ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ ಕ್ರಿಕೆಟ್‌: ಬೆಂಗಳೂರಿಗೆ ಸನ್‌ರೈಸರ್ಸ್ ‘ಚಾಲೆಂಜ್’

ವಿರಾಟ್ ಕೊಹ್ಲಿ–ಡೇವಿಡ್ ವಾರ್ನರ್‌ ಬಳಗಗಳ ಹಣಾಹಣಿ; ಎಬಿಡಿ, ವಿಲಿಯಮ್ಸನ್‌ ಆಕರ್ಷಣೆ
Last Updated 20 ಸೆಪ್ಟೆಂಬರ್ 2020, 20:40 IST
ಅಕ್ಷರ ಗಾತ್ರ
ADVERTISEMENT
""

ದುಬೈ: ಕೊರೊನಾ ವೈರಸ್ ಕಾಲದ ಮೊದಲ ಇಂಡಿ ಯನ್ ಪ್ರೀಮಿಯರ್ ಲೀಗ್ ಟೂರ್ನಿಯ ’ಕಪ್‌’ ಜಯಿಸುವ ಕನಸಿನೊಂದಿಗೆ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಸೋಮವಾರ ಕಣಕ್ಕಿಳಿಯಲಿದೆ.

ದುಬೈ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ಬೆಂಗಳೂರು ಬಳಗಕ್ಕೆ ಸನ್‌ರೈಸರ್ಸ್‌ ಹೈದರಾಬಾದ್ ಸವಾಲೊಡ್ಡಲಿದೆ. ಉಭಯ ತಂಡಗಳನ್ನು ಮುನ್ನಡೆಸುತ್ತಿರುವ ಇಬ್ಬರೂ ನಾಯಕರಾದ ಕೊಹ್ಲಿ ಮತ್ತು ಡೇವಿಡ್ ವಾರ್ನರ್ ರನ್‌ ಹೊಳೆ ಹರಿಸುವ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾಗಿರುವುದು ವಿಶೇಷ.

ಈ ಹಿಂದಿನ ಒಂದು ಡಜನ್ ಐಪಿಎಲ್ ಟೂರ್ನಿಗಳಲ್ಲಿ ಆರ್‌ಸಿಬಿಯ ಪ್ರಶಸ್ತಿ ಕನಸು ನನಸಾಗಿಲ್ಲ. ಎರಡು ಬಾರಿ ಫೈನಲ್‌ನಲ್ಲಿ ಮುಗ್ಗರಿಸಿತ್ತು. ಅದರಲ್ಲೂ 4 ವರ್ಷಗಳ ಹಿಂದೆ ವಿರಾಟ್ ಬಳಗವು ತನ್ನ ತವರು ಬೆಂಗಳೂರಿನಲ್ಲಿಯೇ ಸನ್‌ರೈಸರ್ಸ್‌ ವಿರುದ್ಧ ತಲೆಬಾಗಿತ್ತು. ಆಗಲೂ ವಾರ್ನರ್‌ ನಾಯಕರಾಗಿದ್ದರು.

ಈ ಬಾರಿ ಆರ್‌ಸಿಬಿ ತನ್ನ ತಂಡ ದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದೆ. ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್ ಜೊತೆಗೂಡಿದ್ದಾರೆ. ಅನುಭವಿ ಎಬಿ ಡಿವಿಲಿಯರ್ಸ್, ಪಾರ್ಥಿವ್ ಪಟೇಲ್, ಆಲ್‌ರೌಂಡರ್‌ ಶಿವಂ ದುಬೆ, ಗುರು ಕೀರತ್ ಸಿಂಗ್ ಮಾನ್ ಆರ್‌ಸಿಬಿ ಬ್ಯಾಟಿಂಗ್‌ನ ಬೆನ್ನೆಲುಬು. ವೇಗಿ ಡೇಲ್ ಸ್ಟೇಯ್ನ್, ಉಮೇಶ್ ಯಾದವ್, ನವದೀಪ್ ಸೈನಿ ಅವರೊಂದಿಗೆ ಲೆಗ್‌ಸ್ಪಿನ್ನರ್ ಯಜುವೇಂದ್ರ ಚಾಹಲ್ ಕಣಕ್ಕಿಳಿಯಬಹುದು. ಅವರಿಗೆ ಆ್ಯಡಂ ಜಂಪಾ, ಪವನ್ ನೇಗಿ ಅಥವಾ ವಾಷಿಂ ಗ್ಟನ್ ಸುಂದರ್ ಅವರಲ್ಲಿ ಒಬ್ಬರು ಜೊತೆ ಯಾಗಬಹುದು.

ಆರ್‌ಸಿಬಿ ಬೌಲಿಂಗ್‌ ಪಡೆಯನ್ನು ದಿಟ್ಟೆದೆಯಿಂದ ಎದುರಿಸಬಲ್ಲ ಬ್ಯಾಟ್ಸ್‌ಮನ್‌ಗಳು ಸನ್‌ರೈಸರ್ಸ್‌ನಲ್ಲಿದ್ದಾರೆ. ಜಾನಿ ಬೆಸ್ಟೊ, ಕೇನ್ ವಿಲಿಯಮ್ಸನ್, ಮನೀಷ್ ಪಾಂಡೆ ಗೆಲುವಿಗೆ ಕಾಣಿಕೆ ನೀಡಬಲ್ಲರು. ‘ಸ್ವಿಂಗ್ ಮಾಸ್ಟರ್’ ಭುವನೇಶ್ವರ್ ಕುಮಾರ್ ನೇತೃತ್ವದ ಬೌಲಿಂಗ್ ಪಡೆಯಲ್ಲಿ ಖಲೀಲ್ ಅಹಮದ್, ಸಿದ್ಧಾರ್ಥ್ ಕೌಲ್, ಬಿಲಿ ಸ್ಟಾನ್‌ಲೇಕ್ ಇದ್ದಾರೆ. ಸ್ಪಿನ್ನರ್ ರಶೀದ್ ಖಾನ್ ಮತ್ತೊಮ್ಮೆ ಕೈಚಳಕ ಮೆರೆಯಲು ಸಿದ್ಧರಾಗಿದ್ದಾರೆ. ರೋಚಕ ಹೋರಾಟ ನಡೆಯುವ ಸಾಧ್ಯತೆ ಇದೆ.

ದೇವದತ್ತ–ಪಾಂಡೆ ಮುಖಾಮುಖಿ
ಕರ್ನಾಟಕ ಕ್ರಿಕೆಟ್ ತಂಡದ ನಾಯಕ ಮನೀಷ್ ಪಾಂಡೆ ಮತ್ತು ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಈ ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದಾರೆ. ಐಪಿಎಲ್‌ನಲ್ಲಿ ಚೊಚ್ಚಲ ಶತಕ ಹೊಡೆದ ಭಾರತೀಯ ಬ್ಯಾಟ್ಸ್‌ಮನ್ ಹೆಗ್ಗಳಿಕೆ ಇರುವ ಪಾಂಡೆ ಹೈದರಾಬಾದ್ ತಂಡದಲ್ಲಿ ಕೆಲವು ವರ್ಷಗಳಿಂದ ಇದ್ದಾರೆ. ಆದರೆ ದೇವದತ್ತಗೆ ಈ ಬಾರಿ ಪದಾರ್ಪಣೆ ಮಾಡುವ ಅವಕಾಶ ಸಿಗುತ್ತಿದೆ.

ಹೋದ ವರ್ಷದ ಟೂರ್ನಿಯಲ್ಲಿ ದೇವದತ್ತ ಆರ್‌ಸಿಬಿ ತಂಡದಲ್ಲಿದ್ದರು. ಅವಕಾಶ ಸಿಕ್ಕಿರಲಿಲ್ಲ. ಈ ಬಾರಿ ಅವರು ತಮ್ಮ ಚೊಚ್ಚಲ ಐಪಿಎಲ್ ಪಂದ್ಯ ಆಡಲಿದ್ದಾರೆ ಎಂದು ತಂಡದ ಕೋಚ್ ಮೈಕ್ ಹೆಸನ್ ಹೇಳಿದ್ದರು. ಕನ್ನಡಿಗ, ಆಲ್‌ರೌಂಡರ್ ಪವನ್ ದೇಶಪಾಂಡೆ ಕೂಡ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT