ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಚಾಲೆಂಜ್‌ ಟೂರ್ನಿ: ಮಂದಾನ, ಮಿಥಾಲಿ, ಹರ್ಮನ್‌ಪ್ರೀತ್‌ ಕೌರ್‌ಗೆ ಸಾರಥ್ಯ

ಕರ್ನಾಟಕದ ಅನಘಾಗೆ ಅವಕಾಶ
Last Updated 11 ಅಕ್ಟೋಬರ್ 2020, 11:25 IST
ಅಕ್ಷರ ಗಾತ್ರ

ನವದೆಹಲಿ: ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ ನವೆಂಬರ್‌ 4ರಿಂದ 9ರವರೆಗೆ ನಡೆಯುವ ಮಹಿಳಾ ಚಾಲೆಂಜ್‌ ಟೂರ್ನಿ (ಮಹಿಳೆಯರ ಐಪಿಎಲ್‌) ಮೂರೂ ತಂಡಗಳನ್ನು ಪ್ರಕಟಿಸಲಾಗಿದ್ದು, ಕರ್ನಾಟಕದ ಎಂ.ಅನಘಾ ಅವಕಾಶ ಗಿಟ್ಟಿಸಿದ್ದಾರೆ. ಭಾರತ ಏಕದಿನ ಮತ್ತು ಟಿ20 ತಂಡಗಳ ನಾಯಕಿಯರಾದ ಮಿಥಾಲಿ ರಾಜ್ ಹಾಗೂ ಹರ್ಮನ್‌ಪ್ರೀತ್‌ ಕೌರ್‌ ಅವರು ಕ್ರಮವಾಗಿವೆಲೋಸಿಟಿ ಮತ್ತು ಸೂಪರ್‌ನೋವಾ ತಂಡಗಳ ನಾಯಕತ್ವ ವಹಿಸಲಿದ್ದು, ಉಪನಾಯಕಿ ಸ್ಮೃತಿ ಮಂದಾನ, ಟ್ರೇಲ್‌ಬ್ಲೇಜರ್ಸ್‌ ತಂಡದ ಸಾರಥ್ಯ ವಹಿಸಲಿದ್ದಾರೆ.

ಪಂದ್ಯಗಳ ವೇಳಾಪಟ್ಟಿಯನ್ನೂ ಬಿಸಿಸಿಐ ಬಿಡುಗಡೆ ಮಾಡಿದೆ.

ಹೋದ ಆವೃತ್ತಿಯಲ್ಲೂ ಇದೇ ಆಟಗಾರ್ತಿಯರು ತಂಡಗಳನ್ನು ಮುನ್ನಡೆಸಿದ್ದರು. ಮೇಘನಾ ಅವರು ವೆಲೋಸಿಟಿ ತಂಡದಲ್ಲಿ ಆಡಲಿದ್ದಾರೆ.

ನಟ್ಟಕನ್‌ ಚಾಂಥಮ್‌ ಅವರು ಲೀಗ್‌ನಲ್ಲಿ ಆಡಲು ಅವಕಾಶ ಪಡೆದಥಾಯ್ಲೆಂಡ್‌ನ ಮೊದಲ ಆಟಗಾರ್ತಿಯಾಗಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಪ್ಲೇ ಆಫ್‌ ಪಂದ್ಯಗಳು ನಡೆಯುವ ಸಂದರ್ಭದಲ್ಲೇ ಚಾಲೆಂಜ್‌ ಟೂರ್ನಿಯು ಆರಂಭಗೊಳ್ಳಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಸೂಪರ್‌ನೋವಾ ಹಾಗೂ ವೆಲೋಸಿಟಿ ತಂಡಗಳು ಸೆಣಸಲಿವೆ.

‘ನಾಲ್ಕು ಪಂದ್ಯಗಳ ಟೂರ್ನಿಯಲ್ಲಿ ಭಾರತದ ಪ್ರಮುಖ ಆಟಗಾರ್ತಿಯರು ಅಲ್ಲದೆ ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್‌ ಇಂಡೀಸ್‌, ಬಾಂಗ್ಲಾದೇಶ ಹಾಗೂ ನ್ಯೂಜಿಲೆಂಡ್‌ ಆಟಗಾರ್ತಿಯರು ಕಣಕ್ಕಿಳಿಯಲಿದ್ದಾರೆ‘ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

