ಶುಕ್ರವಾರ, ಏಪ್ರಿಲ್ 10, 2020
19 °C

ದ ಹಂಡ್ರೆಡ್‌ ಲೀಗ್‌ನಿಂದ ಹಿಂದೆ ಸರಿದ ವಾರ್ನರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪರ್ತ್‌: ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು  ಆಯೋಜಿಸುತ್ತಿರುವ ‘ದ ಹಂಡ್ರೆಡ್ ಲೀಗ್’ ಟೂರ್ನಿಯಿಂದ ಆಸ್ಟ್ರೇಲಿಯಾದ ಕ್ರಿಕೆಟಿಗ ಡೇವಿಡ್ ವಾರ್ನರ್ ಹಿಂದೆ ಸರಿದಿದ್ದಾರೆ.

ಅವರ  ಈ ನಿರ್ಧಾರಕ್ಕೆ ಕೊರೊನಾ ವೈರಸ್‌ ಆಂತಕವು ಸಂಬಂಧವಿಲ್ಲ. ಲೀಗ್ ನಡೆಯುವ ಸಂದರ್ಭದಲ್ಲಿಯೇ ಆಸ್ಟ್ರೇಲಿಯಾ ತಂಡವು ಜಿಂಬಾಬ್ವೆ ವಿರುದ್ಧ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯಲ್ಲಿ ಆಡಲಿದೆ. ಆದ್ದರಿಂದ ವಾರ್ನರ್ ಅದರಲ್ಲಿ ಆಡುವರು ಎಂದು ಆಸ್ಟ್ರೇಲಿಯಾದ ‘ಡಬ್ಲ್ಯುಎ ಟುಡೆ’ ವೆಬ್‌ಸೈಟ್ ವರದಿ ಮಾಡಿದೆ. ಇದನ್ನು ವಾರ್ನರ್ ಅವರ ವ್ಯವಸ್ಥಾಪಕ ಜೇಮ್ಸ್ ರಸ್ಕಿನ್ ದೃಢಪಡಿಸಿದ್ದಾರೆ.

‘ಇದೇ ಮೊದಲ ಬಾರಿಗೆ ನಡೆಯಲಿರುವ 100 ಬಾಲ್ ಎ ಸೈಡ್ ಲೀಗ್ ಟೂರ್ನಿಯಿಂದ ಹಿಂದೆ ಸರಿದ ಮೊದಲ ಆಟಗಾರ ವಾರ್ನರ್. ಜುಲೈ 17ರಿಂದ ಆಗಸ್ಟ್ 15ರವರೆಗೆ ಈ ಟೂರ್ನಿಯು ನಡೆಯಲಿದೆ.

ಐಪಿಎಲ್ ಆಡುವೆ: ಕೊರೊನಾ ವೈರಸ್ ಭೀತಿಯಿಂದಾಗಿ ಮುಂದೂಡಲಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)  ಟೂರ್ನಿಯು ಏಪ್ರಿಲ್ 15ರ ನಂತರ ನಡೆದ ತಾವು ಆಡುವುದಾಗಿ ವಾರ್ನರ್ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು