ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ರಾವಿಡ್ ಜೊತೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ: ರೋಹಿತ್ ಶರ್ಮಾ

Last Updated 4 ನವೆಂಬರ್ 2021, 9:25 IST
ಅಕ್ಷರ ಗಾತ್ರ

ಅಬುಧಾಬಿ: ರಾಹುಲ್ ದ್ರಾವಿಡ್ ಅವರನ್ನು ಭಾರತ ಕ್ರಿಕೆಟ್ ತಂಡದ ಹೆಡ್ ಕೋಚ್ ಆಗಿ ನೇಮಕ ಮಾಡಿರುವುದನ್ನು ಉಪನಾಯಕ ರೋಹಿತ್ ಶರ್ಮಾ ಸ್ವಾಗತಿಸಿದ್ದಾರೆ. ಆಟಗಾರರು ಬ್ಯಾಟಿಂಗ್ ಶ್ರೇಷ್ಠರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

‘ನಾವು (ಅಫ್ಘಾನಿಸ್ತಾನದ ವಿರುದ್ಧ) ಪಂದ್ಯದಲ್ಲಿ ನಿರತರಾಗಿದ್ದೆವು. ಹಾಗಾಗಿ, ದ್ರಾವಿಡ್ ನೇಮಕದ ಬಗ್ಗೆ ತಿಳಿದಿರಲಿಲ್ಲ. ಭಾರತ ತಂಡಕ್ಕೆ ವಿಭಿನ್ನ ಸಾಮರ್ಥ್ಯದ ಮೂಲಕ ಮರಳಿ ಬಂದಿದ್ದಕ್ಕಾಗಿ ಅವರಿಗೆ (ರಾಹುಲ್ ದ್ರಾವಿಡ್) ಅಭಿನಂದನೆಗಳು. ನಾವು ಅವರೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇವೆ ಎಂದು ಪಂದ್ಯದ ಬಳಿಕ ರೋಹಿತ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಟೀಮ್ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಬುಧವಾರ ಭಾರತೀಯ ಪುರುಷರ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಬಿಸಿಸಿಐ ನೇಮಕ ಮಾಡಿದೆ,

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದ ಮಾಜಿ ಬಲಗೈ ಬ್ಯಾಟ್ಸ್‌ಮನ್ ದ್ರಾವಿಡ್ ಅವರನ್ನು, 2023ರ 50 ಓವರ್‌ಗಳ ವಿಶ್ವಕಪ್‌ವರೆಗೆ ಎರಡು ವರ್ಷಗಳ ಅವಧಿಗೆ ಹೆಡ್ ಕೋಚ್ ಆಗಿ ನೇಮಕ ಮಾಡಲಾಗಿದೆ.

ನವೆಂಬರ್ 17ರಿಂದ ಆರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಸರಣಿಯಿಂದ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ.

‘ಅವರು (ದ್ರಾವಿಡ್) ಭಾರತೀಯ ಕ್ರಿಕೆಟ್‌ನ ಶ್ರೇಷ್ಠರು ಮತ್ತು ಅವರೊಂದಿಗೆ ಕೆಲಸ ಮಾಡುವುದು ಅತ್ಯಂತ ಸಂತೋಷದ ವಿಚಾರ’ಎಂದು ರೋಹಿತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT