ದಂಬುಲಾ, ಶ್ರೀಲಂಕಾ: ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ತಂಡವು ಇಲ್ಲಿ ನಡೆಯುತ್ತಿರುವ ಮಹಿಳೆಯರ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಭಾನುವಾರ ಯುನೈಟೆಡ್ ಅರಬ್ ಎಮಿರೇಟ್ಸ್ ತಂಡವನ್ನು ಎದುರಿಸಲಿದೆ.

ಹಾಲಿ ಚಾಂಪಿಯನ್ ಭಾರತ ತಂಡವು ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಜಯ ಗಳಿಸಿತ್ತು. ಇದೀಗ ಯುಎಇ ವಿರುದ್ಧ ಸುಲಭ ಜಯ ಸಾಧಿಸಿ, ಸೆಮಿಫೈನಲ್ ಪ್ರವೇಶಿಸುವತ್ತ ಚಿತ್ತ ನೆಟ್ಟಿದೆ.

ಅನುಭವ ಮತ್ತು ಸಾಮರ್ಥ್ಯದಲ್ಲಿ ಭಾರತ ತಂಡವು ಯುಎಇಗಿಂತ ಬಲಿಷ್ಠವಾಗಿದೆ. ಮಧ್ಯಮವೇಗಿ ಪೂಜಾ ವಸ್ತ್ರಕರ್, ಸ್ಪಿನ್ನರ್ ದೀಪ್ತಿ ಶರ್ಮಾ ಹಾಗೂ ರೇಣುಕಾ ಸಿಂಗ್ ಅವರು ಉತ್ತಮ ಲಯದಲ್ಲಿದ್ದಾರೆ. ಮೊದಲ ಪಂದ್ಯದಲ್ಲಿ ಪಾಕ್ ತಂಡವು ಸಾಧಾರಣ ಮೊತ್ತಕ್ಕೆ ಕುಸಿಯಲು ಈ ಮೂವರ ಬೌಲಿಂಗ್ ಕಾರಣವಾಗಿತ್ತು.

ಈ ಪಂದ್ಯದಲ್ಲಿಯೂ ಅವರು ಮಿಂಚುವ ನಿರೀಕ್ಷೆ ಇದೆ. ಭಾರತದ ಜೋಡಿ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂದಾನ ಅವರು ಉತ್ತಮ ಆರಂಭ ನೀಡುವ ವಿಶ್ವಾಸವಿದೆ. ಮೊದಲ ಪಂದ್ಯದಲ್ಲಿ ಅವರು ಪ್ರಥಮ ವಿಕೆಟ್ ಜೊತೆಯಾಟದಲ್ಲಿ 9.3 ಓವರ್ಗಳಲ್ಲಿ 85 ರನ್ ಸೇರಿಸಿದ್ದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಹೊಣೆಯರಿತು ಇನಿಂಗ್ಸ್ಗೆ ಬಲ ತುಂಬಬೇಕಿದೆ.

‘ಇದೇ ವರ್ಷ ಬಾಂಗ್ಲಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಅದಕ್ಕೂ ಮುನ್ನ ನಮಗೆ ಹೆಚ್ಚು ಪಂದ್ಯಗಳು ಲಭ್ಯವಿಲ್ಲ. ಆದ್ದರಿಂದ ಏಷ್ಯಾ ಕಪ್ ಟೂರ್ನಿಯು ಪೂರ್ವಭಾವಿ ಅಭ್ಯಾಸದ ವೇದಿಕೆಯಾಗಿದೆ’ ಎಂದು ತಂಡದ ಬೌಲರ್ ರೇಣುಕಾ ಸಿಂಗ್ ಸುದ್ದಿಗಾರರಿಗೆ ಹೇಳಿದರು.

ಭಾರತೀಯ ಮೂಲದ ಆಟಗಾರ್ತಿ
ಯರು ಹೆಚ್ಚಿನ ಸಂಖ್ಯೆಯಲ್ಲಿರುವ ಯುಎಇ ಕಠಿಣ ಪೈಪೋಟಿ ಯೊಡ್ಡುವ ವಿಶ್ವಾಸದಲ್ಲಿದೆ. ಇಶಾ ರೋಹಿತ್ ಓಜಾ ನಾಯಕತ್ವದ ತಂಡವು ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಸೋತಿತ್ತು. ಆ ಪಂದ್ಯದಲ್ಲಿ ಕವಿಶಾ ಎಗಡೊಗೆ ಆಲ್ರೌಂಡ್ ಆಟವಾಡಿದ್ದರು. ಖುಷಿ ಶರ್ಮಾ ಅವರು ಉತ್ತಮ ಬ್ಯಾಟಿಂಗ್ ಮಾಡಿದ್ದರು. ಭಾರತ ತಂಡದ ವಿರುದ್ಧವೂ ಮಿಂಚುವ ಛಲದಲ್ಲಿದ್ಧಾರೆ.

ಪಂದ್ಯ ಆರಂಭ: ಮಧ್ಯಾಹ್ನ 2

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ ಹಾಟ್ಸ್ಟಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.