ಶುಕ್ರವಾರ, ಏಪ್ರಿಲ್ 10, 2020
19 °C

ಹ್ಯಾಪಿ ಬರ್ತ್‌ಡೇ ಬ್ರದರ್ | ಎಬಿಡಿಗೆ ವಿರಾಟ್ ಕೊಹ್ಲಿ ಶುಭ ಕೋರಿದ್ದು ಹೀಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿ ಡಿ ವಿಲಿಯರ್ಸ್‌ಗೆ ಇಂದು ಜನ್ಮದಿನದ ಸಂಭ್ರಮ. 36ನೇ ವಸಂತಕ್ಕೆ ಕಾಲಿಟ್ಟಿರುವ ಅವರಿಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಶುಭ ಕೋರಿದ್ದಾರೆ.

ಟೀಂ ಇಂಡಿಯಾ ನಾಯಕ ಹಾಗೂ ಐಪಿಎಲ್‌ನಲ್ಲಿ ವಿಲಿಯರ್ಸ್‌ ಆಡುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ನಾಯಕನೂ ಆಗಿರುವ ಕೊಹ್ಲಿ, ‘ಹುಟ್ಟುಹಬ್ಬದ ಶುಭಾಶಯಗಳು ಸಹೋದರ. ಉತ್ತಮ ಆರೋಗ್ಯ, ಕುಟುಂಬದಲ್ಲಿ ಅಪಾರ ಪ್ರೀತಿ ತುಂಬಿರಲಿ. ಶ್ರೀಘ್ರದಲ್ಲೇ ಭೇಟಿಯಾಗುವ’ ಎಂದು ಬರೆದುಕೊಂಡಿದ್ದಾರೆ.

ಐಸಿಸಿ ತನ್ನ ಟ್ವಿಟರ್‌ ಪುಟದಲ್ಲಿ, ‘ಕೇವಲ 31 ಎಸೆತಗಳಲ್ಲೇ ಏಕದಿನ ಕ್ರಿಕೆಟ್‌ನ ವೇಗದ ಶತಕ. ಪಾಕಿಸ್ತಾನ ವಿರುದ್ಧ ಗಳಿಸಿದ 278 ರನ್‌ ದಕ್ಷಿಣ ಆಫ್ರಿಕಾ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ಎರಡನೇ ವೈಯಕ್ತಿಕ ಗರಿಷ್ಠ ಮೊತ್ತ. ಅದ್ಭುತ ಫೀಲ್ಡರ್‌, ಸೂಪರ್‌ ವಿಕೆಟ್‌ ಕೀಪರ್‌, ಅತ್ಯುತ್ತಮ ಬ್ಯಾಟ್ಸ್‌ಮನ್‌, 360 ಡಿಗ್ರಿ ಕ್ರಿಕೆಟಿಗ. ಹ್ಯಾಪಿ ಬರ್ತ್‌ ಡೇ ಎಬಿ ಡಿ ವಿಲಿಯರ್ಸ್‌’ ಎಂದು ಶುಭಕೋರಿದೆ.

‘ಹುಟ್ಟುಹಬ್ಬದ ಶುಭಾಶಯಗಳು ಮಿ.360 ಎಬಿ ಡಿ ವಿಲಿಯರ್ಸ್‌. ಶ್ರೀಘ್ರವೇ ಐಪಿಎಲ್‌ನಲ್ಲಿ ಭೇಟಿಯಾಗುವ’ ಎಂದು ಕನ್ನಡಿಗ ಕೆ.ಎಲ್‌.ರಾಹುಲ್‌ ಬರೆದಿದ್ದಾರೆ.

ದಕ್ಷಿಣ ಆಫ್ರಿಕಾ ಪರ ಇದುವರೆಗೆ 114 ಟೆಸ್ಟ್ ಪಂದ್ಯಗಳ 191 ಇನಿಂಗ್ಸ್‌ಗಳಲ್ಲಿ ಕಣಕ್ಕಿಳಿದಿರುವ ಅವರು 8,765 ರನ್‌ ಪೇರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 228 ಪಂದ್ಯಗಳ 218 ಇನಿಂಗ್ಸ್‌ಗಳಿಂದ 9,577 ರನ್‌ ಗಳಿಸಿದ್ದಾರೆ. 78 ಟಿ20 ಪಂದ್ಯಗಳ 75 ಇನಿಂಗ್ಸ್‌ಗಳಿಂದ 1,672 ರನ್‌ ಕಲೆಹಾಕಿದ್ದಾರೆ. ಮಾತ್ರವಲ್ಲದೆ ಐಪಿಎಲ್‌ನಲ್ಲಿ 154 ಪಂದ್ಯಗಳಲ್ಲಿ ಬ್ಯಾಟ್‌ ಬೀಸಿದ್ದು, 4,395 ರನ್ ಗಳಿಸಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು