ಶುಕ್ರವಾರ, ಸೆಪ್ಟೆಂಬರ್ 20, 2019
27 °C

ಯೂಂಗ್‌ ಶತಕ: ನ್ಯೂಜಿಲೆಂಡ್‌ ಜಯಭೇರಿ

Published:
Updated:
Prajavani

ಬ್ರಿಸ್ಬೇನ್: ವಿಲ್‌ ಯಂಗ್‌ ಶತಕದ ಬಲದಿಂದ ನ್ಯೂಜಿಲೆಂಡ್‌ ತಂಡ ಆಸ್ಟ್ರೇಲಿಯಾ ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸಿದೆ. ಬುಧವಾರ ನಡೆದ ವಿಶ್ವಕಪ್‌ ಅಭ್ಯಾಸ ಪಂದ್ಯದಲ್ಲಿ ಯಂಗ್‌  130 ರನ್‌ ಗಳಿಸಿದರು. ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್‌ ಗಳಿಸಿದ ಅಜೇಯ ಅರ್ಧಶತಕ ವ್ಯರ್ಥವಾಯಿತು.

ಆತಿಥೇಯರು ನೀಡಿದ 278 ರನ್‌ ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌ 16 ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ದಡ ತಲುಪಿತು.

ಯಂಗ್‌ 132 ಎಸೆತಗಳನ್ನು ಎದುರಿಸಿ 11 ಬೌಂಡರಿ ಸಿಡಿಸಿದರು. ಜಾರ್ಜ್ ವರ್ಕರ್ (56) ಹಾಗೂ ಟಾಮ್ ಲಥಾಮ್ (69) ಯಂಗ್‌ ಅವರಿಗೆ ಉತ್ತಮ ಸಹಕಾರ ನೀಡಿದರು.

ಆಸ್ಟ್ರೇಲಿಯಾ ಪರ ಉಸ್ಮಾನ್‌ ಖ್ವಾಜಾ (56) ಹಾಗೂ ಗ್ಲೆನ್ ಮ್ಯಾಕ್ಸ್‌ವೆಲ್‌ (52) ಅರ್ಧಶತಕ ಸಿಡಿಸಿದರು. ಡಗ್‌ ಬ್ರೇಸ್‌ವೆಲ್‌ ನ್ಯೂಜಿಲೆಂಡ್‌ ಪರ ಮೂರು ವಿಕೆಟ್‌ ಪಡೆವಿದರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ ಇಲೆವನ್ 50 ಓವರ್‌ಗಳಲ್ಲಿ 6ಕ್ಕೆ 277 (ಸ್ಟೀವ್ ಸ್ಮಿತ್ ಅಜೇಯ 89, ಉಸ್ಮಾನ್‌ ಖ್ವಾಜಾ 56, ಗ್ಲೆನ್ ಮ್ಯಾಕ್ಸ್‌ವೆಲ್ 52; ಡಗ್ ಬ್ರೇಸ್‌ವೆಲ್‌ 45ಕ್ಕೆ 3); ನ್ಯೂಜಿಲೆಂಡ್ ಇಲೆವನ್ 47.2 ಓವರ್‌ಗಳಲ್ಲಿ 3ಕ್ಕೆ 283 (ವಿಲ್ ಯಂಗ್ 130,  ಟಾಮ್‌ ಲಥಾಮ್‌ 69, ಜಾರ್ಜ್ ವರ್ಕರ್‌ 56; ಮಿಷೆಲ್‌ ಸ್ಟಾರ್ಕ್‌ 14ಕ್ಕೆ 2). ಫಲಿತಾಂಶ: ನ್ಯೂಜಿಲೆಂಡ್‌ಗೆ ಏಳು ವಿಕೆಟ್‌ಗಳ ಜಯ.

Post Comments (+)