ತಂಡಗಳು: ಸೂಪರ್‌ನೋವಾಸ್‌: ಹರ್ಮನ್‌ಪ್ರೀತ್‌ ಕೌರ್‌ (ನಾಯಕಿ), ಜೆಮಿಮಾ ರೋಡ್ರಿಗಸ್‌ (ಉಪನಾಯಕಿ), ಚಾಮರಿ ಅಟಪಟ್ಟು, ಪ್ರಿಯಾ ಪುನಿಯಾ, ರಾಧಾ ಯಾದವ್‌, ತಾನಿಯಾ ಭಾಟಿಯಾ (ವಿಕೆಟ್‌ ಕೀಪರ್‌), ಶಶಿಕಲಾ ಸಿರಿವರ್ಧನೆ, ಪೂನಮ್‌ ಯಾದವ್‌, ಶಕೇರಾ ಸೆಲ್ಮನ್‌, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಕರ್, ಆಯುಷಿ ಸೋನಿ, ಅಯಾಬೊಂಗಾ ಖಾಕಾ, ಮುಸ್ಕಾನ್ ಮಲಿಕ್‌.

ಟ್ರೇಲ್‌ಬ್ಲೇಜರ್ಸ್‌: ಸ್ಮೃತಿ ಮಂದಾನ (ನಾಯಕಿ), ದೀಪ್ತಿ ಶರ್ಮಾ (ಉಪನಾಯಕಿ), ಪೂನಮ್‌ ರಾವತ್‌, ರಿಚಾ ಘೋಷ್‌, ಡಿ.ಹೇಮಲತಾ, ನುಜತ್‌ ಪರ್ವೀನ್‌ (ವಿಕೆಟ್‌ ಕೀಪರ್‌), ರಾಜೇಶ್ವರಿ ಗಾಯಕವಾಡ್‌, ಹರ್ಲಿನ್‌ ಡಿಯೋಲ್‌, ಜೂಲನ್‌ ಗೋಸ್ವಾಮಿ, ಸಿಮ್ರನ್‌ ದಿಲ್‌ ಬಹಾದ್ದೂರ್‌, ಸಲ್ಮಾ ಕಾತುನ್‌, ಸೋಫಿ ಎಕ್ಲೆಸ್ಟೋನ್‌, ನಟ್ಟಕನ್‌ ಚಾಂಥಮ್‌, ದೀಯೊಂದ್ರಾ ಡಾಟಿನ್‌ ಹಾಗೂ ಕಾಶ್ವಿ ಗೌತಮ್‌.

ವೆಲೋಸಿಟಿ: ಮಿಥಾಲಿ ರಾಜ್‌ (ನಾಯಕಿ), ವೇದಾ ಕೃಷ್ಣಮೂರ್ತಿ (ಉಪನಾಯಕಿ), ಶೆಫಾಲಿ ವರ್ಮಾ, ಸುಶ್ಮಾ ವರ್ಮಾ, ಏಕ್ತಾ ಬಿಷ್ತ್‌ (ವಿಕೆಟ್‌ ಕೀಪರ್‌), ಮಾನಸಿ ಜೋಷಿ, ಶಿಖಾ ಪಾಂಡೆ, ದೇವಿಕಾ ವೈದ್ಯ, ಸುಶ್ರೀ ದಿವ್ಯದರ್ಶಿನಿ, ಮನಾಲಿ ದಕ್ಷಿಣಿ, ಲೀ ಕಾಸ್ಪರೆಕ್‌, ಡೇನಿಯಲ್ಲೆ ವ್ಯಾಟ್‌, ಸ್ಯೂನ್‌ ಲೂಯಿಸ್‌, ಜಹಾನಾರಾ ಆಲಂ ಹಾಗೂ ಎಂ.ಅನಘಾ.

ಪಂದ್ಯಗಳ ವೇಳಾಪಟ್ಟಿ (ಆರಂಭ ಸಂಜೆ 7.30 ಭಾರತೀಯ ಕಾಲಮಾನ)

ದಿನಾಂಕ;ತಂಡಗಳು

ನ.4;ಸೂಪರ್‌ನೋವಾಸ್‌–ವೆಲೋಸಿಟಿ

ನ.5;ವೆಲಾಸಿಟಿ–ಟ್ರೇಲ್‌ಬ್ಲೇಜರ್ಸ್

ನ.7;ಟ್ರೇಲ್‌ಬ್ಲೇಜರ್ಸ್–ಸೂಪರ್‌ನೋವಾಸ್‌

ನ.9;ಫೈನಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT