ಬೆಂಗಳೂರು: ‘ಮಿಥಾಲಿ ರಾಜ್ ಅವ ರಂತಹ ದಿಗ್ಗಜ ಆಟಗಾರ್ತಿ ನಾಯಕಿ ಯಾಗಿರುವ ವೆಲೊಸಿಟಿ ತಂಡದಲ್ಲಿ ನಾನು ಇದ್ದೇನೆ. ಭಾಳ ಖುಷಿಯಾಗುತ್ತಿದೆ. ಹನ್ನೊಂದರ ಬಳಗದಲ್ಲಿ ಜಾಗ ಸಿಗ ದಿದ್ದರೂ ಆ ತಂಡದೊಂದಿಗೆ ಇರುತ್ತೇನೆ ಎನ್ನುವುದೇ ದೊಡ್ಡ ವಿಷಯ’–

16 ವರ್ಷದ ಹುಡುಗಿ ಅನಘಾ ಮುರಳಿಯ ಸಂತಸಕ್ಕೆ ಪಾರವೇ ಇರಲಿಲ್ಲ. ನವೆಂಬರ್ 4ರಿಂದ 9ರವರೆಗೆ ಯುಎಇಯಲ್ಲಿ ಐಪಿಎಲ್ ಅಂಗವಾಗಿ ನಡೆಯಲಿರುವ ಮಹಿಳಾ ಚಾಲೆಂಜರ್ಸ್ ಟೂರ್ನಿಯಲ್ಲಿ ಆಡಲು ಅನಘಾ ವೆಲೊಸಿಟಿ ತಂಡಕ್ಕೆ ಆಯ್ಕೆಯಾಗಿದ್ದಾರೆ. ಭಾನುವಾರ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

ಟೆನಿಸ್, ಈಜು ಕ್ರೀಡೆಗಳಲ್ಲಿದ್ದ ಅನಘಾ, ಕ್ರಿಕೆಟ್‌ಗೆ ಬಂದಿದ್ದು ಆಕಸ್ಮಿಕ.ಅವರ ಪ್ರತಿಭೆಯನ್ನು ಗುರುತಿಸಿ ಮಾರ್ಗದರ್ಶನ ನೀಡಿದವರು ಹೆರಾನ್ಸ್ ಕ್ಲಬ್‌ನ ಕೋಚ್ ಮುರಳೀಧರ್. ಇದೀಗ ಅನಘಾ ಎಡಗೈ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದಾರೆ.

‘ನಾನು ಮೊದಲು ಟೆನಿಸ್ ಆಡು ತ್ತಿದ್ದೆ. ಎಐಟಿಎ ಟೂರ್ನಿಗಳಲ್ಲಿಯೂ ಆಡಿದ್ದೆ. ಆಮೇಲೆ ಈಜು ಕಲಿತೆ. ಕೆಲವು ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಅದೊಂದು ದಿನ ಬಿಡುವಿನಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದೆವು. ನನ್ನ ಬೌಲಿಂಗ್ ನೋಡಿದ ಒಬ್ಬರು ಕ್ರಿಕೆಟ್ ಕಲಿ ಎಂದರು. ಅಪ್ಪ ನನ್ನನ್ನು ಹೆರಾನ್ಸ್ ಕ್ಲಬ್‌ಗೆ ಸೇರಿಸಿದರು. ರಾಜ್ಯದ 16, 18 ಮತ್ತು 22 ವರ್ಷದೊಳಗಿ ನವರ ತಂಡಗಳಲ್ಲಿ ಆಡಿದ್ದೇನೆ. ಏಕದಿನ ಕ್ರಿಕೆಟ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದೇನೆ. ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿದ್ದು ಅವಿಸ್ಮರಣೀಯ. ರವೀಂದ್ರ ಜಡೇಜ ನೆಚ್ಚಿನ ಆಟಗಾರ’ ಎಂದು ವಿವರಿಸಿದರು.

‘ಕರ್ನಾಟಕದ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರನ್ನು ಭೇಟಿ ಯಾಗಿದ್ದೇನೆ. ಮಿಥಾಲಿ ಅವರನ್ನು ಈಗ ಭೇಟಿಯಾಗುವ ಅವಕಾಶ ಸಿಕ್ಕಿದೆ. ಭಾರತ ಮಹಿಳಾ ತಂಡದ ಆಟಗಾರ್ತಿ ಯರೊಂದಿಗೆ ಇದ್ದು ಕಲಿಯುವ ಅವಕಾಶ ಸಿಗುತ್ತಿದೆ. ಒಂದೊಮ್ಮೆ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿದರೆ ಉತ್ತಮವಾಗಿ ಆಡುತ್ತೇನೆ’ ಎಂದರು.

ಇದೇ ಮಂಗಳವಾರ ತಂಡದ ಆಟ ಗಾರ್ತಿಯರು ಮುಂಬೈನಲ್ಲಿ ಒಂದುಗೂಡಲಿದ್ದಾರೆ. ಒಂದು ವಾರ ಕಡ್ಡಾಯ ಕ್ವಾರಂಟೈನ್ ನಂತರ ಯುಎಇಗೆ ಪ್ರಯಾಣ ಬೆಳೆಸಲಿದೆ.

‘ಈಜು, ಟೆನಿಸ್ ಬಿಟ್ಟಿದ್ದಕ್ಕೆ ಯಾವತ್ತೂ ಬೇಸರವಾಗಿಲ್ಲ. ಕ್ರಿಕೆಟ್ ನೊಂದಿಗೆ ಫಿಟ್‌ನೆಸ್‌ಗಾಗಿ ಆ ಎರಡೂ ಆಟಗಳಲ್ಲಿ ತೊಡಗಿಕೊಳ್ಳುತ್ತೇನೆ. ವೈದ್ಯೆಯಾಗಿರುವ ಅಮ್ಮ ಸವಿತಾ ಮತ್ತು ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅಪ್ಪ ಮುರಳಿ ಪ್ರಸಾದ್ ಬಹಳ ಪ್ರೋತ್ಸಾಹ ನೀಡುತ್ತಿದ್ದಾರೆ’ ಎಂದು ಟ್ರಾನ್ಸೆಂಡ್ ಪಿಯು ಕಾಲೇಜಿನ ವಿದ್ಯಾರ್ಥಿನಿಯೂ ಆಗಿರುವ ಅನಘಾ ಹೇಳುತ್ತಾರೆ.

ಅನಘಾ ಪ್ರತಿಭಾವಂತ ಆಟಗಾರ್ತಿ. ಈಗಾಗಲೇ ಸೀನಿಯರ್ ತಂಡದಲ್ಲಿ ಆಡುವ ಕೌಶಲ ಹೊಂದಿದ್ದಾರೆ. ಐಪಿಎಲ್‌ನಲ್ಲಿ ಆಡುವ ಅವಕಾಶ ದೊರೆತಿದ್ದು ಅವರ ಪ್ರತಿಭೆಗೆ ಸಿಕ್ಕ ಮನ್ನಣೆ

– ಮುರಳೀಧರ್,ಹಿರಿಯ ಕೋಚ್ ಹೆರಾನ್ಸ್ ಕ್ಲಬ್, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.