರ್ನಾಟಕದ ನಿರ್ಧಾರ ತಪ್ಪು ಎಂದು ಮುಂಬೈನ ಪೃಥ್ವಿ ಶಾ ತೋರಿಸಿಕೊಟ್ಟರು. ಟೂರ್ನಿಯಲ್ಲಿ ಅವರು ಗಳಿಸಿದ ನಾಲ್ಕನೇ ಶತಕದ (165; 122ಎ, 17ಬೌಂ, 7ಸಿ) ಬಲದಿಂದ ತಂಡವು 49.2 ಓವರ್‌ಗಳಲ್ಲಿ 322 ರನ್ ಗಳಿಸಿತು.

ಇನಿಂಗ್ಸ್‌ನ ಐದನೇ ಓವರ್‌ನಲ್ಲಿಯೇ ಪ್ರಸಿದ್ಧಕೃಷ್ಣ ಅವರ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಔಟಾದರು. ಆದಿತ್ಯ ತಾರೆ (16 ರನ್) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಶಮ್ಸ್‌ ಮಲಾನಿ (45 ರನ್) ತಮ್ಮ ನಾಯಕನೊಂದಿಗೆ ಮೂರನೇ ವಿಕೆಟ್ ಜೊತೆಯಾಟದಲ್ಲಿ 159 ರನ್ ಸೇರಿಸಿದರು. ಇದರಲ್ಲಿ ಪೃಥ್ವಿಯ ಅಬ್ಬರ ಮೇರೆ ಮೀರಿತ್ತು. ಪೃಥ್ವಿಯನ್ನು ಕಟ್ಟಿಹಾಕುವಲ್ಲಿ ಕರ್ನಾಟಕದ ಬೌಲರ್‌ಗಳು ವಿಫಲರಾದರು.

41ನೇ ಓವರ್‌ನಲ್ಲಿ ಪೃಥ್ವಿ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಕೆಡವಿದ ವೈಶಾಖ ವಿಜಯಕುಮಾರ್ ನಿಟ್ಟುಸಿರುಬಿಟ್ಟರು. ಆದರೆ ಆಗಲೇ ಸ್ಕೋರು 250ರ ಸನಿಹ ಬಂದಿತ್ತು. ಶಿವಂ ದುಬೆ ಮತ್ತು ಹಕೀಂ ಖಾನ್ ಅವರು ತಂಡವು ಮುನ್ನೂರರ ಗಡಿ ದಾಟಲು ಕಾಣಿಕೆ ನೀಡಿದರು. ಇದು ಸಮರ್ಥ್ ಬಳಗಕ್ಕೆ ಹೊರೆಯಾಯಿತು.

ಟೂರ್ನಿಯಲ್ಲಿ ಒಟ್ಟು 757 ರನ್‌ಗಳನ್ನು ಕಲೆಹಾಕಿರುವ ಪೃಥ್ವಿ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರು. ದೇವದತ್ತ (757 ರನ್) ಮತ್ತು ಆರ್.ಸಮರ್ಥ್ (613 ರನ್) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದ್ದಾರೆ.

ಉತ್ತರಪ್ರದೇಶ ಫೈನಲ್‌ಗೆ: ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಸೆಮಿಫೈನಲ್‌ನಲ್ಲಿ ಉತ್ತರಪ್ರದೇಶ ತಂಡವು 5 ವಿಕೆಟ್‌ಗಳಿಂದ ಗುಜರಾತ್ ತಂಡದ ವಿರುದ್ಧ ಜಯಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು ಯಶ್ ದಯಾಲ್ (34ಕ್ಕೆ3) ಅವರ ದಾಳಿಯ ಮುಂದೆ 48.1 ಓವರ್‌ಗಳಲ್ಲಿ 184 ರನ್ ಗಳಿಸಿ ಆಲೌಟ್ ಆಯಿತು. ಕರಣ್ ಶರ್ಮಾ ನಾಯಕತ್ವದ ಉತ್ತರಪ್ರದೇಶ ತಂಡವು 42.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 188 ರನ್ ಗಳಿಸಿ ಗೆದ್ದಿತು. ಫೈನಲ್ ಪ್ರವೇಶಿಸಿತು.

ಮಿಂಚಿದ ಅಕ್ಷದೀಪ್ ನಾಥ್‌
ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಇನ್ನೊಂದು ಸೆಮಿಫೈನಲ್‌ನಲ್ಲಿ ಉತ್ತರಪ್ರದೇಶ ತಂಡವು 5 ವಿಕೆಟ್‌ಗಳಿಂದ ಗುಜರಾತ್ ತಂಡದ ವಿರುದ್ಧ ಜಯಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತಂಡವು ಯಶ್ ದಯಾಲ್ (34ಕ್ಕೆ3) ಅವರ ದಾಳಿಯ ಮುಂದೆ 48.1 ಓವರ್‌ಗಳಲ್ಲಿ 184 ರನ್ ಗಳಿಸಿ ಆಲೌಟ್ ಆಯಿತು. ಕರಣ್ ಶರ್ಮಾ ನಾಯಕತ್ವದ ಉತ್ತರಪ್ರದೇಶ ತಂಡವು 42.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 188 ರನ್ ಗಳಿಸಿ ಗೆದ್ದಿತು. ಫೈನಲ್ ಪ್ರವೇಶಿಸಿತು.

ಗುಜರಾತ್: 48.1 ಓವರ್‌ಗಳಲ್ಲಿ 184 (ಧ್ರುವ ರಾವಳ್ 23, ಹಿತ್ ಪಟೇಲ್ 60, ಪೀಯೂಷ್ ಚಾವ್ಲಾ 32, ಯಶ್ ದಯಾಲ್ 34ಕ್ಕೆ3, ಅಕೀಬ್ ಖಾನ್ 22ಕ್ಕೆ2) ಉತ್ತರಪ್ರದೇಶ: 42.4 ಓವರ್‌ಗಳಲ್ಲಿ 5ಕ್ಕೆ188 (ಕರಣ್ ಶರ್ಮಾ 38, ಅಕ್ಷದೀಪ್ ನಾಥ್ 71, ಉಪೇಂದ್ರ ಯಾದವ್ ಔಟಾಗದೆ 31, ಚಿಂತನ್ ಗಜ 30ಕ್ಕೆ2) ಫಲಿತಾಂಶ: ಉತ್ತರಪ್ರದೇಶ ತಂಡಕ್ಕೆ 5 ವಿಕೆಟ್‌ಗಳ ಜಯ.

ಸಂಕ್ಷಿಪ್ತ ಸ್ಕೋರು
ಮುಂಬೈ:
49.2 ಓವರ್‌ಗಳಲ್ಲಿ 322 (ಪೃಥ್ವಿ ಶಾ 165, ಶಮ್ಸ್‌ ಮಲಾನಿ 45, ಶಿವಂ ದುಬೆ 27, ಅಮನ್ ಹಕೀಂ ಖಾನ್ 25, ಪ್ರಸಿದ್ಧ ಕೃಷ್ಣ 64ಕ್ಕೆ3, ವೈಶಾಖ ವಿಜಯಕುಮಾರ್ 56ಕ್ಕೆ4)
ಕರ್ನಾಟಕ: 42.4 ಓವರ್‌ಗಳಲ್ಲಿ 250 (ಆರ್. ಸಮರ್ಥ್ 8, ದೇವದತ್ತ ಪಡಿಕ್ಕಲ್ 64, ಕರುಣ್ ನಾಯರ್ 29, ಶ್ರೇಯಸ್ ಗೋಪಾಲ್ 33, ಬಿ.ಆರ್. ಶರತ್ 61, ಕೃಷ್ಣಪ್ಪ ಗೌತಮ್ 28, ತುಷಾರ್ ದೇಶಪಾಂಡೆ 37ಕ್ಕೆ2, ತನುಷ್ ಕೋಟ್ಯಾನ್ 23ಕ್ಕೆ2, ಪ್ರಶಾಂತ್ ಸೋಳಂಕಿ 61ಕ್ಕೆ2, ಶಮ್ಸ್‌ ಮಲಾನಿ 47ಕ್ಕೆ2)
ಫಲಿತಾಂಶ: ಮುಂಬೈ ತಂಡಕ್ಕೆ 72 ರನ್‌ಗಳ ಜಯ.

ಗುಜರಾತ್: 48.1 ಓವರ್‌ಗಳಲ್ಲಿ 184 (ಧ್ರುವ ರಾವಳ್ 23, ಹಿತ್ ಪಟೇಲ್ 60, ಪೀಯೂಷ್ ಚಾವ್ಲಾ 32, ಯಶ್ ದಯಾಲ್ 34ಕ್ಕೆ3, ಅಕೀಬ್ ಖಾನ್ 22ಕ್ಕೆ2)
ಉತ್ತರಪ್ರದೇಶ: 42.4 ಓವರ್‌ಗಳಲ್ಲಿ 5ಕ್ಕೆ188 (ಕರಣ್ ಶರ್ಮಾ 38, ಅಕ್ಷದೀಪ್ ನಾಥ್ 71, ಉಪೇಂದ್ರ ಯಾದವ್ ಔಟಾಗದೆ 31, ಚಿಂತನ್ ಗಜ 30ಕ್ಕೆ2)

ಫಲಿತಾಂಶ: ಉತ್ತರಪ್ರದೇಶ ತಂಡಕ್ಕೆ 5 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT