ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಮಾಮ್ ಶತಕ; ಪವಾಡ ಮಾಡದ ಪಾಕ್!

ಬಾಂಗ್ಲಾಕ್ಕೆ 94 ರನ್‌ ಸೋಲು; ಮಲಿಕ್‌ಗೆ ಕೊನೆಯ ವಿಶ್ವಕಪ್ ಟೂರ್ನಿ
Last Updated 6 ಜುಲೈ 2019, 1:13 IST
ಅಕ್ಷರ ಗಾತ್ರ

ಲಾರ್ಡ್ಸ್‌, ಲಂಡನ್: ಪಾಕಿಸ್ತಾನ ತಂಡವು ಶುಕ್ರವಾರ ಬಾಂಗ್ಲಾದೇಶ ಎದುರಿನ ಪಂದ್ಯವನ್ನೇನೋ ಗೆದ್ದಿತು. ಆದರೆ ತಂಡವು ಸೆಮಿಫೈನಲ್‌ ಪ್ರವೇಶಿಸಲು ಅಗತ್ಯವಿದ್ದ ಪವಾಡ ನಡೆಯಲಿಲ್ಲ.

ಲಾರ್ಡ್ಸ್‌ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಪಾಕಿಸ್ತಾನ ತಂಡ ಬ್ಯಾಟ್‌ ಮಾಡಿತು. 400ಕ್ಕೂ ಹೆಚ್ಚು ರನ್‌ಗಳ ಮೊತ್ತ ಗಳಿಸ
ಬೇಕಾಗಿದ್ದ ಒತ್ತಡದಲ್ಲಿದ್ದ ಪಾಕಿಸ್ತಾನಕ್ಕೆ ಎಡಗೈ ಮಧ್ಯಮವೇಗಿ ಮುಸ್ತಫಿಜುರ್ ರೆಹಮಾನ್ (75ಕ್ಕೆ5) ಪರಿಣಾಮಕಾ ರಿಯಾಗಿ ಕಡಿವಾಣ ಹಾಕಿದರು. ಸೆಮಿ ಫೈನಲ್ ಪ್ರವೇಶಿಸಬೇಕಾದರೆ 300ಕ್ಕೂ ಹೆಚ್ಚು ರನ್‌ಗಳ ಅಂತರದಿಂದ ಬಾಂಗ್ಲಾ ತಂಡವನ್ನು ಸೋಲಿಸುವ ಸವಾಲು ಇತ್ತು. ಆದರೆ ಪಾಕ್ ತಂಡವು 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 315 ರನ್‌ ಗಳಿಸಿತು.

ಇದರಿಂದಾಗಿ ಕೇವಲ ಏಳು ರನ್‌ಗಳಿಗೆ ಬಾಂಗ್ಲಾ ತಂಡವನ್ನು ಆಲೌಟ್ ಮಾಡಿದರೆ ಮಾತ್ರ ಪಾಕ್ ತಂಡಕ್ಕೆ ನಾಲ್ಕರ ಘಟ್ಟಕ್ಕೆ ಪ್ರವೇಶಿಸುವ ಅವಕಾಶ ಇತ್ತು.

ಆದರೆ ಬಾಂಗ್ಲಾದೇಶ ತಂಡವು ಎರಡು ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ ಎಂಟು ರನ್ ಗಳಿಸಿತು!

ಪಾಕ್ ಎಡಗೈ ವೇಗಿ ಶಾಹೀನ್ ಆಫ್ರಿದಿ (35ಕ್ಕೆ6) ಅವರ ಬೌಲಿಂಗ್‌ ನಿಂದಾಗಿ ಬಾಂಗ್ಲಾ ತಂಡವು ಅಂತಿ ಮವಾಗಿ 44.1 ಓವರ್‌ಗಳಲ್ಲಿ 221 ರನ್‌ ಗಳಿಸಿತು. ಪಾಕ್ 94 ರನ್‌ಗಳಿಂದ ಜಯಿಸಿತು.

ಇಮಾಮ್ ಶತಕ; ಬಾಬರ್ ಮಿಂಚು: ಪಾಕ್ ತಂಡಕ್ಕೆ ಎಂಟನೇ ಓವರ್‌ನಲ್ಲಿಯೇ ಮೊದಲ ಆಘಾತ ವಾಯಿತು. ಸೈಫುದ್ದೀನ್ ಹಾಕಿದ ಎಂಟನೇ ಓವರ್‌ನಲ್ಲಿ ಫಖ್ರ್ ಜಮಾನ್ ಅವರನ್ನು ಔಟ್ ಮಾಡಿದರು.

ಆಗ ಇಮಾಮ್ ಉಲ್ ಹಕ್ (100; 100ಎಸೆತ, 7ಬೌಂಡರಿ) ಮತ್ತು ಬಾಬರ್ ಆಜಂ (96; 98ಎಸೆತ,11ಬೌಂಡರಿ) ಅವರ ಬ್ಯಾಟಿಂಗ್ ಸೊಬಗು ಮಾತ್ರ ನೆನಪಿನಲ್ಲಿ ಉಳಿಯು ವಂತದ್ದು.ಎರಡನೇ ವಿಕೆಟ್ ಜೊತೆಯಾಟದಲ್ಲಿ ಇವರಿಬ್ಬರು 157 ರನ್‌ ಸೇರಿಸಿದರು. 32ನೇ ಓವರ್‌ನಲ್ಲಿ ಸೈಫುದ್ದೀನ್ ಎಸೆತದಲ್ಲಿ ಬಾಬರ್ ಔಟಾದರು. ಇದರಿಂದಾಗಿ ಜೊತೆಯಾಟವೂ ಮುರಿದುಬಿದ್ದಿತು.‌ 42ನೇ ಓವರ್‌ನಲ್ಲಿ ಮುಸ್ತಫಿಜುರ್ ಬೌಲಿಂಗ್‌ನಲ್ಲಿ ಇಮಾಮ್ ಹಿಟ್‌ವಿಕೆಟ್ ಆದರು.ಆದರೆ ಅವರ ಶತಕದ ಆಟವು ಪ್ರೇಕ್ಷಕರಿಗೆ ಭಾರಿ ಮನರಂಜನೆ ನೀಡಿತು. ಅದರಿಂದಾಗಿ ತಂಡವು ಮುನ್ನೂರು ರನ್‌ ಗಳಿಕೆಯತ್ತ ದಾಪುಗಾಲಿಟ್ಟಿತ್ತು. ಶತಕದ ನಂತರ ಅವರು ಸ್ಫೋಟಕ ಆಟವಾಡಿ ದೊಡ್ಡ ಮೊತ್ತ ಕಲೆಹಾಕುವ ಅವಕಾಶ ಇತ್ತು. ಆದರೆ, ಅವರು ಔಟಾದಾಗ ತಂಡವು 246 ರನ್‌ಗಳಿಗೆ ಮೂರು ವಿಕೆಟ್ ಕಳೆದುಕೊಂಡಿತ್ತು. ಇನ್ನೂ ಎಂಟು ಓವರ್‌ಗಳ ಆಟ ಬಾಕಿಯಿತ್ತು.

ಅನುಭವಿ ಬ್ಯಾಟ್ಸ್‌ಮನ್‌ಗಳಾದ ಮೊಹಮ್ಮದ್ ಹಫೀಜ್, ಹ್ಯಾರಿಸ್ ಸೊಹೈಲ್, ಸರ್ಫರಾಜ್ ಅಹಮದ್ ವಿಕೆಟ್‌ಗಳು ಪಟಪಟನೆ ಉದುರಿದವು. ಇದೆಲ್ಲದರ ನಡುವೆಯೂ ಇಮದ್ ವಾಸೀಂ (43; 26ಎಸೆತ, 6ಬೌಂಡರಿ, 1ಸಿಕ್ಸರ್) ಬೀಸಾಟವಾಡಿದರು.

ಶಕೀಬ್ ಅಲ್ ಹಸನ್ ದಾಖಲೆ
ಶಕೀಬ್ ಅಲ್ ಹುಸೇನ್ ವಿಶ್ವಕಪ್‌ನ 8 ಪಂದ್ಯಗಳಲ್ಲಿ ಒಟ್ಟು 606 ರನ್‌ ಗಳಿಸಿದರು. ವಿಶ್ವಕಪ್ ಇತಿಹಾಸದಲ್ಲಿ 600ಕ್ಕೂ ಹೆಚ್ಚು ರನ್‌ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಅವರಾಗಿದ್ದಾರೆ. 2003ರಲ್ಲಿ ಭಾರತದ ಸಚಿನ್ ತೆಂಡೂಲ್ಕರ್ 673 ರನ್‌ ಗಳಿಸಿದ್ದರು. 2007ರಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್ 659 ರನ್ ಕಲೆಹಾಕಿದ್ದರು. ಪಾಕಿಸ್ತಾನ ಎದುರಿನ ಪಂದ್ಯದಲ್ಲಿ ಶಕೀಬ್‌ 64 ರನ್‌ ಗಳಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಐದನೇ ಅರ್ಧಶತಕವನ್ನು ದಾಖಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT