ಕಾರ್ಡಿಫ್:ಪ್ರಶಸ್ತಿಗೆ ನೆಚ್ಚಿನ ತಂಡವಾಗಿರುವ ಆತಿಥೇಯ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ತಂಡಗಳ ನಡುವೆ ಶನಿವಾರ ಪಂದ್ಯ ನಡೆಯುತ್ತಿದೆ. ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.

ಜೇಸನ್ ರಾಯ್ ಮತ್ತುಜಾನಿ ಬೇಸ್ಟೊ ಆರಂಭಿಕರಾಗಿ ಬ್ಯಾಟಿಂಗ್ ಮಾಡುತ್ತಿದ್ದು, ಬಾಂಗ್ಲಾ ಸ್ಪಿನ್ ಬೌಲರ್‌ಗಳೊಂದಿಗೆ ಪಂದ್ಯದ ಆರಂಭ ಮಾಡುವ ಮೂಲಕ ವಿಕೆಟ್ ಗಳಿಕೆಗೆ ಯೋಜನೆ ರೂಪಿಸಿದೆ.

ಕ್ಷಣಕ್ಷಣದ ಸ್ಕೋರ್:https://bit.ly/31skgzo

ಎರಡೂ ತಂಡಗಳು ಆಡಿರುವ ಎರಡು ಪಂದ್ಯಗಳಲ್ಲಿ ಒಂದು ಗೆದ್ದು, ಒಂದು ಸೋಲು ಕಂಡಿವೆ.ಟ್ರೆಂಟ್‌ಬ್ರಿಜ್‌ನಲ್ಲಿ ಪಾಕಿಸ್ತಾನದ ಎದುರು ಸೋಲನುಭವಿಸಿದ್ದರಿಂದ ಇಂಗ್ಲೆಂಡ್ ತಂಡಕ್ಕೆ ವಿಶ್ವಕಪ್ ಆರಂಭದಲ್ಲೇ ಎಚ್ಚರಿಕೆ ರವಾನೆಯಾಗಿದೆ. ಇಂಗ್ಲೆಂಡ್ 2015ರ ವಿಶ್ವಕಪ್‌ನಿಂದ ಹೊರಬೀಳಲು ಆಗ ಬಾಂಗ್ಲಾದೇಶ ತಂಡದ ಎದುರು ಅನುಭವಿಸಿದ ಸೋಲು ಕಾರಣವಾಗಿತ್ತು. ಇಯಾನ್ ಮಾರ್ಗನ್ ಬಳಗದ ಬ್ಯಾಟಿಂಗ್ ಬಲಿಷ್ಠವಾಗಿದ್ದು ಇದುವರೆಗೆ ಆಡಿರುವ ಎರಡೂ ಪಂದ್ಯಗಳಲ್ಲಿ 300ರ ಗಡಿ ದಾಟಿದೆ. ಆದರೆ ಬೌಲಿಂಗ್ ವಿಭಾಗವೇ ತಂಡದಲ್ಲಿ ಒಂದಿಷ್ಟು ಚಿಂತೆಯ ಗೆರೆಗಳನ್ನು ಮೂಡಿಸಿದೆ.

ಬಾಂಗ್ಲಾದೇಶ, ಓವಲ್‌ನಲ್ಲಿ ಈ ಹಿಂದೆ ಆಡಿರುವ ಎರಡೂ ಪಂದ್ಯಗಳಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದೆ. ದಕ್ಷಿಣ ಆಫ್ರಿಕ ವಿರುದ್ಧ 21 ರನ್‌ಗಳ ಗೆಲುವಿಗೆ ತಂಡದ ಬೌಲರ್‌ಗಳು ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಹದ್ದುಬಸ್ತಿನಲ್ಲಿಟ್ಟಿದ್ದು ಕಾರಣವಾಗಿತ್ತು.ಆದರೆ ಬ್ಯಾಟ್ಸ್‌ಮನ್‌ಗಳು ಉತ್ತಮ ಬುನಾದಿಯ ಮೇಲೆ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಈಗ ನಾಯಕ ಮಷ್ರಫೆ ಮೊರ್ತಾಜಾ, ಆರಂಭ ಮತ್ತು ಮಧ್ಯಮ ಕ್ರಮಾಂಕದ ಆಟಗಾರರಿಂದ ಉಪಯುಕ್ತ ಕೊಡುಗೆ ನಿರೀಕ್ಷಿಸಿದ್ದಾರೆ. ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಮಾತ್ರ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ತಂಡಗಳು:

ಇಂಗ್ಲೆಂಡ್: ಇಯಾನ್ ಮಾರ್ಗನ್ (ಕ್ಯಾಪ್ಟನ್), ಮೊಯಿನ್ ಆಲಿ, ಜೊಫ್ರಾ ಅರ್ಚರ್, ಜಾನಿ ಬೇಸ್ಟೊ, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಟಾಮ್ ಕರನ್, ಲಿಯಾಮ್ ಡಾಸನ್, ಲಿಯಾಮ್ ಪ್ಲಂಕೆಟ್, ಅದಿಲ್ ರಶೀದ್, ಜೋ ರೂಟ್, ಜೇಸನ್ ರಾಯ್, ಬೆನ್ ಸ್ಟೋಕ್ಸ್, ಜೇಮ್ಸ್ ವಿನ್ಸ್, ಕ್ರಿಸ್ ವೋಕ್ಸ್, ಮಾರ್ಕ್ ವುಡ್.

ಬಾಂಗ್ಲಾದೇಶ: ಮಷ್ರಫೆ ಮೊರ್ತಾಜಾ (ಕ್ಯಾಪ್ಟನ್), ಅಬು ಜಾಯೆದ್, ಲಿಟ್ಟನ್ ದಾಸ್ (ವಿಕೆಟ್ ಕೀಪರ್), ಮಹಮದುಲ್ಲಾ, ಮೆಹಿದಿ ಹಸನ್, ಮೊಹಮದ್ ಮಿಥುನ್, ಮೊಹಮದ್ ಸೈಫುದ್ದೀನ್, ಮೊಸಾದೆಕ್ ಹುಸೇನ್, ಮುಷ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮುಸ್ತಫಿಜುರ್ ರೆಹಮಾನ್, ರುಬೆಲ್ ಹೊಸೇನ್, ಶಬ್ಬೀರ್ ರೆಹಮಾನ್, ಶಕೀಬ್ ಅಲ್ ಹಸನ್, ಸೌಮ್ಯ ಸರ್ಕಾರ್, ತಮೀಮ್ ಇಕ್ಬಾಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.