ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮುಯೆಲ್ಸ್‌ ಮೇಲೆ 6 ವರ್ಷ ನಿಷೇಧ

Published 23 ನವೆಂಬರ್ 2023, 23:12 IST
Last Updated 23 ನವೆಂಬರ್ 2023, 23:12 IST
ಅಕ್ಷರ ಗಾತ್ರ

ದುಬೈ: ಎಮಿರೇಟ್ಸ್‌ ಕ್ರಿಕೆಟ್‌ ಮಂಡಳಿಯ ಭ್ರಷ್ಟಾಚಾರ ತಡೆ ಸಂಹಿತೆ ಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ವೆಸ್ಟ್‌ ಇಂಡೀಸ್ ತಂಡದ ಮಾಜಿ  ಆಟಗಾರ ಮರ್ಲಾನ್‌ ಸಾಮುಯೆಲ್ಸ್ ಅವರನ್ನು ಆರು ವರ್ಷಗಳ ಅವಧಿಗೆ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿಷೇಧ ಹೇರಲಾಗಿದೆ.

42 ವರ್ಷದ ಸಾಮುಯೆಲ್ಸ್‌ 71 ಟೆಸ್ಟ್‌ ಪಂದ್ಯಗಳನ್ನು, 207 ಏಕದಿನ ಮತ್ತು 67 ಟಿ20 ಪಂದ್ಯಗಳನ್ನು ಆಡಿದ್ದಾರೆ. 2020ರಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು. ಆರೋಪಗಳು 2019ರ ಅಬುಧಾಬಿ ಟಿ10 ಲೀಗ್‌ಗೆ ಸಂಬಂಧಿಸಿದೆ. 2021ರಲ್ಲಿ ದಾಖಲಾದ ನಾಲ್ಕು ಪ್ರತ್ಯೇಕ ಪ್ರಕರಣಗಳ ಆಧಾರದ ಮೇಲೆ ಶಿಕ್ಷೆ ವಿಧಿಸಲಾಗಿದೆ.

ಕ್ರಿಕೆಟ್‌ ಘನತೆಗೆ ಕುಂದುಂಟಾಗುವ ರೀತಿಯಲ್ಲಿ ಪಡೆದಿರುವ ಉಡುಗೊರೆ, ಹಣ, ಆತಿಥ್ಯ ಮತ್ತು ಇತರ ಲಾಭಗಳ ಬಗ್ಗೆ ಅವರು ಸಂಬಂಧಪಟ್ಟ ಭ್ರಷ್ಟಾಚಾರ ತಡೆ ಘಟಕದ ನಿಯೋಜಿತ ಅಧಿಕಾರಿಗೆ ವಿವರ ನೀಡಲು ವಿಫಲರಾಗಿದ್ದಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ಅವರ ನಿಷೇಧ ಶಿಕ್ಷೆ ನವೆಂಬರ್‌ 11 ರಿಂದ ಆರಂಭವಾಗಲಿದೆ.

ವಿಚಾರಣೆ ವೇಳೆ ನಿಯೋಜಿತ ಅಧಿಕಾರಿಗೆ ಅಸಹಕಾರ ತೋರಿದ ಆರೋಪವೂ ಅವರ ಮೇಲೆ ಇದೆ. ಮಾಹಿತಿಯನ್ನು ಬಚ್ಚಿಟ್ಟು, ತನಿಖೆ ಪ್ರಕ್ರಿಯೆ ವಿಳಂಬ ಮಾಡಿದ ಆರೋಪವೂ ಅವರ ಮೇಲಿದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT