ಬುಧವಾರ, ಸೆಪ್ಟೆಂಬರ್ 18, 2019
28 °C

ಟೆಸ್ಟ್‌: ಕುಸಿದ ಭಾರತಕ್ಕೆ ರಾಹುಲ್ ಆಸರೆ

Published:
Updated:

ನಾರ್ತ್ ಸೌಂಡ್‌, ವೆಸ್ಟ್ ಇಂಡೀಸ್‌: ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಅಗ್ರ ಕ್ರಮಾಂಕದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಕೈಚೆಲ್ಲಿದರು. ಆದರೆ ಆರಂಭಿಕ ಆಟಗಾರ ಕೆ.ಎಲ್‌.ರಾಹುಲ್ ಭಾರತದ ಇನಿಂಗ್ಸ್‌ಗೆ ಆಧಾರವಾದರು.

ಇಲ್ಲಿ ಗುರುವಾರ ಆರಂಭಗೊಂಡ ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಭೋಜನ ವಿರಾಮದ ವೇಳೆ ಭಾರತ 24 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 68 ರನ್ ಗಳಿಸಿತು.

ಮಳೆಯಿಂದಾಗಿ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯರು ಫೀಲ್ಡಿಂಗ್ ಆಯ್ದುಕೊಂಡರು. ರಾಹುಲ್ ಜೊತೆ ಇನಿಂಗ್ಸ್ ಆರಂಭಿಸಿದ ಮಯಂಕ್ ಅಗರವಾಲ್ ತಂಡದ ಮೊತ್ತ ಐದು ರನ್‌ ಗಳಾಗಿದ್ದಾಗ ಕೆಮರ್ ರೋಚ್‌ಗೆ ವಿಕೆಟ್ ಒಪ್ಪಿಸಿದರು. ಅವರ ಗಳಿಕೆ ಕೇವಲ ಐದು ರನ್ ಆಗಿತ್ತು. ಚೇತೇಶ್ವರ ಪೂಜಾರ ಕೇವಲ ಎರಡು ರನ್ ಗಳಿಸಿ ವಾಪಸಾದರು. ಈ ವಿಕೆಟ್ ಕೂಡ ಕೆಮರ್‌ ರೋಚ್ ಪಾಲಾಯಿತು.

ವಿರಾಟ್ ಕೊಹ್ಲಿ ಕ್ರೀಸ್‌ಗೆ ಬಂದಾಗ ಭಾರತದ ಪಾಳಯದಲ್ಲಿ ಭರವಸೆ ಮೂಡಿತು. ಆದರೆ ಅವರು ಕೇವಲ ಒಂಬತ್ತು ರನ್ ಗಳಿಸಿ ಶಾನನ್ ಗಾಬ್ರಿಯೆಲ್‌ಗೆ ವಿಕೆಟ್ ನೀಡಿದರು. 25 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ರಾಹುಲ್ ಮತ್ತು ಅಜಿಂಕ್ಯ ರಹಾನೆ ಆಸರೆಯಾದರು. ಭೋಜನಕ್ಕೆ ತೆರಳುವಾಗಿ ರಾಹುಲ್ ನಾಲ್ಕು ಬೌಂಡರಿಗಳೊಂದಿಗೆ 37 ರನ್ ಗಳಿಸಿದ್ದು ರಹಾನೆ ಎರಡು ಬೌಂಡರಿ ಸೇರಿದಂತೆ 10 ರನ್ ಗಳಿಸಿದ್ದಾರೆ.

Post Comments (+)