ಗುರುವಾರ , ಅಕ್ಟೋಬರ್ 22, 2020
24 °C

ನವೆಂಬರ್‌ 4ರಿಂದ ಮಹಿಳಾ ಚಾಲೆಂಜರ್ ಕ್ರಿಕೆಟ್‌ ಸರಣಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಹಿಳೆಯರ ಮಿನಿ ಐಪಿಎಲ್‌ ಎಂದೇ ಹೇಳಲಾಗುವ ಚಾಲೆಂಜರ್‌ ಕ್ರಿಕೆಟ್‌ ಸರಣಿಯು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ನವೆಂಬರ್‌ 4ರಿಂದ 9ರವರೆಗೆ ನಡೆಯಲಿದೆ. ಇಂಡಿಯನ್ ಪ್ರೀಮಿಯರ್‌ ಲೀಗ್‌ನ‌ ಮೂಲಗಳು ಬುಧವಾರ ಈ ವಿಷಯ ಖಚಿತಪಡಿಸಿವೆ.

ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಚಟುವಟಿಕೆಗಳು ಸ್ಥಗಿತಗೊಂಡಿವೆ. ಮೂರು ತಂಡಗಳ ಸರಣಿಯು ಖಂಡಿತವಾಗಿಯೂ ನಡೆಯಲಿದೆ ಎಂದು ಅಧ್ಯಕ್ಷ ಸೌರವ್‌ ಗಂಗೂಲಿ ಅವರು ಹೇಳುತ್ತಲೇ ಬಂದಿದ್ದರೂ, ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಗೆ(ಬಿಸಿಸಿಐ) ಟೀಕೆಗಳು ಕೇಳಿಬಂದಿದ್ದವು.

‘ಚಾಲೆಂಜರ್‌ ಸರಣಿಯ ವೇಳಾಪಟ್ಟಿ ಅಂತಿಮಗೊಂಡಿದೆ. ನವೆಂಬರ್‌ 4ರಿಂದ 9ರವರೆಗೆ ಯುಎಇಯಲ್ಲಿ ಟೂರ್ನಿ ನಡೆಯಲಿದೆ. ಟ್ರೇಲ್‌ಬ್ಲೇಜರ್ಸ್‌, ವೆಲೋಸಿಟಿ ಹಾಗೂ ಸೂಪರ್‌ನೋವಾಸ್ ತಂಡಗಳು ರೌಂಡ್‌ ರಾಬಿನ್‌ ಲೀಗ್‌ ಮಾದರಿಯಲ್ಲಿ ಸೆಣಸಲಿವೆ. ಫೈನಲ್‌ ಸೇರಿ ಒಟ್ಟು ನಾಲ್ಕು ಪಂದ್ಯಗಳು ನಡೆಯಲಿವೆ‘ ಎಂದು ಐಪಿಎಲ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

‘ಮಹಿಳೆಯರ ಪಂದ್ಯಗಳಿಗೂ ಹೆಚ್ಚು ವೀಕ್ಷಕರು ಇರುವುದರಿಂದ, ಪುರುಷರ ಐಪಿಎಲ್‌ ಫೈನಲ್‌ ಪಂದ್ಯದ ದಿನ ಚಾಲೆಂಜರ್‌ ಸರಣಿಯ ಅಂತಿಮ ಪಂದ್ಯವನ್ನು ನಡೆಸುತ್ತಿಲ್ಲ‘ ಎಂದು ಅಧಿಕಾರಿ ನುಡಿದರು.

ಕಳೆದ ವಾರವಷ್ಟೇ, ಮಾಜಿ ಎಡಗೈ ಸ್ಪಿನ್ನರ್ ನೀತು ಡೇವಿಡ್ ನೇತೃತ್ವದಲ್ಲಿ ಬಿಸಿಸಿಐನ ನೂತನ ಮಹಿಳಾ ಆಯ್ಕೆ ಸಮಿತಿಯನ್ನು ರಚಿಸಲಾಗಿದೆ. ಇದೀಗ ಮೂರೂ ತಂಡಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ಸಮಿತಿಯ ಮೇಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು