ಬುಧವಾರ, ಏಪ್ರಿಲ್ 14, 2021
31 °C

ಆಧುನಿಕ ಕ್ರಿಕೆಟ್‌ನ ಹೀರೊ ವಿರಾಟ್: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಸ್ಟೀವ್ ವಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಆಧುನಿಕ ಕಾಲದ ಕ್ರಿಕೆಟ್‌ನ ಹೀರೊ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಸ್ಟೀವ್ ವಾ ಬಣ್ಣಿಸಿದ್ದಾರೆ.

ಕ್ಯಾಪ್ಚರಿಂಗ್ ಕ್ರಿಕೆಟ್: ಸ್ಟೀವ್ ವಾ ಇನ್ ಇಂಡಿಯಾ‘ ಎಂಬ 60 ನಿಮಿಷಗಳ ಸಾಕ್ಷ್ಯಚಿತ್ರದಲ್ಲಿ ವಾ ಈ ಮಾತು ಹೇಳಿದ್ದಾರೆ. 

'ಕೊಹ್ಲಿಯ ದಿಟ್ಟ ನಿಲುವನ್ನು ಅವರ ಅಭಿಮಾನಿಗಳು ಅಗಾಧವಾಗಿ ಪ್ರೀತಿಸುತ್ತಾರೆ. ಎಲ್ಲ ಸವಾಲುಗಳನ್ನೂ ಸ್ವೀಕರಿಸುತ್ತ, ಸಾಧಿಸುವತ್ತ ಧಾವಿಸುವ ಅವರ ಮನೋಭಾವದಿಂದಾಗಿ  ಈ ಕಾಲದ ಕ್ರಿಕೆಟ್‌ನ ನಿಜವಾದ ಹೀರೊ ಆಗಿದ್ದಾರೆ' ಎಂದು ಸ್ಟೀವ್ ಹೇಳಿದ್ದಾರೆ.

'ಕ್ರಿಕೆಟ್ ಮತ್ತು ಫೋಟೊಗ್ರಫಿ ಎರಡೂ ನನ್ನ ಅಚ್ಚುಮೆಚ್ಚಿನ ವಿಷಯಗಳು. ಹೃದಯಕ್ಕೆ ಹತ್ತಿರವಾಗಿರುವ ಹವ್ಯಾಸಗಳು. 1986ರಲ್ಲಿ ಮೊದಲ ಬಾರಿ ಭಾರತಕ್ಕೆ ಭೇಟಿ ನೀಡಿದ್ದೆ. ಅಲ್ಲಿಯ ಜನರು ಕ್ರಿಕೆಟ್‌ ಆಟವನ್ನು ಸಂಭ್ರಮಿಸುವ ರೀತಿಗೆ ಮರುಳಾಗಿದ್ದೇನೆ' ಎಂದಿದ್ದಾರೆ.

'ನಾನು ಭಾರತದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣ,  ತಾಜ್‌ ಮಹಲ್, ಧರ್ಮಶಾಲೆಯ ಎಚ್‌ಪಿಸಿಎ ಕ್ರೀಡಾಂಗಣ, ಮಹಾರಾಜ ಲಕ್ಷ್ಮೀ ವಿಲಾಸ ಅರಮನೆ, ಓವಲ್ ಮೈದಾನಗಳಿಗೆ ಭೇಟಿ ನೀಡಿದ್ದೆ. ದೆಹಲಿ ಮತ್ತು ಕೋಲ್ಕತ್ತದ ಸುತ್ತಲಿನ ಕ್ರೀಡಾಂಗಣಗಳಲ್ಲಿ ಸುತ್ತಿದಾಗ ಜೀವಮಾನದ ಅವಿಸ್ಮರಣೀಯ ಕ್ರಿಕೆಟ್ ಕಥೆಗಳು ನನಗೆ ಸಿಕ್ಕವು' ಎಂದು ಹೇಳಿದ್ದಾರೆ.

'ಈ ಸಾಕ್ಷ್ಯಚಿತ್ರವನ್ನು ನೋಡುವ ಭಾರತದ ಪ್ರತಿಯೊಬ್ಬ ಅಭಿಮಾನಿಯೂ ತಮ್ಮ ಕ್ರಿಕೆಟ್ ಪ್ರೀತಿಯ ಬಗ್ಗೆ ಭಾವುಕರಾಗುತ್ತಾರೆ' ಎಂದು ಸ್ಟೀವ್ ಹೇಳಿದ್ದಾರೆ.

ಈ ಸಾಕ್ಷ್ಯಚಿತ್ರದಲ್ಲಿ ವೀಕ್ಷಕ ವಿವರಣೆಕಾರ ಹರ್ಷ ಭೋಗ್ಲೆ ನಿರೂಪಣೆ ಮಾಡಿದ್ದಾರೆ. ಲೇಖಕಿ ಮಿಥಿಲಾ ಗುಪ್ತಾ ಸಂಭಾಷಣೆ ಬರೆದಿದ್ದಾರೆ. ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್, ಆಸ್ಟ್ರೇಲಿಯಾದ ಮಾಜಿ ವಿಕೆಟ್‌ಕೀಪರ್ ಆ್ಯಡಂ ಗಿಲ್‌ಕ್ರಿಸ್ಟ್ ಮತ್ತು ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಲಿಸಾ ಸ್ಥಳೇಕರ್ ಈ ಸಾಕ್ಷ್ಯಚಿತ್ರದಲ್ಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು