ಶನಿವಾರ, ಮಾರ್ಚ್ 25, 2023
29 °C
ಶ್ರೀಲಂಕಾ ಎದುರಾಳಿ: ವೆಸ್ಟ್ ಇಂಡೀಸ್‌ಗೆ ಬ್ಯಾಟಿಂಗ್ ಚಿಂತೆ

T20 World Cup: ಪೊಲಾರ್ಡ್‌ ಪಡೆಗೆ ಗೆಲುವು ಅನಿವಾರ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಅಬುಧಾಬಿ: ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್‌ ತಂಡವು ಸೆಮಿಫೈನಲ್ ಆಸೆ ಜೀವಂತವಾಗಿರಿಕೊಳ್ಳಲು ಜಯ ಗಳಿಸುವ ಅನಿವಾರ್ಯತೆಯಲ್ಲಿದೆ. ಟಿ20 ವಿಶ್ವಕಪ್‌ನ ಒಂದನೇ ಗುಂಪಿನಲ್ಲಿ ತಂಡವು ಗುರುವಾರ ಶ್ರೀಲಂಕಾಕ್ಕೆ ಮುಖಾಮುಖಿಯಾಗಲಿದೆ.

ವೆಸ್ಟ್ ಇಂಡೀಸ್ ತಂಡವು ಸತತ ಎರಡು ಸೋಲುಗಳ ಬಳಿಕ ಬಾಂಗ್ಲಾ ವಿರುದ್ಧ ಮೂರು ರನ್‌ಗಳಿಂದ ಜಯಿಸಿತ್ತು. ನಾಲ್ಕರ ಘಟ್ಟ ತಲುಪುವ ತಂಡದ ಸಾಧ್ಯತೆ ತೀರಾ ಕ್ಷೀಣವಾಗಿದ್ದರೂ ಅದು ಇನ್ನೂ ಸ್ಪರ್ಧೆಯಿಂದ ಹೊರಬಿದ್ದಿಲ್ಲ. ಉಳಿದಿರುವ ಎರಡೂ ಪಂದ್ಯಗಳನ್ನು ಕೀರನ್ ಪೊಲಾರ್ಡ್‌ ಬಳಗ ಭಾರಿ ಅಂತರದಿಂದ ಗೆದ್ದು ನೆಟ್‌ ರನ್‌ರೇಟ್‌ನಲ್ಲಿ ಪ್ರಗತಿ ಸಾಧಿಸಬೇಕಿದೆ.

ತಂಡದ ಜಯದ ಕನಸು ಈಡೇರಬೇಕಾದರೆ ಬ್ಯಾಟಿಂಗ್‌ನಲ್ಲಿ ಸುಧಾರಣೆ ಕಂಡುಕೊಳ್ಳಬೇಕಿದೆ.

ಟೂರ್ನಿಯಿಂದ ಬಹುತೇಕ ಹೊರಬಿದ್ದಿರುವ ದಸುನ್ ಶನಕ ನಾಯಕತ್ವದ ಶ್ರೀಲಂಕಾ ತಂಡವು ಜಯದೊಂದಿಗೆ ಅಭಿಯಾನ ಕೊನೆಗೊಳಿಸುವ ಹಂಬಲದಲ್ಲಿದೆ.2014ರಲ್ಲಿ ಚಾಂಪಿಯನ್ ಆಗಿದ್ದ ತಂಡಕ್ಕೆ ಇದು ಕೊನೆಯ ಪಂದ್ಯ. ಮೊದಲ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿದ್ದ ತಂಡವು ನಂತರ ಸತತ ಮೂರು ಪಂದ್ಯಗಳಲ್ಲಿ ನಿರಾಸೆ ಅನುಭವಿಸಿತ್ತು.

ಈ ಪಂದ್ಯದಲ್ಲಿ ಶನಕ ಪಡೆ ಗೆದ್ದರೂ ಗರಿಷ್ಠ ನಾಲ್ಕು ಪಾಯಿಂಟ್ಸ್ ಗಳಿಸಬಹುದು. ಆದರೆ ನಾಲ್ಕರಘಟ್ಟಕ್ಕೇರಲು ಅದು ಸಾಕಾಗದು.

ಟಿ20 ವಿಶ್ವಕಪ್ ಮುಖಾಮುಖಿ

ಪಂದ್ಯಗಳು 7

ಶ್ರೀಲಂಕಾ ಜಯ 5

ವೆಸ್ಟ್ ಇಂಡೀಸ್‌ ಜಯ 2

ಟಿ20 ರ‍್ಯಾಂಕಿಂಗ್‌

ವೆಸ್ಟ್ ಇಂಡೀಸ್‌ 8‌

ಶ್ರೀಲಂಕಾ 10

ಪಂದ್ಯ ಆರಂಭ: ಸಂಜೆ 7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು