ಗುವಾಹಟಿ: ದೀಪ್ತಿ ಶರ್ಮಾ (53 ರನ್; 54ಕ್ಕೆ 3) ಅವರ ಆಲ್ರೌಂಡ್ ಆಟದ ನೆರವಿನಿಂದ ಭಾರತ ತಂಡವು ಮಂಗಳವಾರ ಇಲ್ಲಿ ನಡೆದ ಮಹಿಳೆಯರ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಡಕ್ವರ್ತ್ ಲೂಯಿಸ್ ನಿಯಮದನ್ವಯ 59 ರನ್ಗಳಿಂದ ಮಣಿಸಿ ಶುಭಾರಂಭ ಮಾಡಿತು.

ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ ಮಳೆ ಅಡಚಣೆ ಉಂಟು ಮಾಡಿತು. ಹೀಗಾಗಿ, ಇನಿಂಗ್ಸ್ ಅನ್ನು 47 ಓವರ್ಗಳಿಗೆ ನಿಗದಿ ಮಾಡಲಾಯಿತು. ಮೊದಲು ಬ್ಯಾಟ್ ಮಾಡಿದ ಆತಿಥೇಯ ತಂಡವು ದೀಪ್ತಿ ಮತ್ತು ಅಮನ್ಜೋತ್ ಕೌರ್ (57; 56ಎ) ಅವರ ಅರ್ಧಶತಕಗಳ ನೆರವಿನಿಂದ 8 ವಿಕೆಟ್ಗೆ 269 ರನ್ ಗಳಿಸಿತು. ಡಿಎಲ್ಎಸ್ ನಿಯಮದನ್ವಯ ಎದುರಾಳಿ ತಂಡಕ್ಕೆ 271 ರನ್ ಗುರಿ ಪರಿಷ್ಕರಿಸಲಾಯಿತು.

ಅದನ್ನು ಬೆನ್ನಟ್ಟಿದ ಲಂಕಾ ತಂಡವು 45.4 ಓವರ್ಗಳಲ್ಲಿ 211 ರನ್ ಗಳಿಸಿ ಹೋರಾಟವನ್ನು ಮುಗಿಸಿತು. ಒಂದು ಹಂತದಲ್ಲಿ ಒಂದು ವಿಕೆಟ್ಗೆ 80 ರನ್ ಗಳಿಸಿ ಸುಸ್ಥಿತಿಯಲ್ಲಿದ್ದ ತಂಡವು ಭಾರತದ ಬೌಲರ್ಗಳ ಸಾಂಘಿಕ ದಾಳಿಯ ಮುಂದೆ ಕುಸಿತ ಕಂಡಿತು. ನಾಯಕಿ ಚಾಮರಿ ಅಟ್ಟಪಟ್ಟು (43;47ಎ), ನೀಲಾಕ್ಷಿಕಾ (35;29ಎ) ಹೊರತುಪಡಿಸಿ ಉಳಿದ ಬ್ಯಾಟರ್ಗಳು ಕ್ರೀಸ್ನಲ್ಲಿ ಹೆಚ್ಚುಹೊತ್ತು ನಿಲ್ಲಲಿಲ್ಲ. ದೀಪ್ತಿ ಮೂರು ವಿಕೆಟ್ ಪಡೆದರೆ, ಸ್ನೇಹ ರಾಣಾ ಮತ್ತು ಶ್ರೀಚರಣಿ ತಲಾ ಎರಡು ವಿಕೆಟ್ ಕಬಳಿಸಿದರು.

ದೀಪ್ತಿ, ಕೌರ್ ಮಿಂಚು: ಟಾಸ್ ಗೆದ್ದ ಲಂಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಲಾಯಿತು. ಬ್ಯಾಟಿಂಗ್ ಇಳಿದ ಭಾರತ 124 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಅಲ್ಪಮೊತ್ತಕ್ಕೆ ಕುಸಿಯುವ ಆತಂಕದಲ್ಲಿತ್ತು. ಈ ಹಂತದಲ್ಲಿ ಅಮನ್ಜೋತ್ ಮತ್ತು ದೀಪ್ತಿ ಅವರ ಶತಕದ ಜೊತೆಯಾಟವು ಆಸರೆಯಾಯಿತು. ಅವರು ಏಳನೇ ವಿಕೆಟ್ ಜೊತೆಯಾಟದಲ್ಲಿ 103 (99ಎಸೆತ) ರನ್ ಗಳಿಸಿದರು. ಕೊನೆಯ ಹಂತದಲ್ಲಿ ಸ್ನೇಹ ರಾಣಾ (ಔಟಾಗದೇ 28; 15ಎ, 4X2, 6X2) ಕೂಡ ಉಪಯುಕ್ತ ಕಾಣಿಕೆ ನೀಡಿದರು.

ಎಂಟನೇ ಕ್ರಮಾಂಕದ ಬ್ಯಾಟರ್ ಅಮನ್ಜೋತ್ ಕೌರ್ ಅವರು ಭಾರಿ ಒತ್ತಡದ ಸ್ಥಿತಿಯಲ್ಲಿಯೂ ದಿಟ್ಟವಾಗಿ ಆಡಿದರು. ಅಮನ್ಜೋತ್ ಅವರು ತಾಳ್ಮೆ ಮತ್ತು ಏಕಾಗ್ರತೆಯಿಂದ ಬ್ಯಾಟಿಂಗ್ ಮಾಡಿದರು. ಯಾವುದೇ ಹಂತದಲ್ಲಿಯೂ ಒತ್ತಡಕ್ಕೆ ಒಳಗಾಗಲಿಲ್ಲ. ತಮಗಿಂತ ಅನುಭವಿ ದೀಪ್ತಿ ಅವರೊಂದಿಗೆ ಉತ್ತಮ ಹೊಂದಾಣಿಕೆಯ ಆಟವಾಡಿದರು.

ತಮ್ಮ ಚೊಚ್ಚಲ ವಿಶ್ವಕಪ್ ಟೂರ್ನಿಯಲ್ಲಿ ಆಡುತ್ತಿರುವ ಅಮನ್ಜೋತ್ ಅವರು 45 ಎಸೆತಗಳಲ್ಲಿ ಅರ್ಧಶತಕದ ಗಡಿ ತಲುಪಿದರು. ದೀಪ್ತಿ ಕೂಡ ಏಕದಿನ ಕ್ರಿಕೆಟ್ನಲ್ಲಿ 16ನೇ ಅರ್ಧಶತಕ ದಾಖಲಿಸಿದರು.

ಆತಿಥೇಯ ತಂಡದ ಇನಿಂಗ್ಸ್ಗೆ ಉತ್ತಮ ಆರಂಭ ದೊರೆಯಲಿಲ್ಲ. ನಾಲ್ಕನೇ ಓವರ್ನಲ್ಲಿ ಲಂಕಾ ತಂಡದ ಉದೇಶಿಕಾ ಪ್ರಭೋಧನಿ ಅವರ ಬೌಲಿಂಗ್ನಲ್ಲಿ ಸ್ಮೃತಿ ಮಂದಾನ (8 ರನ್) ಅವರು ವಿಶ್ಮಿ ಗುಣರತ್ನೆಗೆ ಕ್ಯಾಚಿತ್ತು ನಿರ್ಗಮಿಸಿದರು. ಈ ಹಂತದಲ್ಲಿ ಪ್ರತೀಕಾ ರಾವಲ್ (37; 59ಎ) ಮತ್ತು ಹರ್ಲೀನ್ ಡಿಯೊಲ್ (48; 64ಎ) ಎರಡನೇ ವಿಕೆಟ್ ಜೊತೆಯಾಟದಲ್ಲಿ 67 ರನ್ ಸೇರಿಸಿದರು.

ತುಸು ಚೇತರಿಕೆ ನೀಡಿದ ಈ ಜೋಡಿಯನ್ನು ಶ್ರೀಲಂಕಾದ ಎಡಗೈ ಸ್ಪಿನ್ನರ್ ಐನೋಕಾ ರಣವೀರಾ ಅವರು ಬೇರ್ಪಡಿಸಿದರು. ಹರ್ಲಿನ್, ಪ್ರತೀಕಾ, ನಾಯಕಿ ಹರ್ಮನ್ಪ್ರೀತ್ ಕೌರ್ (21; 19ಎ) ಮತ್ತು ಜೆಮಿಮಾ ರಾಡ್ರಿಗಸ್ ವಿಕೆಟ್ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಇದರಿಂದಾಗಿ ಮಧ್ಯಮ ಕ್ರಮಾಂಕ ಕುಸಿಯಿತು.

ಇನ್ನೊಂದೆಡೆ ಚಾಮರಿ ಅಟಪಟ್ಟು ಅವರು ರಿಚಾ ಘೋಷ್ (2 ರನ್) ಅವರ ವಿಕೆಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.