ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ಟೆಸ್ಟ್‌: ವೆಸ್ಟ್‌ ಇಂಡೀಸ್‌ಗೆ ಸವಾಲಿನ ಗುರಿ, ಶಾಹೀನ್ ಅಫ್ರೀದಿಗೆ 6 ವಿಕೆಟ್

ಎರಡನೇ ಟೆಸ್ಟ್‌: ಎಡಗೈ ವೇಗಿ ಶಾಹೀನ್ ಅಫ್ರೀದಿಗೆ 6 ವಿಕೆಟ್
Last Updated 24 ಆಗಸ್ಟ್ 2021, 6:45 IST
ಅಕ್ಷರ ಗಾತ್ರ

ಕಿಂಗ್‌ಸ್ಟನ್‌ (ಜಮೈಕಾ) ಎಪಿ): ಎಡಗೈ ವೇಗದ ಬೌಲರ್‌ ಶಾಹೀನ್ಅಫ್ರೀದಿ ಅವರ ಜೀವನಶ್ರೇಷ್ಠ ಬೌಲಿಂಗ್‌ (51ಕ್ಕೆ6) ನೆರವಿನಿಂದ ಪಾಕಿಸ್ತಾನ ತಂಡ, ಎರಡನೇ ಕ್ರಿಕೆಟ್‌ ಟೆಸ್ಟ್ ಪಂದ್ಯದ ನಾಲ್ಕನೇ ದಿನ ವೆಸ್ಟ್‌ ಇಂಡೀಸ್‌ ತಂಡದ ವಿರುದ್ಧ ಬಿಗಿ ಹಿಡಿತ ಸಾಧಿಸಿತು.

ಶಾಹೀನ್ಅವರಿಗೆ ಮೊಹಮ್ಮದ್‌ ಅಬ್ಬಾಸ್‌ (44ಕ್ಕೆ3) ಸಮರ್ಥ ಬೆಂಬಲ ನೀಡಿದ್ದು, ಸೋಮವಾರದ ಆಟದಲ್ಲಿ ವೆಸ್ಟ್‌ ಇಂಡೀಸ್‌ ಮೊದಲ ಇನಿಂಗ್ಸ್‌ನಲ್ಲಿ 150 ರನ್ನಿಗೆ ಕುಸಿಯಿತು. ಪ್ರವಾಸಿ ಪಾಕ್‌ ತಂಡ 152 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆ ಪಡೆಯಿತು.

ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗೆ 176 ರನ್‌ ಗಳಿಸಿದ್ದಾಗ ನಾಯಕ ಬಾಬರ್‌ ಆಜಂ ಇನಿಂಗ್ಸ್ ಡಿಕ್ಲೇರ್‌ ಮಾಡಿಕೊಳ್ಳುವ ದಿಟ್ಟ ನಿರ್ಧಾರ ಕೈಗೊಂಡರು. ಆ ಮೂಲಕ ಆತಿಥೇಯರಿಗೆ ಪಂದ್ಯ ಗೆಲ್ಲಲು ಸುಮಾರು 130 ಓವರುಗಳ ಆಟದಲ್ಲಿ 329 ರನ್‌ ಗಳಿಸಬೇಕಾದ ಸವಾಲು ಎದುರಾಯಿತು.

ದಿನದಾಟ ಆಟ ಮುಗಿದಾಗ ವೆಸ್ಟ್‌ ಇಂಡೀಸ್‌ 1 ವಿಕೆಟ್‌ಗೆ 49 ರನ್‌ ಗಳಿಸಿದೆ. ಕೊನೆಯ ದಿನದಾಟದಲ್ಲಿ ಇನ್ನೂ 280 ರನ್‌ ಗಳಿಸಿದರೆ ವೆಸ್ಟ್‌ ಇಂಡೀಸ್‌ ಪಂದ್ಯ ಹಾಗೂ ಸರಣಿ ತನ್ನದಾಗಿಸಿಕೊಳ್ಳಲಿದೆ.

ಆಟ ಮುಗಿಯಲು ಅರ್ಧ ಗಂಟೆಯಿದ್ದಾಗ ಓಪನರ್‌ ಕೀರನ್‌ ಪೊವೆಲ್‌ (23) ರನ್‌ಔಟ್‌ ಆದರು. ಕ್ರೆಗ್‌ ಬ್ರಾಥ್‌ವೇಟ್‌ 17 ರನ್‌ ಗಳಿಸಿ ಅಂತಿಮ ದಿನ ಆಟ ಮುಂದುವರಿಸಲಿದ್ದಾರೆ.

ಭಾನುವಾರ, ಮೂರನೇ ದಿನದ ಕೊನೆಗೆ ಎರಡನೇ ಇನಿಂಗ್ಸ್‌ನಲ್ಲಿ 3 ವಿಕೆಟ್‌ಗೆ 39 ರನ್‌ ಗಳಿಸಿ ಪರದಾಡಿದ್ದ ವೆಸ್ಟ್‌ ಇಂಡೀಸ್‌ ನಾಲ್ಕನೇ ದಿನ ದೊಡ್ಡ ಜೊತೆಯಾಟದ ಮೂಲಕ ಚೇತರಿಸಿಕೊಳ್ಳಲು ಪಾಕ್‌ ವೇಗಿಗಳು ಅವಕಾಶ ನೀಡಲಿಲ್ಲ.

ಮಿಂಚಿದ ಶಾಹೀನ್: ಶಾಹೀನ್ಅಫ್ರೀದಿ ಮೊದಲ ಟೆಸ್ಟ್‌ನಲ್ಲಿ ಎಂಟು ವಿಕೆಟ್‌ ಗಳಿಸಿದ್ದು, ಎರಡು ಟೆಸ್ಟ್‌ಗಳ ಸರಣಿಯಲ್ಲಿ ಇದುವರೆಗೆ 11.4 ಸರಾಸರಿಯಲ್ಲಿ 14 ವಿಕೆಟ್‌ ಕಬಳಿಸಿದಂತಾಗಿದೆ.

ಬೇಗನೇ ಡಿಕ್ಲೇರ್‌ ಮಾಡುವ ಉದ್ದೇಶದಿಂದ ಪಾಕಿಸ್ತಾನ ಎರಡನೇ ಇನಿಂಗ್ಸ್‌ನಲ್ಲಿ ಬೀಸಾಟವಾಡಿತು. 27.2 ಓವರುಗಳ ಆಟದ ನಂತರ 176 ರನ್‌ ಗಳಿಸಿದ್ದಾಗ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು.

ಸ್ಕೋರುಗಳು: ಪಾಕಿಸ್ತಾನ: 9 ವಿಕೆಟ್‌ಗೆ 302 ಡಿಕ್ಲೇರ್‌ ಮತ್ತು 6 ವಿಕೆಟ್‌ಗೆ 176 ಡಿಕ್ಲೇರ್‌ (ಇಮ್ರಾನ್‌ ಬಟ್‌ 37, ಅಬಿದ್‌ ಅಲಿ 29, ಬಾಬರ್‌ ಆಜಂ 33; ಜೇಸನ್‌ ಹೋಲ್ಡರ್‌ 27ಕ್ಕೆ2, ಅಲ್ಜಾರಿ ಜೋಸೆಫ್‌ 24ಕ್ಕೆ2); ವೆಸ್ಟ್‌ ಇಂಡೀಸ್‌: 150 (ಕ್ರುಮಾ ಬಾನರ್ 37, ಜರ್ಮೇನ್‌ ಬ್ಲ್ಯಾಕ್‌ವುಡ್‌ 33, ಜೇಸನ್‌ ಹೋಲ್ಡರ್‌ 26; ಅಬ್ಬಾಸ್‌ 44ಕ್ಕೆ3, ಶಾಹೀನ್ಅಫ್ರೀದಿ 51ಕ್ಕೆ6) ಮತ್ತು 1 ವಿಕೆಟ್‌ಗೆ 49.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT