ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಕ್ಷಣವನ್ನೂ ಖುಷಿಯಿಂದ ಕಳೆಯಬೇಕು: ವಿರಾಟ್‌ ಕೊಹ್ಲಿ

ಭಾರತ ತಂಡದ ನಾಯಕ ಮನದ ಮಾತು
Last Updated 13 ಆಗಸ್ಟ್ 2019, 1:55 IST
ಅಕ್ಷರ ಗಾತ್ರ

ಪೋರ್ಟ್‌ ಆಫ್‌ ಸ್ಪೇನ್‌: ‘ಜೀವನದ ಪ್ರತಿ ಕ್ಷಣವನ್ನೂ ಆನಂದದಿಂದ ಕಳೆಯಬೇಕೆಂದು ನಾನು ಬಯಸುತ್ತೇನೆ. ಹೀಗಾಗಿಯೇ ಮೈದಾನದಲ್ಲಿ ಹಾಡು ಕೇಳಿದಾಗಲೆಲ್ಲಾ ಕುಣಿಯುತ್ತೇನೆ. ಅಭಿಮಾನಿಗಳನ್ನೂ ರಂಜಿಸುತ್ತೇನೆ’ ಎಂದು ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ.

ಮೊದಲ ಏಕದಿನ ಪಂದ್ಯದ ವೇಳೆ ಕೊಹ್ಲಿ ಅವರು ವೆಸ್ಟ್‌ ಇಂಡೀಸ್‌ನ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಮತ್ತು ಮೈದಾನದ ಸಿಬ್ಬಂದಿ ಜೊತೆ ಕೆರಿಬಿಯನ್‌ ಹಾಡುಗಳಿಗೆ ಹೆಜ್ಜೆ ಹಾಕಿ ಸುದ್ದಿಯಾಗಿದ್ದರು. ಈ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು.

ಭಾನುವಾರ ನಡೆದಿದ್ದ ಎರಡನೇ ಏಕದಿನ ಹಣಾಹಣಿಯಲ್ಲಿ ವಿರಾಟ್‌, ಶತಕ ಸಿಡಿಸಿದ್ದರು. 125 ಎಸೆತಗಳಲ್ಲಿ 120 ರನ್‌ ಬಾರಿಸಿದ್ದರು. ಈ ಪಂದ್ಯದಲ್ಲಿ ಪ್ರವಾಸಿ ಪಡೆಯು ಡಕ್ವರ್ಥ್‌ ಲೂಯಿಸ್‌ ನಿಯಮದ ಅನ್ವಯ 59ರನ್‌ ಗಳಿಂದ ಗೆದ್ದಿತ್ತು.

ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ‘ಮೈದಾನದಲ್ಲಿ ಯಾವಾಗಲೂ ಲವಲವಿಕೆಯಿಂದ ಇರಬೇಕು. ನಾಯಕನಾಗಿದ್ದರೂ ಅಷ್ಟೇ, ಇಲ್ಲದಿದ್ದರೂ ಅಷ್ಟೇ. ಮುಖ ಗಂಟು ಹಾಕಿಕೊಂಡು ಇರುವುದಕ್ಕೆ ನನ್ನಿಂದ ಆಗುವುದಿಲ್ಲ. ದೇವರು ಸುಂದರ ಬದುಕು ಕೊಟ್ಟಿದ್ದಾನೆ. ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶವೂ ಸಿಕ್ಕಿದೆ. ಹೀಗಿರುವಾಗ ಜಗತ್ತೇ ತಲೆ ಮೇಲೆ ಬಿದ್ದಂತೆ ಏಕಿರಬೇಕು’ ಎಂದರು.

‘ಭಾನುವಾರ ಬಿಸಿಲು ಹೆಚ್ಚಿತ್ತು. ಹೀಗಾಗಿ ಬ್ಯಾಟಿಂಗ್‌ ಮಾಡುವುದು ತುಂಬಾ ಕಷ್ಟವಾಗಿತ್ತು. ನಾನು 65ರನ್‌ ಗಳಿಸುವಷ್ಟರಲ್ಲಿ ತುಂಬಾ ದಣಿದಿದ್ದೆ. ಹೀಗಿದ್ದರೂ ಎದೆಗುಂದಲಿಲ್ಲ. 40 ಓವರ್‌ಗಳವರೆಗೂ ಕ್ರೀಸ್‌ನಲ್ಲಿ ಇದ್ದು ತಂಡದ ಮೊತ್ತ ಹೆಚ್ಚಿಸಬೇಕೆಂಬುದು ಯೋಜನೆಯಾಗಿತ್ತು. ಅದನ್ನು ಗಮನದಲ್ಲಿಟ್ಟುಕೊಂಡು ಆಡಿದೆ’ ಎಂದು ನುಡಿದಿದ್ದಾರೆ.

‘ಸಂದಿಗ್ಧ ಸಂದರ್ಭದಲ್ಲೆಲ್ಲಾ ದಿಟ್ಟ ಆಟ ಆಡಿ ತಂಡಕ್ಕೆ ಆಸರೆಯಾಗಬೇಕೆಂಬುದು ನನ್ನ ಬಯಕೆ. ಇದಕ್ಕಾಗಿ ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ತಂಡದ ಇತರ ಆಟಗಾರರೂ ಈ ಗುಣವನ್ನು ಮೈಗೂಡಿಸಿಕೊಳ್ಳಬೇಕು’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT