ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಿನೂ ಮಂಕಡ್ ಟ್ರೋಫಿ; ಧೀರಜ್ ಗೌಡಗೆ ನಾಯಕತ್ವ

Published : 26 ಸೆಪ್ಟೆಂಬರ್ 2024, 15:57 IST
Last Updated : 26 ಸೆಪ್ಟೆಂಬರ್ 2024, 15:57 IST
ಫಾಲೋ ಮಾಡಿ
Comments

ಬೆಂಗಳೂರು: ಧೀರಜ್ ಗೌಡ ಅವರನ್ನು ವಿನೂ ಮಂಕಡ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡಕ್ಕೆ ನಾಯಕರನ್ನಾಗಿ ನೇಮಕ ಮಾಡಲಾಗಿದೆ. 

ಗುರುವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು 15 ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ. ಕಳೆದ ಋತುವಿನಲ್ಲಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡಿದ್ದ ಧೀರಜ್‌ಗೆ ನಾಯಕ ಹಾಗೂ ಹಾರ್ದಿಕ್ ರಾಜ್ ಅವರಿಗೆ ಉಪನಾಯಕ ಪಟ್ಟ ನೀಡಲಾಗಿದೆ. ಮಾಜಿ ಆಟಗಾರ ಕೆ.ಬಿ. ಪವನ್ ಅವರು ತಂಡದ ಕೋಚ್ ಆಗಿದ್ದಾರೆ.  

ಹೋದ ವರ್ಷ ಕೂಚ್ ಬಿಹಾರ್ ಟ್ರೋಫಿ ಜಯಿಸಿದ್ದ ಕರ್ನಾಟಕ ತಂಡಕ್ಕೆ ಆಲ್‌ರೌಂಡರ್ ಧೀರಜ್ ಗೌಡ ನಾಯಕರಾಗಿದ್ದರು. 

ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್ ಅವರು ಪ್ರಕಟಿಸಿರುವ ತಂಡ ಇಂತಿದೆ: ಧೀರಜ್ ಗೌಡ (ನಾಯಕ), ರವಿಕೈರವ ರೆಡ್ಡಿ (ವಿಕೆಟ್‌ಕೀಪರ್), ಆದೇಶ್ ಡಿ ಅರಸ್, ಎಂ.ಬಿ. ಶಿವಂ, ರೋಹಿತ್ ಆರ್. ವಾರಂಬಳ್ಳಿ, ಹಾರ್ದಿಕ್ ರಾಜ್ (ಉಪನಾಯಕ), ಎ. ಸಿದ್ಧಾರ್ಥ್, ಆರ್. ಪ್ರಜ್ವಲ್ ಗೌಡ, ಗೌರವ್ ಶಾನಭಾಗ್, ವೈಭವ ಶರ್ಮಾ, ಮಹೇಶಕುಮಾರ್ ಬಂಗೇರಾ, ಪಿ. ಪ್ರತೀಕ್ (ವಿಕೆಟ್‌ಕೀಪರ್), ಎಸ್. ಲೋಹಿತ್, ಅಕ್ಷತ್ ಪ್ರಭಾಕರ್, ಮಣಿಕಾಂತ ಶಿವಾನಂದ. ಕೆ.ಬಿ. ಪವನ್ (ಕೋಚ್), ಎಸ್‌.ಎಲ್. ಅಕ್ಷಯ್ (ಸಹಾಯಕ ಕೋಚ್), ಎಸ್‌.ಎ. ಸತೀಶ್ (ಮ್ಯಾನೇಜರ್), ಸಮಿ ಉರ್ ರೆಹಮಾನ್ (ಸ್ಟ್ರೆಂಥ್–ಕಂಡಿಷನಿಂಗ್ ಕೋಚ್), ಜೊಬಿ ಮಾಥ್ಯೂ (ಫಿಸಿಯೊ), ಪಿ. ರಾಜೀವ (ವಿಡಿಯೊ ಅನಾಲಿಸ್ಟ್). 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT